More

    ಗ್ರಾಹಕರ ಸಹಕಾರದಿಂದ ಪ್ರಗತಿ

    ಬೈಲಹೊಂಗಲ: ಗ್ರಾಹಕರ ಸಹಕಾರದಿಂದ ಕಿತ್ತೂರ ರಾಣಿ ಚನ್ನಮ್ಮ ಸೌಹಾರ್ದ ಸಹಕಾರಿಯು ಪ್ರಸಕ್ತ ಸಾಲಿನಲ್ಲಿ 1,73 ಕೋಟಿ ರೂ. ನಿವ್ವಳ ಲಾಭ ಗಳಿಸಿ ಪ್ರಗತಿಯತ್ತ ಸಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ವಿ.ಎಸ್. ಸಾಧುನವರ ಹೇಳಿದರು. ಪಟ್ಟಣದ ಪ್ರೇರಣಾ ಶಾಲೆ ಆವರಣದಲ್ಲಿ ಶುಕ್ರವಾರ ಜರುಗಿದ ಸಹಕಾರಿಯ 29 ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರಿಯು ಈ ವರ್ಷದಲ್ಲಿ 1,59,416 ಸದಸ್ಯರನ್ನು ಹೊಂದಿದೆ. ಸುಮಾರು 2 ಕೋಟಿ ರೂ. ಶೇರು ಬಂಡವಾಳದೊಂದಿಗೆ 640 ಕೋಟಿ ರೂ. ಠೇವು ಸಂಗ್ರಹಿಸಿ, 590 ಕೋಟಿ ರೂ. ಸಾಲ ವಿತರಣೆ ಮಾಡಿದ್ದು, 686 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ ಎಂದರು. ಎಸ್‌ಎನ್‌ವಿವಿಎಸ್ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಚಂದ್ರಶೇಖರ ಸಾಧುನವರ, ಬಸವಪ್ರಭು ಬೆಳಗಾವಿ, ಉಪಾಧ್ಯಕ್ಷ ಎಂ.ಜಿ. ಪಾಟೀಲ, ನಿರ್ದೇಶಕರಾದ ಅರವಿಂದ ಕಲಕುಟಕರ, ಬೊಮ್ಮನಾಯ್ಕ ಪಾಟೀಲ, ಎಸ್.ಎಸ್. ಪಾಟೀಲ, ಬಾಬು ಹರಕುಣಿ, ಕಿರಣ ಸಾಧುನವರ, ವಿಶ್ವನಾಥ ದೇಶನೂರ, ಶಿವಪುತ್ರಪ್ಪ ತಟವಾಟಿ, ಡಾ. ಎನ್.ಎಂ.ಪಾಟೀಲ, ಎಸ್.ಪಿ. ತಟವಟಿ, ಎಸ್.ಎಸ್. ಹೊಸಮನಿ, ಆರ್.ಬಿ. ರಾಮಣ್ಣವರ, ಸಿಇಒ ಮಲ್ಲಿಕಾರ್ಜುನ ಸಾಲಿಮಠ, ಅಢಾವೆ ಪತ್ರಿಕೆ, ಶ್ರೀದೇವಿ ಹುಂಬಿ, ಮಹಾಂತೇಶ ಕಾರಜೋಳ, ಮಲ್ಲಪ್ಪ ಹರಕುಣಿ, ಬಸವರಾಜ ಸಂಗಪ್ಪನವರ, ಮಹೇಶ ಅಂಗಡಿ, ರಾಜೇಶ್ವರಿ ಬಾಗೇವಾಡಿ, ಈರಪ್ಪ ನಾನಾನ್ನವರ, ರೂಪಾ ಪಟ್ಟಣಶೆಟ್ಟಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts