More

    ಹೂಡಿಕೆ ಹಣ ಹಿಂತಿರುಗಿಸುವಂತೆ ಕೋ-ಆಪರೇಟಿವ್ ಬ್ಯಾಂಕ್ ಠೇವಣಿದಾರ‌ರ ಪ್ರತಿಭಟನೆ

    ಬೆಂಗಳೂರು : ನಗರದ ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಮತ್ತು ಗುರುಸಾರ್ವಭೌಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಎಲ್ಲಾ ಠೇವಣಿದಾರರಿಗೆ ಹೂಡಿಕೆ ಹಣ ಹಿಂತಿರುಗಿಸುವಂತೆ ಆಗ್ರಹಿಸಿ ಬುಧವಾರ ಬ್ಯಾಂಕ್‌ನ ಠೇವಣಿದಾರ‌ರು ಪ್ರತಿಭಟನೆ ನಡೆಸಿದರು.

    ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವೈದ್ಯಕೀಯ ಘಟಕದ ಪ್ರಧಾನ ಕಾರ್ಯದರ್ಶಿ ಡಾ. ಶಂಕರ ಗುಹಾ ದ್ವಾರಕನಾಥ್ ಬೆಳ್ಳೂರ್ ನೇತೃತ್ವದಲ್ಲಿ ಎನ್.ಆರ್.ಕಾಲೋನಿಯಲ್ಲಿರುವ ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಮುಂದೆ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ನೂರಾರು ಠೇವಣಿದಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಕೋವಿಡ್‌ ಟೆಸ್ಟ್‌ಗೆ ಹೆದರಿ ರೈಲ್ವೆ ಸ್ಟೇಷನ್‌ ಗೋಡೆ ಹಾರಿ ಪರಾರಿ!

    ಈ ಕುರಿತು ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ದ್ವಾರಕನಾಥ್ ಬೆಳ್ಳೂರ್ ಅವರು, ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಮತ್ತು ಗುರುಸಾರ್ವಭೌಮ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಹಗರಣ ಬಯಲಿಗೆ ಬಂದು ಸುಮಾರು ಎರಡು ವರ್ಷಗಳಾಗಿವೆ. ಆದರೂ ಇದುವರೆಗೆ ಠೇವಣಿದಾರರಿಗೆ ಯಾವುದೇ ರೀತಿಯ ಪರಿಹಾರ ಸಿಕ್ಕಿರುವುದಿಲ್ಲ ಎಂದರು.

    ಬಹುತೇಕ ಠೇವಣಿದಾರರು ವಯೋವೃದ್ಧರಾಗಿದ್ದು, ಅವರ ಜೀವಮಾನವಿಡೀ ದುಡಿದು ಗಳಿಸಿ, ಉಳಿಸಿದ ಹಣವನ್ನು ಈ ಬ್ಯಾಂಕ್​ ಮತ್ತು ಸೊಸೈಟಿಯಲ್ಲಿ ಠೇವಣಿಯಾಗಿ ಇಟ್ಟಿದ್ದಾರೆ. ಆದರೆ ಬ್ಯಾಂಕ್ ಹಗರಣದಿಂದಾಗಿ ಈ ಹಣ ವಾಪಸ್ ಪಡೆಯಲಾಗುತ್ತಿಲ್ಲ. ಇದರಿಂದ ತೀವ್ರ ಸಂಕಷ್ಟಕ್ಕೊಳಗಾದ ಸುಮಾರು 50ಕ್ಕೂ ಹೆಚ್ಚು ಠೇವಣಿದಾರರು ಜೀವ ಕಳೆದುಕೊಂಡಿದ್ದಾರೆ. ಉಳಿದವರ ಬದುಕು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಇವರ ಸಂಕಷ್ಟವನ್ನು ಕಂಡರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಇವರ ನೆರವಿಗೆ ಬಾರದೆ, ತಮಗೆ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿರುವುದು ಖಂಡನೀಯ ಎಂದರು.

    ಇದನ್ನೂ ಓದಿ: ಬೆಂಗಳೂರು ಅರಮನೆ ಮೈದಾನಕ್ಕೆ ಹೋಗುವವರಿಗೆ ಹಾದಿ ಸುಗಮ- ಸುಸಜ್ಜಿತ ಸ್ಕೈವಾಕ್‌ಗೆ ಸಿಕ್ಕಿತು ಚಾಲನೆ

    ಪ್ರಕರಣ ಸಿಬಿಐಗೆ ವಹಿಸಿ : ಬ್ಯಾಂಕಿನಲ್ಲಿ ಸಣ್ಣ ಪ್ರಮಾಣದಲ್ಲಿ ಹೂಡಿಕೆ ಮಾಡಿದವರು ಹಾಗೂ ದೊಡ್ಡ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿದವರ ನಡುವೆ ತಾರತಮ್ಯ ಮಾಡಬಾರದು. ಪ್ರಕರಣವನ್ನು ಸಿಬಿಐಗೆ ವಹಿಸಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬ್ಯಾಂಕಿನ ಆಡಳಿತ ಮಂಡಳಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಪ್ರತಿಭಟನಾಕಾರರು ಮನವಿ ಮಾಡಿದರು.

    ಆಲ್ಫಾ, ಡೆಲ್ಟಾ ರೂಪಾಂತರಿಗಳ ಮೇಲೆ ಕೋವಾಕ್ಸಿನ್​ ಪರಿಣಾಮಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts