More

    ಬಿಜೆಪಿ ಹಾದಿಯಲ್ಲಿ ಕಾಂಗ್ರೆಸ್; ದೆಹಲಿ ಕಚೇರಿ ಸ್ಥಳಾಂತರ, ಹೆಸರೂ ಬದಲಾವಣೆ

    ನವದೆಹಲಿ: ಕಾಂಗ್ರೆಸ್​​​ ಪಕ್ಷವು ತನ್ನ ಅಖಿಲ ಭಾರತ ಕಾಂಗ್ರೆಸ್​​ ಸಮಿತಿಯ (ಎಐಸಿಸಿ) ದೆಹಲಿಯ ಪ್ರಧಾನ ಕಚೇರಿಯನ್ನು 2024 ಜನವರಿ 2ನೇವಾರದಲ್ಲಿ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲು ಯೋಜಿಸಿದೆ. ಹೊಸ ಪ್ರಧಾನ ಕಚೇರಿಯನ್ನು ಇಂದಿರಾ ಭವನ ಎಂದು ಕರೆಯಲಾಗುತ್ತದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಪ್ರಸ್ತುತ , ಎಐಸಿಸಿ ಪ್ರಧಾನ ಕಚೇರಿಯು ನವದೆಹಲಿಯ ಅಕ್ಬರ್​​ ರಸ್ತೆ-24, ಸೌತ ಬ್ಲಾಕ್​ , ಮಾನ್​ ಸಿಂಗ್​ ರಸ್ತೆ ನವದೆಹಲಿಯಲ್ಲಿ ಕಚೇರಿ ಇತ್ತು. ಈ ಕಚೇರಿಯನ್ನು ಮುಂದಿನ ದಿನಗಳಲ್ಲಿ ಸ್ಥಳಾಂತರ ಮಾಡಲಾಗುತ್ತದೆ ಎನ್ನುವ ಮಾಹಿತಿ ಇದೆ.

    2018 ರಲ್ಲಿ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳ ನಂತರ, ಭಾರತೀಯ ಜನತಾ ಪಕ್ಷವು ತನ್ನ ಪ್ರಧಾನ ಕಚೇರಿಯನ್ನು ದೆಹಲಿಯ ದೀನ್ ದಯಾಳ್ ಉಪಾಧ್ಯಾಯ ರಸ್ತೆಗೆ ಬದಲಾಯಿಸಿತು. ಅತ್ಯಾಧುನಿಕ ಸ್ಪರ್ಶ ಮತ್ತು ವಿಶಾಲವಾದ ಕಟ್ಟಡವಾಗಿದೆ. ಈಗ ಕಾಂಗ್ರೆಸ್ ಪಕ್ಷ ಕೂಡ ಅದೇ ಹಾದಿಯಲ್ಲಿ ಸಾಗಲಿದೆ. ಜನವರಿ ಎರಡನೇ ವಾರದಲ್ಲಿ ಪಕ್ಷದ ಕೇಂದ್ರ ಕಚೇರಿಯನ್ನು ಹೊಸ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದು ವರದಿಯಾಗಿದೆ. ಕಟ್ಟಡವಷ್ಟೇ ಅಲ್ಲ, ಅದರ ಹೆಸರೂ ಬದಲಾಯಿತು. ಇದನ್ನು ಇಂದಿರಾ ಭವನ ಎಂದು ಕರೆಯಲಾಗುವುದು.

    ಪ್ರಸ್ತುತ ಕಾಂಗ್ರೆಸ್ ಕಚೇರಿ ದೆಹಲಿಯ 24 ಅಕ್ಬರ್ ರಸ್ತೆಯಲ್ಲಿದೆ. ಇದು ಲುಟ್ಯೆನ್ಸ್ ದೆಹಲಿಯ ಟೈಪ್ VII ಬಂಗಲೆಯಲ್ಲಿದೆ. ಇದನ್ನು ಇಂದಿರಾ ಗಾಂಧಿಯವರು 1978 ರಲ್ಲಿ ಪ್ರಾರಂಭಿಸಿದರು. 44 ವರ್ಷಗಳಿಂದ ಈ ಕಚೇರಿ ಕಾಂಗ್ರೆಸ್‌ನ ಏಳುಬೀಳುಗಳಿಗೆ ಸಾಕ್ಷಿಯಾಗಿದೆ. ದೀನ್ ದಯಾಳ್ ಉಪಾಧ್ಯಾಯ ರಸ್ತೆಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿ ಬಳಿ ಹೊಸ ಕಾಂಗ್ರೆಸ್ ಕಚೇರಿಯನ್ನೂ ನಿರ್ಮಿಸಲಾಗುತ್ತಿದೆ. ಅಹ್ಮದ್ ಪಟೇಲ್ ಮತ್ತು ಮೋತಿಲಾಲ್ ಬೋಹ್ರಾ ಅವರ ಮೇಲ್ವಿಚಾರಣೆಯಲ್ಲಿ ಕಾಂಗ್ರೆಸ್‌ನ ಹೊಸ ಕಚೇರಿಯ ನಿರ್ಮಾಣವು ನಡೆಯಬೇಕಿತ್ತು. ಆದರೆ ಆ ಇಬ್ಬರು ನಾಯಕರು ತೀರಿಹೋದರು. ಇದರೊಂದಿಗೆ ಈ ಜವಾಬ್ದಾರಿಗಳನ್ನು ಕೆ.ಸಿ.ವೇಣುಗೋಪಾಲ್ ಅವರಿಗೆ ವಹಿಸಲಾಯಿತು. ನೂತನ ಕಾಂಗ್ರೆಸ್ ಕಚೇರಿ 6 ಮಹಡಿಗಳನ್ನು ಹೊಂದಿರುತ್ತದೆ. ಎಲ್ಲಾ ಆಧುನಿಕ ಸೌಕರ್ಯಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ನಿರ್ಮಿಸಲಾಗಿದೆ.

    2018 ರಲ್ಲಿ, ಬಿಜೆಪಿ ತನ್ನ ಕೇಂದ್ರ ಕಚೇರಿಯನ್ನು ಹೊಸ ಕಟ್ಟಡಕ್ಕೆ ಬದಲಾಯಿಸಿತು. ಮೂರು ಅಂತಸ್ತಿನ ನೂತನ ಕಚೇರಿಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಇದು 1.70 ಲಕ್ಷ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಇದರೊಂದಿಗೆ ಬಿಜೆಪಿ ತನ್ನ ಕಚೇರಿಯನ್ನು ಲುಟಿಯನ್ಸ್ ವಲಯದಿಂದ ಸ್ಥಳಾಂತರಿಸಿದ ಮೊದಲ ಪಕ್ಷವಾಯಿತು. ಬಿಜೆಪಿಯ ಈ ಕಚೇರಿಯನ್ನು ಒಂದೂವರೆ ವರ್ಷದಲ್ಲಿ ದಾಖಲೆ ಮಟ್ಟದಲ್ಲಿ ನಿರ್ಮಿಸಲಾಗಿದೆ. ಈ ಕಟ್ಟಡಕ್ಕೆ 2016ರ ಆಗಸ್ಟ್‌ನಲ್ಲಿ ಭೂಮಿಪೂಜೆ ನೆರವೇರಿಸಲಾಗಿತ್ತು. ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲು ಪ್ರಧಾನಿ ಮೋದಿ ಆಗಾಗ ಇಲ್ಲಿಗೆ ಬರುತ್ತಾರೆ. ಬಿಜೆಪಿ ನಂತರ ಈಗ ಕಾಂಗ್ರೆಸ್ ತನ್ನ ಕಚೇರಿಯನ್ನು ಬದಲಾಯಿಸಲಿದೆ. ಇದು ಮಲ್ಲಿಕಾರ್ಜುನ ಖರ್ಗೆ ಅವರ ಅವಧಿಯಲ್ಲಿ ಆಗಲಿದೆ.

    ಐಶ್ವರ್ಯಾ ರೈಗೂ ನನ್ನ ಮಗನಿಗೂ ಅಫೇರ್! ಸುರೇಶ್​ ಒಬೆರಾಯ್ ಬಿಚ್ಚಿಟ್ಟ ರಹಸ್ಯವಿದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts