More

    ಸಿಲಿಂಡರ್ ದರ ಏರಿಕೆ ವಿರುದ್ಧ ಏಕಾಂಗಿ ಹೋರಾಟ ನಡೆಸಿದ ಹೋರಾಟಗಾರ

    ಭದ್ರಾವತಿ: ಅಡುಗೆ ಅನಿಲ ದರ ಏರಿಕೆ ಖಂಡಿಸಿ ಸೋಮವಾರ ಸಂಯುಕ್ತ ಜನತಾದಳ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್.ಗೌಡ ಅಂಡರ್​ಬ್ರಿಡ್ಜ್ ಬಳಿ ಸಿಲಿಂಡರ್ ಇಟ್ಟು ಏಕಾಂಗಿಯಾಗಿ ಉಪವಾಸ ಸತ್ಯಾಗ್ರಹ ನಡೆಸಿದರು.

    ಇದನ್ನೂ ಓದಿ: ರಾತ್ರೋರಾತ್ರಿ ಮಹಿಳೆ ಸೇರಿ ಮತ್ತಿಬ್ಬರು ಕಂಡವರ ಮನೆಯಲ್ಲಿ ಮಾಡಬಾರದ್ದನ್ನು ಮಾಡಲು ಹೋಗಿ ಸಿಕ್ಕಿಬಿದ್ರು!

    ಮಾರ್ಚ್​ನಲ್ಲಿ 550 ಇದ್ದ ಸಿಲಿಂಡರ್ ದರ ಡಿಸೆಂಬರ್​ಗೆ 708 ರೂ. ನಿಗದಿ ಮಾಡಲಾಗಿದೆ. ಇದರಿಂದಾಗಿ ದೇಶದಲ್ಲಿ ಬಡತನ ರೇಖೆಗಿತಲೂ ಕೆಳಗಿರುವ 20 ಕೋಟಿಗೂ ಹೆಚ್ಚು ಬಡವರಿಗೆ ಆರ್ಥಿಕವಾಗಿ ತೊಂದರೆಯಾಗಿದೆ. ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಪ್ರತಿದಿನವೂ ಪರಿಷ್ಕರಣೆ ಮಾಡುವಂತೆ ಕೇಂದ್ರ ಸರ್ಕಾರ ಸಿಲಿಂಡರ್ ಬೆಲೆಯಲ್ಲೂ ವಾರಕ್ಕೊಮ್ಮೆ ಪರಿಷ್ಕರಿಸಲು ಹೊರಟಿದ್ದು ತೈಲ ಕಂಪನಿ ಹಾಗೂ ಬಂಡವಾಳ ಶಾಹಿಗಳ ಒತ್ತಡಕ್ಕೆ ಮಣಿದಿರುವ ಸರ್ಕಾರ ಬಡ ನಾಗರಿಕರ ಮರಣ ಶಾಸನ ಬರೆಯಲು ಸಿದ್ಧವಾಗಿದೆ. ವಾರಕ್ಕೊಮ್ಮೆ, ದಿನಕ್ಕೊಮ್ಮೆ ದರ ಪರಿಷ್ಕರಣೆಯಾದರೆ ಸಿಲಿಂಡರ್ ಬೆಲೆ 1,200 ರೂ. ಆಗುವುದರಲ್ಲಿ ಅನುಮಾನವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

    ಇದನ್ನೂ ಓದಿ: ‘ಬಿಜೆಪಿಯ 121 ನಾಯಕರ ಹೆಸರನ್ನು ಇಡಿಗೆ ಕೊಡ್ತೇನೆ’ ನನ್ನ ಹೆಂಡತಿಯನ್ನು ಬಿಟ್ಟು, ಅವರನ್ನು ವಿಚಾರಿಸಲಿ ಎಂದ ಶಿವಸೇನೆ ನಾಯಕ

    ಕೇಂದ್ರ ಸರ್ಕಾರ ಈ ಕೂಡಲೇ 40 ಕೋಟಿಗೂ ಹೆಚ್ಚು ಬಡನಾಗರಿಕರು, ರೈತರು, ಸ್ಲಂ ನಿವಾಸಿಗಳ ನೆರವಿಗೆ ಧಾವಿಸಬೇಕೆಂದು ಪಕ್ಷದ ಪರವಾಗಿ ಒತ್ತಾಯಿಸಲಾಗುವುದು. ಇಲ್ಲವಾದಲ್ಲಿ ಶಾಂತಿಯುತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.

    2021 ಇನ್ನೂ ಭೀಕರವಾಗಿರುತ್ತೆ! ಬಲ್ಗೇರಿಯನ್ ನಿಗೂಢ ಮಹಿಳೆ ಬಾಬಾ ವಂಗಾ ಭವಿಷ್ಯ!

    PHOTO GALLERY: ರಮೇಶ್​ ಅರವಿಂದ್​ ಮಗಳ ಮದುವೆ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts