More

    ಮಂಗಳೂರು ಉಗ್ರ ಬರಹ – ಇರಾನ್, ಇರಾಕ್​ಗಳ ಬರಹಕ್ಕೆ ಸಾಮ್ಯತೆ!

    ಮಂಗಳೂರು: ರಾಜ್ಯದಲ್ಲಿ ಆಮಿಷ, ಬಲವಂತದ ಮತಾಂತರ, ಲವ್‌ ಜಿಹಾದ್‌ ಹತ್ತಿಕ್ಕುವುದಕ್ಕಾಗಿ ಮತಾಂತರ ನಿಷೇಧ ಕಾಯ್ದೆ ಜಾರಿಯಾಗುವುದು ನಿಶ್ಚಿತ, ಆ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

    ಇಲ್ಲಿನ ಪಣಂಬೂರಿನಲ್ಲಿ ನೂತನ ಪೊಲೀಸ್‌ ವಸತಿಗೃಹಗಳನ್ನು ಗುರುವಾರ ಉದ್ಘಾಟಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇಂತಹ ಲವ್‌ ಜಿಹಾದ್‌ ಕೃತ್ಯಗಳು ನಡೆಯುತ್ತಿವೆ, ಲವ್‌ ಜಿಹಾದ್‌ ಎನ್ನುವುದರ ವ್ಯಾಖ್ಯಾನ ಕೋರ್ಟ್‌ನಲ್ಲೂ ಆಗಿದೆ, ಲವ್‌ ಜಿಹಾದ್‌ ತಡೆಗೆ ಸಮಗ್ರ ಕಾನೂನು ತರುತ್ತೇವೆ ಎಂದರು.

    ಹಿಂದೆ ವರದಕ್ಷಿಣೆ ಇತ್ತು, ವರದಕ್ಷಿಣೆ ನಿಷೇಧ ಕಾಯ್ದೆ ಇರಲಿಲ್ಲ, ಅದೊಂದು ಪಿಡುಗು ಎಂದು ಬಳಿಕ ಕಾನೂನು ತರಲಾಗಿದೆ, ಅದೇ ರೀತಿ ಲವ್‌ ಜಿಹಾದ್‌ ಎನ್ನುವುದು ಒಂದು ಪಿಡುಗು, ಅದರ ವಿರುದ್ಧ ವಿವಿಧ ರಾಜ್ಯಗಳು ಕಾನೂನು ತರುತ್ತಿವೆ, ಉತ್ತರ ಪ್ರದೇಶದಲ್ಲಿ ಕಾನೂನು ಬಂದಿದೆ, ಮಧ್ಯಪ್ರದೇಶದಲ್ಲೂ ಆ ಬಗ್ಗೆ ಯೋಜನೆ ಇದೆ, ಹರ್ಯಾಣಾದಲ್ಲಿ ಆ ಕುರಿತು ಸಮಿತಿ ರಚಿಸಿದ್ದಾರೆ. ನಾವೂ ಕಾನೂನು ತರುವುದು ನಿಶ್ಚಿತವೆಂದರು.

    ಗೋಡೆ ಬರಹ, ಶೀಘ್ರ ಆರೋಪಿಗಳ ಸೆರೆ

    ಮಂಗಳೂರಿನ ಎರಡು ಕಡೆಗಳಲ್ಲಿ ಉಗ್ರ ಪರವಾದ ಗೋಡೆಬರಹ ಅಥವಾ ಗ್ರಾಫಿಟಿ ಕಂಡು ಬಂದಿರುವ ಕುರಿತು ಪೊಲೀಸರು ಸಾಕಷ್ಟು ಮಾಹಿತಿ ಕಲೆ ಹಾಕಿದ್ದು ಶೀಘ್ರ ಆರೋಪಿಗಳನ್ನು ಬಂಧಿಸಲಿದ್ದಾರೆ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

    ಇಂತಹ ಗ್ರಾಫಿಟಿಗಳನ್ನು ಉಗ್ರ ಚಟುವಟಿಕೆಗೆ ಮುನ್ನ ಕಾಶ್ಮೀರ ಅಲ್ಲದೆ ಇರಾನ್‌, ಇರಾಕ್‌ನಂತಹ ದೇಶಗಳಲ್ಲೂ ಬರೆಯುವುದಿದೆ, ಅದೇ ಮಾದರಿಯಲ್ಲಿ ಮಂಗಳೂರಿನಲ್ಲಿ ಬರೆದಿದ್ದಾರೆ, ಈ ಪ್ರಕರಣವನ್ನು ಶೀಘ್ರ ಭೇದಿಸುತ್ತೇವೆ. ನಗರದಲ್ಲಿ ರಾತ್ರಿ ಪೊಲೀಸ್‌ ಬೀಟ್‌ ಹೆಚ್ಚಿಸಬೇಕು, ಡಿಸಿಪಿ ಶ್ರೇಣಿಯ ಅಧಿಕಾರಿಗಳೂ ರೌಂಡ್ಸ್‌ ಕೈಗೊಳ್ಳಬೇಕು, ಸಿಸಿಟಿವಿ ಕಣ್ಗಾವಲು ಇನ್ನಷ್ಟು ಬಲಪಡಿಸುವಂತೆ ಸೂಚನೆ ನೀಡಲಾಗಿದೆ ಎಂದೂ ತಿಳಿಸಿದರು.

    ರಾಜ್ಯದಲ್ಲಿ ಸೈಬರ್‌ ಕ್ರೈಂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರಲ್ಲಿ ಆ ಕುರಿತ ಕೌಶಲ್ಯ ಹೆಚ್ಚಿಸಬೇಕು, ಅದಕ್ಕೆ ಪೂರಕವಾಗಿ ಐಟಿ ತಜ್ಞ ಪದವೀಧರರನ್ನೂ ನೇಮಕ ಮಾಡಿಕೊಳ್ಳುತ್ತೇವೆ, ತಾತ್ಕಾಲಿಕ ನೆಲೆಯಲ್ಲಿ ಮಂಗಳೂರಿನಲ್ಲೂ ನೇಮಕ ಮಾಡಿಕೊಳ್ಳಲಾಗಿದೆ ಎಂದು ಬೊಮ್ಮಾಯಿ ವಿವರಿಸಿದ್ದಾರೆ.

    ಉಗ್ರ ಗೋಡೆ ಬರಹ, ಓರ್ವನ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts