More

    ಮುಗಿಯದ ಲಗ್ನಕ್ಕೆ ಮುಂಗಡ ವಿಘ್ನ!

    ಬೆಳಗಾವಿ: ಲಾಕ್‌ಡೌನ್ ಮೇ 3ರವರೆಗೆ ಮುಂದುವರಿದಿದ್ದು, ಏಪ್ರಿಲ್ ಅಂತ್ಯದಲ್ಲಾದರೂ ಮದುವೆ ಮಾಡೋಣ ಎಂದು ಸಿದ್ಧತೆ ನಡೆಸಿದ್ದವರಿಗೆಲ್ಲ ತೊಂದರೆ ತಂದೊಡ್ಡಿದೆ. ಪರಿಸ್ಥಿತಿ ಮೊದಲಿನಂತಾಗಲೂ ಅನೇಕ ವಾರಗಳೇ ಬೇಕು ಎಂಬುದನ್ನರಿತ ಜನತೆ, ಮನೆಯಂಗಳದಲ್ಲೇ ಸರಳ ವಿವಾಹಗಳಿಗೆ ಮೊರೆ ಹೋಗುತ್ತಿದ್ದಾರೆ. ಈಗಾಗಲೇ ಮದುವೆಗೆಂದು ಕಲ್ಯಾಣ ಮಂಟಪ, ೆಟೋಗ್ರಾರ್ ಹಾಗೂ ಅಡುಗೆಯವರಿಗೆ ನೀಡಿದ್ದ ಮುಂಗಡ ವಾಪಸ್ ನೀಡುವಂತೆ ದುಂಬಾಲು ಬಿದ್ದಿದ್ದಾರೆ.

    ಕೆಲವರು ನಿಶ್ಚಯವಾಗಿದ್ದ ಲಗ್ನವನ್ನು ಮುಂದಿನ ವರ್ಷಕ್ಕೆ ಮುಂದೂಡಿದರೆ, ಕೆಲವೆಡೆ ಗುಟ್ಟು ಗುಟ್ಟಾಗಿಯೇ ಶುಭ ಕಾರ್ಯಗಳು ಮುಗಿಯುತ್ತಿವೆ. ಮದುವೆ ಮುಗಿದರೂ, ನಿಶ್ಚಿಯಿಸಿದ್ದ ಕಲ್ಯಾಣ ಮಂಟಪಕ್ಕೆ ಕೊಟ್ಟ ಹಣ ವಾಪಸ್ ಕೊಡುತ್ತಿಲ್ಲ ಎನ್ನುವುದು ವಧು-ವರರ ಹೆತ್ತವರ ದೂರು. ಮುಂದಿನ ದಿನಾಂಕಕ್ಕೆ ಅದೇ ಹಣಕ್ಕೆ ಕಲ್ಯಾಣ ಮಂಟಪ ಬಿಟ್ಟುಕೊಡುವುದಾಗಿ ಮಾಲೀಕರು ಷರತ್ತು ಹಾಕಿದರೂ, ‘ಮುಂದಿನ ಪರಿಸ್ಥಿತಿ ಯಾರಿಗೆ ಗೊತ್ತು. ಈಗ ಹಣ ಹಿಂದುರಿಗಿಸಿ’ ಎಂದು ಪಾಲಕರು ಒತ್ತಡ ಹೇರುತ್ತಿದ್ದಾರೆ.

    ಅಕೌಂಟ್‌ಗೆ ಹಣ ಹಾಕಿ: ಮದುವೆ, ಆರತಕ್ಷತೆ ಹಾಗೂ ಗೃಹಪ್ರವೇಶಕ್ಕೆಂದು ಮುಂಗಡ ಹಣ ಪಡೆದಿರುವ ಛಾಯಾಗ್ರಾಹಕರು ಲಾಕ್‌ಡೌನ್ ಅವಧಿಯಲ್ಲಿ ಬರಲಾಗುವುದಿಲ್ಲ ಎಂಬುದನ್ನರಿತವರು, ‘ಸರಳವಾಗಿ ಮನೆಯಲ್ಲಿಯೇ ಮದುವೆ ಮಾಡುತ್ತಿದ್ದೇವೆ ಬನ್ನಿ. ಬರಲಾಗದಿದ್ದರೆ ನಮ್ಮ ಮುಂಗಡ ಹಣ ಹಿಂತಿರುಗಿಸಿ’ ಎಂದು ಆನ್‌ಲೈನ್ ಪೇಮೆಂಟ್‌ಗೆ ಅಕೌಂಟ್ ನಂಬರ್ ಕಳುಹಿಸಿ, ಒತ್ತಾಯಿಸುತ್ತಿದ್ದಾರೆ.

    ವಿಶ್ವಾಸ ಕಳೆದುಕೊಳ್ಳುವ ಭಯ

    ಮನೆಯಲ್ಲಿ ಯಾವುದೇ ಸಂಭ್ರಮ ಇದ್ದರೂ ನಿಮ್ಮಲ್ಲಿಯೇ ಆರ್ಡರ್ ಮಾಡಿರುತ್ತೇವೆ. ಈಗ ಕಾರ್ಯಕ್ರಮ ರದ್ದಾಗಿದೆ. ಅಡ್ವಾನ್ಸ್ ವಾಪಸ್ ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ. ಅಗತ್ಯ ಪದಾರ್ಥಗಳ ತಯಾರಿಕೆಗೆ ಬೇಕಾದ ದಿನಸಿ ಸಾಮಗ್ರಿಗಳನ್ನು ಸಾಕಷ್ಟು ಖರೀದಿಸಿದ್ದರಿಂದ ಅವರಿಗೆ ನೀಡಲು ಹಣ ಇಲ್ಲ. ಹಿಂದಿರುಗಿಸದಿದ್ದರೆ ಕಾಯಂ ಗ್ರಾಹಕರ ವಿಶ್ವಾಸ ಕಳೆದುಕೊಳ್ಳುವ ಆತಂಕವಿದೆ. ಇದರಿಂದ ದಿಕ್ಕು ತೋಚದಂತಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಸುಜಾತಾ ಕ್ಯಾಟರ್ಸ್‌ ಮಾಲೀಕರು.

    ಮಕ್ಕಳ ಮದುವೆಗೆ ಸಾಲ ಮಾಡಿದ್ದರಿಂದ ನೆಮ್ಮದಿಯೂ ಇಲ್ಲ, ಮದುವೆ ಸಡಗರವೂ ಇಲ್ಲ. ಪಾವತಿಸಿದ ಮುಂಗಡ ಹಣವನ್ನು ಸಂಪೂರ್ಣವಾಗಿ ಹಿಂತಿರುಗಿಸುವಂತೆ ಕಲ್ಯಾಣ ಮಂಟಪಗಳ ಮಾಲೀಕರಿಗೆ ಸರ್ಕಾರ ನಿರ್ದೇಶನ ನೀಡಬೇಕು.
    | ಮಲ್ಲಯ್ಯ ಮಠಪತಿ ಗೋಕಾಕ ನಿವಾಸಿ

    | ರವಿ ಗೋಸಾವಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts