More

    ನರಗುಂದದಲ್ಲಿ ಮುಂದುವರಿದ ಪ್ರತಿಭಟನೆ

    ನರಗುಂದ: ಬಾಲಕಿ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪಟ್ಟಣದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ನಿತ್ಯ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯುತ್ತಿದೆ. ಬುಧವಾರ ಸ್ವಯಂ ಘೊಷಿತ ಬಂದ್ ಆಚರಿಸಲಾಯಿತು.

    ಪಟ್ಟಣದ ಶಿವಾಜಿ ವೃತ್ತದಲ್ಲಿ ತಾಲೂಕು ಯುವ ಕಾಂಗ್ರೆಸ್, ಎನ್​ಎಸ್​ಯುುಐ, ದಲಿತ ಸಂಘರ್ಷ ಸಮಿತಿ, ಕನ್ನಡಪರ ಸಂಘಟನೆ, ರೈತ ಸಂಘದ ನೇತೃತ್ವದಲ್ಲಿ ವಿವಿಧ ಶಾಲಾ ಕಾಲೇಜ್​ಗಳ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿ, ಕೊಲೆ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿದರು.

    ಎನ್​ಎಸ್​ಯುುಐ ಜಿಲ್ಲಾಧ್ಯಕ್ಷ ಅಹ್ಮದಹುಸೇನ ಖಾಜಿ ಮಾತನಾಡಿ, ಬಾಲಕಿ ಕೊಲೆ ಪ್ರಕರಣದಲ್ಲಿ ಮೂರ್ನಾಲ್ಕು ಜನರ ಹೆಸರು ಕೇಳಿ ಬಂದಿವೆ. ಇದರಲ್ಲಿ ಸದ್ದಾಂ ಬೆಟಗೇರಿ ಎಂಬಾತನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳನ್ನು ಕೂಡಲೆ ಪತ್ತೆ ಹಚ್ಚಿ ಶಿಕ್ಷೆ ವಿಧಿಸಬೇಕು. ಬಾಲಕಿ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಿ ಸರ್ಕಾರದಿಂದ ಆರ್ಥಿಕ ನೆರವು ನೀಡಬೇಕು ಎಂದು ಆಗ್ರಹಿಸಿದರು.

    ಪುರಸಭೆ ಮಾಜಿ ಸದಸ್ಯ ವಾಸು ಜೋಗಣ್ಣವರ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವೀರೇಶ ಚುಳಕಿ, ವಿಜಯ ಚಲವಾದಿ, ಚನ್ನು ನಂದಿ, ಬಸವರಾಜ ಸಾಬಳೆ ಮಾತನಾಡಿದರು.

    ಶಿರಸ್ತೇದಾರ ಆರ್.ಎಚ್. ನಿಲೋಗಲ್ ಮೂಲಕ ಮುಖ್ಯಮಂತ್ರಿ, ಪ್ರಧಾನಮಂತ್ರಿ ಹಾಗೂ ಗೃಹ ಸಚಿವವರಿಗೆ ವಿವಿಧ ಸಂಘಟನೆಗಳಿಂದ ಪ್ರತ್ಯೇಕ ಮನವಿ ಸಲ್ಲಿಸಲಾಯಿತು. ಪುನೀತ ಜೋಗಣ್ಣವರ, ದತ್ತು ಜೋಗಣ್ಣವರ, ಗೋಪಾಲ ದ್ಯಾವಣ್ಣವರ, ಉಮೇಶ ಕಾಳೆ, ಕೃಷ್ಣಪ್ಪ ದೊಡಮನಿ, ಶಿವಾನಂದ ಪೂಜಾರ, ನಬಿಸಾಬ ಕಿಲ್ಲೇದಾರ, ಪ್ರವೀಣ ವಡ್ಡರ, ಶ್ರೀಕಾಂತ ಜೋಗಣ್ಣವರ, ಹನುಮರಡ್ಡಿ ರಿತ್ತಿ, ರಾಘವೇಂದ್ರ ನಲವಡೆ, ವಿಷ್ಣು ಸಾಠೆ, ಐ.ಪಿ. ಚಂದೂನವರ, ಪ್ರಕಾಶ ಹಡಗಲಿ, ಕಿರಣ ಮಾನೆ, ಉಮಾ ದ್ಯಾವನೂರ, ತೇಜಸ್ವಿನಿ ಮಾನೆ, ಮೌಲಾಸಾಬ ಅರಬಜಮಾದಾರ, ವೆಂಕಟೇಶ ಮೇಟಿ, ಅಭಿಷೇಕ ತೋಡಕರ, ಪ್ರಕಾಶ ಹಡಗಲಿ, ರವಿ ಚಲವಾದಿ, ರಾಘವೇಂದ್ರ ವಾಸನ, ಪ್ರವೀಣ ಬೇವಿನಗೀಡದ, ನವೀನಕುಮಾರ ಜೋಗಣ್ಣವರ, ಮಂಜುನಾಥ ದೊಡಮನಿ ಇತರರಿದ್ದರು.

    ಸಹೋದರಿ ಶಿಕ್ಷಣಕ್ಕೆ ನೆರವು

    ಬಾಲಕಿ ಮನೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಅವಿನಾಶ ಗೋಡಖಿಂಡಿ ಭೇಟಿ ನೀಡಿ ಪಾಲಕರಿಗೆ ಸಾಂತ್ವನ ಹೇಳಿದರು.

    ‘ಘಟನೆ ಕುರಿತು ಬೆಳಗಾವಿ, ರಾಮದುರ್ಗ, ನರಗುಂದದ ತಹಸೀಲ್ದಾರ್, ಡಿವೈಎಸ್ಪಿ, ಎಸ್ಪಿ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ಕೊಲೆಯಾಗಿರುವ ಬಾಲಕಿಯ ಹಿರಿಯ ಸಹೋದರಿಯ ಶಿಕ್ಷಣಕ್ಕೆ ಇಲಾಖೆಯಿಂದ ಎಲ್ಲ ರೀತಿಯ ಅನುಕೂಲ ಮಾಡಿಕೊಡಲಾಗುವುದು. ಪೋಕ್ಸೋ ಕಾಯ್ದೆಯಡಿ ಬಾಲಕಿ ಕುಟುಂಬಕ್ಕೆ ಇಲಾಖೆಯಿಂದ 5 ಸಾವಿರ ರೂಪಾಯಿ ಆರ್ಥಿಕ ಸಹಾಯ ಮಾಡಲಾಗುವುದು’ ಎಂದು ಅವಿನಾಶ ಗೋಡಖಿಂಡಿ ತಿಳಿಸಿದರು.

    ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೂಪಾ ಗಂಧದ, ಡಿವೈಎಸ್ಪಿ ಶಂಕರ ರಾಗಿ, ಎಎಸ್​ಐ ವಿ.ಜಿ. ಪವಾರ, ಬಸಮ್ಮ ಗುಡಿಕಾರ, ಅನ್ನಪೂರ್ಣ ಗಾಣಿಗೇರ, ಲೀಲಕ್ಕ ಹಸಬಿ, ರೂಪಾ ಉಪ್ಪಿನ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts