More

  ಜನರ ಸಹಕಾರದೊಂದಿಗೆ ದೇವಸ್ಥಾನಗಳಲ್ಲಿ ಸ್ವಚ್ಛತೆ ಕೈಗೊಳ್ಳಿ

  ಮಸ್ಕಿ: ಅಯೋಧ್ಯೆಯಲ್ಲಿ ಜ.22ರಂದು ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆಯ ಮೇರೆಗೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಬಿಜೆಪಿ ಕಾರ್ಯಕರ್ತರು, ಹಿಂದು ಸಮಾಜದ ಪ್ರಮುಖರು ಪಟ್ಟಣದ ಮಲ್ಲಿಕಾರ್ಜುನ ಹಾಗೂ ಭ್ರಮರಾಂಬ ದೇವಸ್ಥಾನಲ್ಲಿ ಮಂಗಳವಾರ ಸ್ವಚ್ಛತೆ ಕಾರ್ಯ ಕೈಗೊಂಡರು.

  ಕ್ಷೇತ್ರದ ಎಲ್ಲ ದೇವಸ್ಥಾನಗಳನ್ನು ಬಿಜೆಪಿ ಕಾರ್ಯಕರ್ತರು ಗ್ರಾಮದ ಜನರ ಸಹಕಾರದೊಂದಿಗೆ ಸ್ವಚ್ಛಗೊಳಿಸಬೇಕು. ಜ.22 ರಂದು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಂಜೆ ದೀಪ ಬೆಳಗಿಸಬೇಕೆಂದು ಪ್ರತಾಪಗೌಡ ಮನವಿ ಮಾಡಿದರು. ಪ್ರಮುಖರಾದ ಡಾ.ನಾಗನಗೌಡ, ಶಿವಕುಮಾರ್ ಎನ್., ಸಿದ್ಧಲಿಂಗಯ್ಯ ಸೊಪ್ಪಿಮಠ, ದೊಡ್ಡಪ್ಪ ಬುಳ್ಳಾ, ಲಕ್ಷ್ಮೀನಾರಾಯಣ ಶೆಟ್ಟಿ, ಡಾ.ಮಲ್ಲಿಕಾರ್ಜುನ, ಮಲ್ಲಯ್ಯ ಅಂಬಾಡಿ, ಮೌನೇಶ ನಾಯಕ, ಸುಮಂತ ಮಾನ್ವಿ, ಗೌರಿ ಚಂದ್ರಶೇಖರ, ಶಿವರಡ್ಡಿ ಅಚ್ಛಾ, ಸತ್ಯನಾರಾಯಣ ಶೆಟ್ಟಿ ಇಲ್ಲೂರು, ಕಾಳಪ್ಪ ಪತ್ತಾರ, ವಿನೋದ ಹಳ್ಳಿ, ಸೋಮಶೇಖರಯ್ಯ ಸಿರವಾರಮಠ ಇತರರು ಭಾಗವಹಿಸಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts