More

    ಸಮಾಜಕ್ಕೆ ಉತ್ತಮ ಕೊಡುಗೆ ನೀಡಿ

    ಸಮಾಜಕ್ಕೆ ಉತ್ತಮ ಕೊಡುಗೆ ನೀಡಿ

    ಚಿತ್ರದುರ್ಗ: ಕೌಶಲಗಳನ್ನು ವೃದ್ಧಿಸಿಕೊಂಡರೆ ಸ್ವತಃ ಪ್ರಾಜೆಕ್ಟ್‌ಗಳನ್ನು ಸಿದ್ಧಪಡಿಸ ಬಹುದೆಂದು ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ‌್ಯ ಡಾ.ಪಿ.ಬಿ.ಭರತ್ ಹೇಳಿದರು.

    ನಗರದಲ್ಲಿ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ವಿಭಾಗ ಸೋಮವಾರದಿಂ ದ ಆಯೋಜಿಸಿರುವ 2 ದಿನಗಳ‘ಟೋನರ್ ವರ್ಗಾವಣೆ ವಿಧಾನ ಬಳಕೆಯೊಂದಿಗೆ ಸರ್ಕ್ಯೂಟ್ ವಿನ್ಯಾಸ’ಕುರಿತ ಕಾರ‌್ಯಾಗಾರ ಉದ್ಘಾಟಿಸಿ ಮಾತನಾಡಿ,ಉಪಯುಕ್ತ ಪ್ರಾಜೆಕ್ಟ್‌ಗಳನ್ನು ತಯಾರಿಸುವ ಮೂಲಕ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

    ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಡಾ.ಕೆ.ಬಿ.ಸಿದ್ದೇಶ್ ಮಾತನಾಡಿ,ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ಕೌಶಲಗಳನ್ನು ಹೆಚ್ಚಿಸಿಕೊಳ್ಳಲು ಈ ಕಾರ‌್ಯಾಗಾರ ಅನುಕೂಲವಾಗಲಿದೆ. ಪಠ್ಯದೊಂದಿಗೆ ಕೌಶಲಾಭಿವೃದ್ಧಿ ಕಡೆಗೂ ವಿದ್ಯಾರ್ಥಿಗಳು ಗಮನ ಹರಿಸಬೇಕೆಂದರು. ಸಂಪನ್ಮೂಲ ವ್ಯಕ್ತಿ ರಾಕೇಶ್,ಕಾರ‌್ಯಕ್ರಮ ಸಂಚಾಲಕರಾದ ಪ್ರೊ.ಟಿ.ಬಿ.ಲವಕುಮಾರ್,ಪ್ರೊ.ಟಿ.ತನುಜಾ ಮತ್ತಿತರರು ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts