More

    ಸತತ ಐದನೇ ದಿನ ಕರೊನಾ ನೆಗೆಟಿವ್

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತ ಐದನೇ ದಿನವೂ ಹೊಸ ಕೊವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ.
    ಇದುವರೆಗೆ ಜಿಲ್ಲೆಯಲ್ಲಿ 38,813 ಮಂದಿಯನ್ನು ತಪಾಸಣೆಗೊಳಪಡಿಸಿದ್ದು, ಗುರುವಾರ 92 ಮಂದಿಯ ಸ್ಕ್ರೀನಿಂಗ್ ಮಾಡಲಾಗಿದೆ. 3352 ಮಂದಿ ಮನೆಯಲ್ಲೇ ಕ್ವಾರಂಟೈನ್‌ನಲ್ಲಿದ್ದಾರೆ. ಇಎಸ್‌ಐಯಲ್ಲಿ 12 ಮಂದಿಯಿದ್ದಾರೆ. 2594 ಮಂದಿ 28 ದಿನಗಳ ಕ್ವಾರಂಟೈನ್ ಪೂರ್ತಿಗೊಳಿಸಿದ್ದಾರೆ.

    ಗುರುವಾರ 24 ಗಂಟಲದ್ರವ ಮಾದರಿಗಳನ್ನು ವೆನ್ಲಾಕ್‌ನಲ್ಲಿರುವ ಲ್ಯಾಬ್‌ಗೆ ಟೆಸ್ಟ್‌ಗೆ ಕಳುಹಿಸಲಾಗಿದ್ದು, ಸಿಕ್ಕಿರುವ ಎಲ್ಲ 8 ವರದಿಗಳೂ ನೆಗೆಟಿವ್ ಆಗಿವೆ. ಇದುವರೆಗೆ ಒಟ್ಟು 381 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಜಿಲ್ಲೆಯಲ್ಲಿ ಫಿವರ್ ಕ್ಲಿನಿಕ್‌ಗಳು ಕಾರ್ಯಾರಂಭಿಸಿದ್ದು ಈವರೆಗೆ 36 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಕೋವಿಡ್ ಪಾಸಿಟಿವ್ ಸಿಕ್ಕಿಲ್ಲ. ಆದಷ್ಟೂ ಹೊರಗಡೆಯಲ್ಲಿ ಸಾರ್ವಜನಿಕರ ಸಂಪರ್ಕದಲ್ಲಿರುವಾಗ ಜನರು ಮಾಸ್ಕ್ ಧರಿಸುವ ಮೂಲಕ ಸೋಂಕಿನಿಂದ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಉಡುಪಿಯಲ್ಲಿ 11 ವರದಿ ನೆಗೆಟಿವ್: ಉಡುಪಿ ಜಿಲ್ಲಾಡಳಿತ ಗುರುವಾರ ಸ್ವೀಕರಿಸಿದ ಎಲ್ಲ 11 ಶಂಕಿತ ಕರೊನಾ ಪ್ರಕರಣಗಳ ವರದಿ ನೆಗೆಟಿವ್ ಬಂದಿದೆ. ಗುರುವಾರ ಮತ್ತೆ 4 ಮಹಿಳೆಯರು, 9 ಪುರುಷರು ಸೇರಿ 13 ಮಂದಿ ಐಸೋಲೇಷನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಇನ್ನೂ 33 ಮಂದಿಯ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ. ಗುರುವಾರಕ್ಕೆ 92 ಮಂದಿ 28 ದಿನದ ಕ್ವಾರಂಟೈನ್ ಪೂರೈಸಿದ್ದಾರೆ. ಐಸೋಲೇಷನ್ ವಾರ್ಡ್‌ನಿಂದ 4 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆ ಕ್ವಾರಂಟೈನ್‌ನಿಂದ 36 ಮಂದಿ ಗುರುವಾರ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ದೆಹಲಿಗೆ ಹೋಗಿದ್ದ ವ್ಯಕ್ತಿಗೆ ನೆಗೆಟಿವ್: ದೆಹಲಿಗೆ ಹೋಗಿ ಬಂದಿರುವ ಗಂಗೊಳ್ಳಿಯ ವ್ಯಕ್ತಿಯೋರ್ವರ ರಕ್ತ ಪರೀಕ್ಷೆ ವರದಿಯಲ್ಲಿ ಕರೊನಾ ನೆಗೆಟಿವ್ ಬಂದಿದ್ದು, ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಗಂಗೊಳ್ಳಿಯ 45 ವರ್ಷ ಪ್ರಾಯದ ವ್ಯಕ್ತಿಯನ್ನು ಕಳೆದ ಶನಿವಾರ ಕುಂದಾಪುರದ ಹೋಮ್ ಕ್ವಾರಂಟೈನ್‌ಗೆ ದಾಖಲಿಸಿ, ಇವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಪರೀಕ್ಷೆಯಲ್ಲಿ ನೆಗೆಟಿವ್ ಬಂದಿರುವುದರಿಂದ ಕಳೆದ ಎರಡು ದಿನಗಳ ಹಿಂದೆ ಇವರನ್ನು ಹೋಮ್ ಕ್ವಾರಂಟೈನ್‌ನಿಂದ ಬಿಡುಗಡೆ ಮಾಡಲಾಗಿದೆ. ವಿದೇಶದಿಂದ ಬಂದಿರುವ ಹೋಮ್ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳ ಪರೀಕ್ಷಾ ವರದಿ ಕೂಡ ನೆಗೆಟಿವ್ ಬಂದಿದೆ. ಗಂಗೊಳ್ಳಿಯಲ್ಲಿ ಈವರೆಗೆ ಪಾಸಿಟಿವ್ ವರದಿ ಬಂದಿಲ್ಲ. ಹೋಮ್ ಕ್ವಾರಂಟೈನ್‌ನಲ್ಲಿ ಇದ್ದವರಿಗೆ ಕೆಲ ದಿನ ಕಾಲ ಮನೆಯಲ್ಲೇ ಇರುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

    10 ಸಾವಿರ ಮಂದಿ ಮೇಲೆ ನಿಗಾ
    ಕಾಸರಗೋಡು: ಕೇರಳ ರಾಜ್ಯದಲ್ಲಿ ಗುರುವಾರ ಹೊಸದಾಗಿ 12 ಮಂದಿಯಲ್ಲಿ ಕೊವಿಡ್-19 ಖಚಿತಗೊಂಡಿದೆ. ಕಾಸರಗೋಡು, ಕಣ್ಣೂರು ಜಿಲ್ಲೆಯಲ್ಲಿ ತಲಾ ನಾಲ್ವರು, ಮಲಪ್ಪುರಂನಲ್ಲಿ ಇಬ್ಬರು, ತಿರುವನಂತಪುರ ಹಾಗೂ ಕೊಲ್ಲಂ ಜಿಲ್ಲೆಯಲ್ಲಿ ತಲಾ ಒಬ್ಬರಲ್ಲಿ ವೈರಸ್ ಕಾಣಿಸಿಕೊಂಡಿದೆ. ಕಾಸರಗೋಡಲ್ಲಿ 10746 ಮಂದಿ ನಿಗಾದಲ್ಲಿದ್ದು, 10474 ಮಂದಿ ಮನೆಗಳಲ್ಲಿ ಹಾಗೂ 272 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ.
    ಕೇರಳ ರಾಜ್ಯದಲ್ಲಿ ಸೋಂಕು ಪೀಡಿತರ ಸಂಖ್ಯೆ 357ಕ್ಕೇರಿದ್ದು, 258ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ. 1,36,195 ಮಂದಿ ನಿಗಾದಲ್ಲಿದ್ದು, 1,35,472 ಮಂದಿ ಮನೆ, 723 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಗುರುವಾರ 153 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 12710 ಮಂದಿಯ ಮಾದರಿ ತಪಾಸಣೆಗೆ ಕಳುಹಿಸಲಾಗಿದ್ದು, 11469ಮಂದಿಯ ವರದಿ ನೆಗೆಟಿವ್ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts