More

    ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

    ಧಾರವಾಡ: ಧಾರವಾಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೇಂದ್ರ ಸರ್ಕಾರದ ವಿರುದ್ಧ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
    ಈ ವೇಳೆ ಕಾರ್ಮಿಕ ಸಚಿವ ಸಂತೋಷ ಲಾಡ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿಯ ಭರವಸೆ ನೀಡಲಾಗಿತ್ತು. ಅದನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಅಗತ್ಯ ಅಕ್ಕಿ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ. ಅದಕ್ಕೆ ತಗಲುವ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ ಎಂದು ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಕೇಂದ್ರದ ಆಧೀನದಲ್ಲಿರುವ ಕೆಎಫ್‌ಸಿಐಯನ್ನು ಬಳಸಿಕೊಂಡು ರಾಜ್ಯಕ್ಕೆ ಅಕ್ಕಿ ನೀಡದಂತೆ ತಾಕೀತು ಮಾಡಿದ್ದು ರಾಜ್ಯದ ಬಡವರ ಹೊಟ್ಟೆಯ ಮೇಲೆ ಬರೆ ಎಳೆಂದಂತಾಗಿದೆ ಎಂದರು.
    ಕಾಂಗ್ರೆಸ್ ಮಹಿಳಾ ಟಕದಿಂದ ಒಲೆ ಹೂಡಿ ಅನ್ನ ಬೇಯಿಸಲಾಯಿತು.
    ಜಿಲ್ಲಾಧ್ಯಕ್ಷರಾದ ಅಲ್ತಾಫ ಹಳ್ಳೂರ ಮತ್ತು ಅನಿಲಕುಮಾರ ಪಾಟೀಲ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಸದಾನಂದ ಡಂಗನವರ, ಅರವಿಂದ ಏಗನಗೌಡರ, ಆನಂದ ಜಾಧವ, ವಸಂತ ಅರ್ಕಾಚಾರ, ದೀಪಾ ಗೌರಿ, ದೀಪಕ ಚಿಂಚೋರೆ, ಬಸವರಾಜ ಗುರಿಕಾರ, ಚನಬಸಪ್ಪ ಮಟ್ಟಿ, ಅಶೋಕ ಸೂರ್ಯವಂಶಿ, ಇಬ್ರಾಹಿಂ ಗುಡಸಲಮನಿ, ಮಂಜುನಾಥ ಭೀಮಕ್ಕನವರ, ಮೋಹನ ಹಿರೇಮನಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts