More

    ರಾಜ್ಯಾದ್ಯಂತ 10 ಸಿಬಿಜಿ ಘಟಕಗಳ ನಿರ್ಮಾಣ

    ಬಾಗಲಕೋಟೆ: ಗೇಲ್ ಇಂಡಿಯಾ ಲಿಮಿಟೆಡ್ ಹಾಗೂ ಕರ್ನಾಟಕದ ಟ್ರೂಆಲ್ಟ್ ಬಯೋ ಎನರ್ಜಿ ಸಂಸ್ಥೆಯ ನಡುವಿನ 72 ಮಿಲಿಯನ್ ಡಾಲರ್ ಹೂಡಿಕೆಯ ಜಂಟಿ ಪಾಲುದಾರಿಕೆ ಒಪ್ಪಂದವು ವಿಕಸಿತ ಭಾರತಕ್ಕಾಗಿ ಟ್ರೂಆಲ್ಟ್ ಇಟ್ಟ ಮಹತ್ವದ ಹೆಜ್ಜೆಯಾಗಲಿದೆ. ನವದೆಹಲಿಯ ಗೇಲ್ ಇಂಡಿಯಾ ಪ್ರಧಾನ ಕಚೇರಿಯಲ್ಲಿ ಗೇಲ್ ಉದ್ಯಮ ವಿಸ್ತರಣೆ ವಿಭಾಗದ ನಿರ್ದೇಶಕ ರಾಜೀವಕುಮಾರ ಸಿಂಘಾಲ್ ಹಾಗೂ ಟ್ರೂಆಲ್ಟ್ ವ್ಯವಸ್ಥಾಪಕ ನಿರ್ದೇಶಕ ವಿಜಯ ನಿರಾಣಿ ನಡುವೆ ನಡೆದ ಸಭೆಯಲ್ಲಿ ಜಂಟಿ ಸಹಭಾಗಿತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

    ಜೈವಿಕ ಇಂಧನ ಉತ್ಪಾದನೆಯು ಪೆಟ್ರೋಲಿಯಂ ಉತ್ಪನಗಳ ಮೇಲಿನ ಅವಲಂಬನೆಯನ್ನು ತಗ್ಗಿಸುವ ಜೊತೆಗೆ ಆತ್ಮನಿರ್ಭರ ಭಾರತ ನಿರ್ಮಾಣದ ಕನಸನ್ನು ಸಾಕಾರಗೊಳಿಸುತ್ತದೆ. ಟ್ರೂಆಲ್ಟ್ ಹಾಗೂ ಗೇಲ್ ಇಂಡಿಯಾ ಶೇ. 51 ಹಾಗೂ ಶೇ. 49 ಅನುಪಾತದಲ್ಲಿ 72 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದ್ದು, ಕರ್ನಾಟಕದಾದ್ಯಂತ 10 ಉತ್ಪಾದನಾ ಘಟಕಗಳು ನಿರ್ಮಾಣವಾಗಲಿವೆ. ಈ ಮೂಲಕ ಶುಗರಕೇನ್ ಪ್ರೆಸ್‌ಮಡ್, ಸ್ಪೆಂಟ್‌ವಾಶ್, ಡಿಕಾಂಪೋಸೆಬಲ್ ಕೈಗಾರಿಕಾ ತ್ಯಾಜ್ಯ ಸೇರಿದಂತೆ ವಿವಿಧ ಮಾದರಿಯ 600 ಮಿಲಿಯನ್ ಕೆಜಿ ಜೈವಿಕ ತ್ಯಾಜ್ಯದ ಮೂಲಕ ವಾರ್ಷಿಕ 33 ಮಿಲಿಯನ್ ಸಿಬಿಜಿ ಉತ್ಪಾದನೆಯ ಜೊತೆಗೆ 20 ಮಿಲಿಯನ್ ಕೆಜಿ ಎಸ್.ಎ್,ಒ.ಎಂ ಹಾಗೂ 30 ಎಲ್‌ಎ್ಒಎಮ್ ಉತ್ಪಾದನೆಯಾಗಲಿದೆ. ನಿರ್ಮಾಣವಾಗಲಿರುವ 10 ಘಟಕಗಳು ಪ್ರತಿದಿನ 10 ಸಾವಿರ ಕೆಜಿ ಉತ್ಪಾದನಾ ಸಾಮರ್ಥ್ಯ ಹೊಂದಿರಲಿವೆ.

    ಇದು ದೇಶದ ಆರ್ಥಿಕ ವಿಕಾಸದ ಜೊತೆಗೆ ಗ್ರಾಮೀಣ ಆರ್ಥಿಕತೆ ಬಲ ತುಂಬಲಿದೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗವಕಾಶ ದೊರೆಯುವುದು. ಕಸದಿಂದ ರಸವಾಗಿಸುವ ಮೂಲಕ ಶೂನ್ಯ ತ್ಯಾಜ್ಯ ನಿರ್ವಹಣೆ ಸ್ವಚ್ಚ ಹಾಗೂ ಹಸಿರು ಭಾರತ ನಿರ್ಮಾಣದ ಕನಸನ್ನು ಸಾಕಾರಗೊಳಿಸಲು ಕರ್ನಾಟಕದಿಂದ ಮಹತ್ವದ ಕೊಡುಗೆಯಾಗಿದೆ. ಜೈವಿಕ ಇಂಧನ ಉತ್ಪಾದನೆಯಿಂದ ದೈನಂದಿನ ಸಾರಿಗೆಗೆ ಇಂಧನ ಬೆಲೆ ಕಡಿಮೆಯಾಗಿ ಜನಸಾಮಾನ್ಯರಿಗೆ ಅನುಕೂಲಕರವಾಗಲಿದೆ ಎಂದು ರಾಜ್ಯದ ಹಲವು ಉದ್ಯಮಿಗಳು ಅಭಿಪ್ರಾಯ ಪಟ್ಟಿದ್ದಾರೆ.

    ದೇಶವಾಸಿಗಳ ಮೇಲಿನ ಇಂಧನ ವೆಚ್ಚದ ಭಾರ ತಗ್ಗಿಸುವುದು ಹಾಗೂ ನರೇಂದ್ರ ಮೋದಿಯವರ ಕನಸಿನ ಇಂಧನ ಸ್ವಾವಲಂಬನೆಗೆ ಕರ್ನಾಟಕದಿಂದ ಹೆಜ್ಜೆಯಾಗುವುದು ಟ್ರೂಆಲ್ಟ್ ಸಂಕಲ್ಪ, ಕೈಗಾರಿಕಾ ತ್ಯಾಜ್ಯ, ಧಾನ್ಯದ ಹುಲ್ಲು, ನಗರ ತ್ಯಾಜ್ಯದ ಮೂಲಕ ಜೈವಿಕ ಇಂಧನ ಉತ್ಪಾದನೆಯು ಕಸದಿಂದ ರಸವಾಗಿಸಲಿದೆ. ಜೈವಿಕ ಇಂಧನದಿಂದ ವಾಹನ ಸವಾರರಿಗೆ ಹಾಗೂ ರೈತರಿಗೆ ಸಾರಿಗೆ ವೆಚ್ಚ ಕಡಿಮೆಯಾಗಿ ಹಣ ಉಳಿಯುತ್ತದೆ. ಈ ಉಳಿತಾಯವೇ ಆದಾಯದ ಮೂಲವಾಗಲಿದೆ.
    ವಿಜಯ ಎಂ. ನಿರಾಣಿ ವ್ಯವಸ್ಥಾಪಕ ನಿರ್ದೇಶಕರು, ಟ್ರೂಆಲ್ಟ್ ಬಯೋ ಎನರ್ಜಿ
    ಜೈವಿಕ ಇಂಧನವು ಆಮದು ಮಾಡಿಕೊಳ್ಳುತ್ತಿರುವ ನೈಸರ್ಗಿಕ ಅನೀಲಕ್ಕೆ ಅತ್ಯುತ್ತಮ ಪರ್ಯಾಯವಾಗಿದೆ. ಇದು ದೇಶವನ್ನು ತ್ಯಾಜ್ಯದಿಂದ ಮುಕ್ತ ಮಾಡುವ ಜೊತೆಗೆ ಸ್ವಚ್ಚ ಹಾಗೂ ಹಸಿರು ಇಂಧನ ಪರಿಕಲ್ಪನೆಗೆ ಬಲ ತುಂಬುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ಇಂಧನ ಸ್ವಾವಲಂಬನೆಯ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಕರ್ನಾಟಕದಿಂದ ಯುವ ಉದ್ಯಮಿ ವಿಜಯ ಎಂ. ನಿರಾಣಿ ಕೈ ಜೋಡಿಸಿರುವುದು ಅಭಿನಂದನೀಯವಾಗಿದೆ.
    ರಾಜೀವಕುಮಾರ್ ಸಿಂಘಾಲ್, ನಿರ್ದೇಶಕರು, ಗೇಲ್ ಇಂಡಿಯಾ ಲಿ.,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts