More

    ವಿಡಿಎಸ್ ಕ್ಲಾಸಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂವಿಧಾನ ದಿನಾಚರಣೆ.

    ಗದಗ: ನಗರದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ವಿದ್ಯಾದಾನ ಸಮಿತಿ ಕ್ಲಾಸಿಕ್ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು.

    ಶಾಲೆಯ ಮುಖ್ಯೋಪಾಧ್ಯಯರಾದ ಶ್ರೀ ಎಂ. ಆರ್. ಡೊಳ್ಳಿನ ರವರು ಸಂವಿಧಾನ ಪೀಠಿಕೆಯ ಭಾವಚಿತ್ರಕ್ಕೆ ಹೂ ಮಾಲೆ ಅರ್ಪಿಸಿ,  ಭಾರತ ಸಂವಿಧಾನವು ವಿಶ್ವದಲ್ಲಿಯೇ ಅತಿ ಬೃಹತ್ ಸಂವಿಧಾನವಾಗಿದೆ. ನಮ್ಮ ಸಂವಿಧಾನವು ಲಿಖಿತ ಹಾಗೂ  ಅಲಿಖಿತ ರೂಪದಲ್ಲಿರುವ ಸಂವಿಧಾನವಾಗಿದ್ದು, ಇದನ್ನು ಕೇಂದ್ರದ ಮೇಲ್ಮನೆ ಮತ್ತು ಕೆಳಮನೆ ಸದಸ್ಯರ ಅಧಿವೇಶನದಲ್ಲಿ ತಿದ್ದುಪಡಿ ಮಾಡಲು ಅವಕಾಶವಿದೆ. ನಮ್ಮ ದೇಶವು ವಿವಿಧ ಸಂಸ್ಕೃತಿಯ ಜನರನ್ನು ಹೊಂದಿದ್ದು ಎಲ್ಲಾ ಜನರಿಗೂ ಅನ್ವಯವಾಗುವ ವಿಧಿಗಳನ್ನು, ಹಕ್ಕುಗಳನ್ನು, ಕರ್ತವ್ಯಗಳನ್ನು ಸಂವಿಧಾನ ಒಳಗೊಂಡಿದೆ. ನಮ್ಮ ಸಂವಿಧಾನವನ್ನು ಹಲವಾರು ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ರಚಿಸಲಾಗಿದೆ. ಇಂತಹ ಸಂವಿಧಾನವನ್ನು ರಚಿಸುವಲ್ಲಿ ಪ್ರಮುಖ ಪಾತ್ರವಹಿಸಿದ ನಾಯಕರೆಂದರೆ ಡಾ. ರಾಜೇಂದ್ರ ಪ್ರಸಾದ, ಡಾ. ಬಿ. ಆರ್. ಅಂಬೇಡ್ಕರ್, ಎನ್ ಗೋಪಾಲಸ್ವಾಮಿ ಅಯ್ಯಂಗಾರ್, ಮಮ್ಮದ್ ಸಾದುಲ್ಲಾ , ಕೆ. ಎಂ. ಮುನ್ಶಿ, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಜವಾಹರ  ಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ಸರ್ದಾರ್ ವಲ್ಲಬಾಯ್ ಪಟೇಲ್  ಮುಂತಾದವರ ಶ್ರಮದಿಂದ ನಮ್ಮ ಸಂವಿಧಾನವು ರಚಿಸಲ್ಪಟ್ಟಿತು. ರಚಿಸಲ್ಪಟ್ಟ ಈ ಸಂವಿಧಾನವನ್ನು 1949 ನವಂಬರ್ 26 ರಂದು  ನಮಗೆ ನಾವೇ ಅರ್ಪಿಸಿಕೊಂಡು,  ಅಂಗೀಕರಸಿಕೊಂಡಿದ್ದೇವೆ. ನಂತರ ನಮ್ಮ ಸಂವಿಧಾನವನ್ನು ಎರಡು ತಿಂಗಳ ನಂತರ 1950 ಜನವರಿ 26 ರಂದು ಅಧಿಕೃತವಾಗಿ ಜಾರಿಗೆ ತರಲಾಯಿತು ಎಂದು ಕಾರ್ಯಕ್ರಮವನ್ನು  ಉದ್ದೇಶಿಸಿ ಮಾತನಾಡಿದರು.

    ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಸುಮಂಗಲಾ ಆಸಂಗಿ ಯವರು ನಮ್ಮ ಸಂವಿಧಾನ ಒಳಗೊಂಡಿರುವ ಹಕ್ಕುಗಳ, ಕರ್ತವ್ಯಗಳ ಹಾಗೂ ಅದರ ಮಹತ್ವ ಕುರಿತು ಮಕ್ಕಳಿಗೆ ತಿಳಿಸಿದರು.

    ಶಾಲೆಯ ಶಿಕ್ಷಕಿಯರಾದ ಕುಮಾರಿ ಶೋಭಾ. ವಿ. ಪೂಜಾರ ರವರು ಸಂವಿಧಾನ ಪೀಠಿಕೆಯನ್ನು ಓದುವುದರ ಮೂಲಕ ಮಕ್ಕಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

     ಈ ಸಂದರ್ಭದಲ್ಲಿ ಶಾಲೆಯ ಸಮಸ್ತ/ ಶಿಕ್ಷಕ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts