More

    ಸಹಕಾರಿ ಸಂಸ್ಥೆಗಳಿಂದ ಗ್ರಾಮೀಣಾಭಿವೃದ್ಧಿ

    ಯಮಕನಮರಡಿ: ಗ್ರಾಮೀಣ ಪ್ರದೇಶದ ಅಭಿವೃದ್ಧಿಯಲ್ಲಿ ಸಹಕಾರಿ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಿವೆ ಎಂದು ದಿ.ಯಮಕನಮರಡಿ ಲಕ್ಷ್ಮೀ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿಯ ಸಂಸ್ಥಾಪಕ ರವೀಂದ್ರ ಜಿಂಡ್ರಾಳಿ ಹೇಳಿದ್ದಾರೆ.

    ಸ್ಥಳೀಯ ಬನಶಂಕರಿ ಕಾರ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ದಿ.ಯಮಕನಮರಡಿ ಲಕ್ಷ್ಮೀ ಅರ್ಬನ್ ಕ್ರೆಡಿಟ್ ಸೊಸೈಟಿಯ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದರು. ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಎಸ್.ವಿ. ಕೆಂಚಗಾರಟ್ಟಿ ಮಾತನಾಡಿ, ಸಂಸ್ಥೆಯು ಸುಮಾರು 28.70 ಕೋಟಿ ರೂ. ದುಡಿಯುವ ಬಂಡವಾಳ, ಸುಮಾರು 25 ಕೋಟಿ ರೂ. ಠೇವಣಿ ಹೊಂದುವ ಮೂಲಕ 19 ಕೋಟಿ ರೂ. ಸಾಲ ನೀಡಿದೆ ಎಂದರು.

    ಹುಕ್ಕೇರಿ ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ಗುಂಡಾಳಿ, ಸಂಸ್ಥೆಯ ಅಧ್ಯಕ್ಷ ಅಡಿವೆಪ್ಪ ಜಿಂಡ್ರಾಳಿ, ಶಿಕ್ಷಕ ರಂಜಾನ್ ನದಾಫ್, ನಿಂಗನಗೌಡ ಪಾಟೀಲ, ಸಮರ್ಥ ರವೀಂದ್ರ ಜಿಂಡ್ರಾಳಿ ಮಾತನಾಡಿದರು. ವಿವಿಧ ವಿಭಾಗದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘದ ನಿರ್ದೇಶಕ ಸೋಮಲಿಂಗ ಪಟೋಳಿ, ತಾಲೂಕು ಪಂಚಾಯಿತಿ ಅಧ್ಯಕ್ಷ ದಸ್ತಗೀರ್ ಬಸ್ಸಾಪುರಿ, ಸಂಸ್ಥೆಯ ಉಪಾಧ್ಯಕ್ಷ ಬಾಳಪ್ಪ ಮಲಾಜಿ, ಎಸ್.ಐ.ಅಮ್ಮಿನಬಾವಿ, ಎಂ.ಬಿ.ರೇವಣ್ಣವರ, ಎ.ಬಿ.ಪಾಟೀಲ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts