More

    ಕಾಂಗ್ರೆಸ್​ ನಂಬಿದ್ರೆ ಚೊಂಬೇ ಗ್ಯಾರಂಟಿ: ಜೆಡಿಎಸ್​ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಟಾಂಗ್​

    | ಗಂಗಾಧರ್ ಬೈರಾಪಟ್ಟಣ, ರಾಮನಗರ

    ರಾಜ್ಯದ ಖಜಾನೆಯನ್ನು ಕಾಂಗ್ರೆಸ್ ಸರ್ಕಾರ ಮನಸೋ ಇಚ್ಛೆ ಲೂಟಿ ಮಾಡಿದೆ. ತಮ್ಮೆಲ್ಲ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಖಾಲಿ ಚೊಂಬು ಪ್ರದರ್ಶನ ನಡೆಸುತ್ತಿದೆ. ಆ ಮೂಲಕ ತಮ್ಮನ್ನು ಚುನಾಯಿಸಿದ ಮತದಾರರಿಗೆ ಭವಿಷ್ಯದಲ್ಲಿ ಖಾಲಿ ಚೊಂಬೇ ಗತಿ ಎಂದು ಹೇಳಿಕೊಳ್ಳುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

    ‘ವಿಜಯವಾಣಿ’ ನಡೆಸಿದ ಸಂದರ್ಶನ ವೇಳೆ ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ರಾಜ್ಯದ ಎಲ್ಲ 28 ಸ್ಥಾನಗಳಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಯ ಮತದಾನ ಸನಿಹದಲ್ಲಿದ್ದೇವೆ. ಈ ಸಲ ಬಿಜೆಪಿ – ಜೆಡಿಎಸ್ ಮೈತ್ರಿ ಹಾಗೂ ಕಾಂಗೆ್ರಸ್ ನಡುವೆ ನೇರ ಹಣಾಹಣಿಯಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಈಗಾಗಲೆ ಎರಡು ಬಾರಿ ಒಂದೇ ವೇದಿಕೆಯಲ್ಲಿ ಕೈಜೋಡಿಸಿ ಮೈತ್ರಿ ಗಟ್ಟಿಯಾಗಿದೆ ಎಂಬ ಸಂದೇಶ ರವಾನಿಸಿದ್ದಾರೆ. ಈ ಸಂದರ್ಭದಲ್ಲಿ ಎಚ್​ಡಿಕೆ ಅವರೊಡನೆ ನಡೆಸಿದ ಸಂದರ್ಶನದ ಪೂರ್ಣ ವಿವರ ಇಲ್ಲಿದೆ.

    1. ಮಂಡ್ಯ, ಹಾಸನ, ಬೆಂಗಳೂರು ಗ್ರಾಮಾಂತರದಲ್ಲಿ ಮತದಾರರ ನಾಡಿ ಮಿಡಿತ ಅರ್ಥ ಆಗಿದೆಯೇ?

    3 ಕ್ಷೇತ್ರಗಳಲ್ಲಿಯೂ ನಮ್ಮ ಪಕ್ಷ ಬಲಿಷ್ಠವಾಗಿದೆ. 3 ಕ್ಷೇತ್ರಗಳಲ್ಲಿ ಮಾತ್ರವಲ್ಲ, ಎಲ್ಲ ಕ್ಷೇತ್ರಗಳಲ್ಲಿಯೂ ಮೈತ್ರಿ ಅಭ್ಯರ್ಥಿಗಳ ಗೆಲುವು ನಿಶ್ಚಿತ. ಮಂಡ್ಯದ ಜನತೆ ನನ್ನ ಪರವಾಗಿ ನಿಂತಿದೆ. ಅವರ ಬೆಂಬಲದಿಂದಲೇ ನಾನು ಎಲ್ಲೆಡೆ ಪ್ರಚಾರ ಕೈಗೊಳ್ಳಲು ಸಾಧ್ಯವಾಗಿದೆ.

    2. ಮೈತ್ರಿ ವರ್ಕ್ ಔಟ್ ಆಗುತ್ತಾ? ರಾಜ್ಯದಲ್ಲಿ ಪರಿಸ್ಥಿತಿ ಹೇಗಿದೆ?

    ಬಿಜೆಪಿಯೊಂದಿನ ಮೈತ್ರಿ ಖಂಡಿತವಾಗಿ ಉತ್ತಮ ಫಲಿತಾಂಶ ಕೊಡುತ್ತದೆ. ಚಾಮರಾಜನಗರದಿಂದ ಚಿತ್ರದುರ್ಗದವರೆಗೂ ನಮ್ಮ ಪಕ್ಷದ ಬಲ ಇದ್ದು, ಇದು ಎಲ್ಲರ ನಿರೀಕ್ಷೆಯನ್ನೂ ಮೀರಿ ಫಲ ಕೊಡುತ್ತದೆ. ಪ್ರತಿ ಕ್ಷೇತ್ರದ ಪ್ರಚಾರದ ವೇಳೆಯೂ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಎಲ್ಲ 28 ಕ್ಷೇತ್ರಗಳಲ್ಲಿಯೂ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುವುದು ನಿಶ್ಚಿತ.

    3.ತಮ್ಮನ್ನು ಚನ್ನಪಟ್ಟಣಕ್ಕೆ ವಾಪಸ್ ಕಳುಹಿಸಿ ಎಂದು ಮಂಡ್ಯ ಮತದಾರರಿಗೆ ಡಿಕೆಶಿ ಮನವಿ ಮಾಡಿದ್ದಾರಲ್ಲಾ…

    ಯಾರನ್ನು ಎಲ್ಲಿಗೆ ಕಳುಹಿಸಬೇಕು ಎನ್ನುವುದನ್ನು ಮತದಾರರೇ ತೀರ್ಮಾನ ಮಾಡುತ್ತಾರೆ. ಮಂಡ್ಯದಲ್ಲಿ ಗೆಲುವು ಸಾಧಿಸಿದ ನಂತರವೂ ನಾನು ಚನ್ನಪಟ್ಟಣದ ಮೂಲಕವೇ ಮಂಡ್ಯಕ್ಕೆ ಬರಬೇಕು. ರಾಮನಗರ ಮತ್ತು ಮಂಡ್ಯ ನನಗೆ ಶಕ್ತಿ ತುಂಬಿದ ಜನತೆಯ ಜಿಲ್ಲೆಗಳು. ಇವುಗಳನ್ನು ಬಿಟ್ಟು ಎಲ್ಲಿಗೂ ಹೋಗಲು ಸಾಧ್ಯವೇ ಇಲ್ಲ. ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಕನಸು ಕಂಡು ಶ್ರಮಿಸಿದ್ದೇನೆ. ಈಗಲೂ ನಾನು ರಾಜ್ಯದ ಸಮಗ್ರ ಅಭಿವೃದ್ಧಿ ಕನಸಿನೊಂದಿಗೆ ಹೋರಾಟಕ್ಕೆ ಇಳಿದಿದ್ದೇನೆ. ಮಂಡ್ಯದಿಂದ ಓಡಿಸಿ ಎನ್ನುವವರಿಗೆ ಜನತೆ ಉತ್ತರ ಕೊಡುತ್ತಾರೆ. ನಾನು ರಾಜ್ಯದ 30 ಜಿಲ್ಲೆಯ ಜನಕ್ಕೆ ಬೇಕಾದವನು.

    4. ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಟ್ಟಿದ್ದು ಖಾಲಿ ಚೊಂಬು ಅಂತಾ ಕಾಂಗ್ರೆಸ್ ನವರು ಜಾಹೀರಾತು ಮೂಲಕ ಪ್ರಚಾರ ಮಾಡುತ್ತಿದ್ದಾರೆ…

    ಗ್ಯಾರಂಟಿಗಳ ಮೂಲಕ ಸರ್ಕಾರದ ಖಜಾನೆಯನ್ನು ಖಾಲಿ ಮಾಡಿದೆ. ಇದಕ್ಕೆ ಬೇಕಾದ ತೆರಿಗೆ ಸಂಗ್ರಹದಲ್ಲಿ ಹಿಂದೆ ಬಿದ್ದಿರುವ ಸರ್ಕಾರ, ರಾಜ್ಯದ ಖಜಾನೆಯನ್ನು ಮನಸೋ ಇಚ್ಛೆ ಲೂಟಿ ಮಾಡಿ ರಾಜ್ಯವನ್ನು ಬರಿದು ಮಾಡಿದೆ. ತಮ್ಮೆಲ್ಲ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಖಾಲಿ ಚೊಂಬು ಪ್ರದರ್ಶನ ನಡೆಯುತ್ತಿದೆ. ಖಾಲಿ ಚೊಂಬು ಜಾಹೀರಾತುಗಳನ್ನು ನೀಡುವ ಮೂಲಕ ತಮಗೆ ಮತ ಹಾಕಿ ಗೆಲ್ಲಿಸಿದ ಮತದಾರರಿಗೆ ಭವಿಷ್ಯದಲ್ಲಿ ಚೊಂಬೇ ಗತಿ ಎನ್ನುವುದನ್ನು ತಾನೇ ಹೇಳಿಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷವನ್ನು ನಂಬಿದವರಿಗೆ ಚೊಂಬೇ ಗ್ಯಾರಂಟಿ.

    5. ನೀವು ಚುನಾವಣೆ ನಂತರ ರಾಜ್ಯ ಸರ್ಕಾರ ಉಳಿಯಲ್ಲ ಅಂತೀರಿ. ಡಿಕೆಶಿ ಮುಂದಿನ 9 ವರ್ಷ ನಮ್ಮದೇ ಸರ್ಕಾರ ಗ್ಯಾರಂಟಿ ಅಂತಾರಲ್ಲಾ..

    ನಮ್ಮದೇ ಮುಂದಿನ 20 ವರ್ಷ ಸರ್ಕಾರ, ನಾವು ಸುಭದ್ರವಾಗಿದ್ದೇವೆೆ ಎಂದು ಹೇಳಿಕೊಂಡ ಸಾಕಷ್ಟು ಸರ್ಕಾರಗಳು ಕೇವಲ ಒಂದೇ ವರ್ಷದಲ್ಲಿ ಅಧಿಕಾರ ಕಳೆದುಕೊಂಡಿದ್ದನ್ನು ನೋಡಿದ್ದೇವೆ. ಹೀಗೆ ಹೇಳಿದವರೂ ಅಧಿಕಾರ ಕಳೆದುಕೊಂಡಿದ್ದನ್ನೂ ನೋಡಿದ್ದೇವೆ. ಅವರು ಹೇಳಲಿ, ಚುನಾವಣೆ ಮುಗಿದ ನಂತರ ನಿಜ ಚಿತ್ರಣ ಹೊರ ಬರಲಿದೆ. ಕಾದು ನೋಡಿ.

    6. ನೇಹಾ ಹತ್ಯೆ ಆಯ್ತು, ನಟನ ಮೇಲೆ ಹಲ್ಲೆ ಅಗಿದೆ. ಇಂತಹ ಘಟನೆಗಳು ಹೆಚ್ಚಲು ಕಾರಣ ಏನು?

    ಇದನ್ನು ಒಂದು ಸಮುದಾಯದ ತುಷ್ಠೀಕರಣ ಎನ್ನುವದಕ್ಕಿಂತ, ನಾವು ಏನೇ ಮಾಡಿದರೂ ಸರ್ಕಾರ ನಮಗೆ ಏನೂ ಮಾಡಲ್ಲ ಎನ್ನುವ ಭಾವನೆ ಇಂತಹ ಕೃತ್ಯ ಮಾಡುವವರಲ್ಲಿ ಮೂಡಿದೆ. ಇದಕ್ಕೆ ರಾಜ್ಯ ಸರ್ಕಾರದ ಆಡಳಿತ ವೈಖರಿಯೇ ಕಾರಣ. ತಪು್ಪ ಮಾಡಿದವರು ಯಾರೇ ಆಗಲಿ ಕಾನೂನು ಮತ್ತು ಸರ್ಕಾರ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂಬಂತೆ ಆಡಳಿತ ನಡೆಸಿದ್ದರೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳಿಗೆ ನೇರವಾಗಿ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ.

    7. ಸಿಎಂಗೆ ಜಾತಿ ಇಲ್ಲ, ನೀತಿ ಇದೆ. ಒಕ್ಕಲಿಗ ನಾಯಕತ್ವ ತಗೋಳೋಕೆ ಇಷ್ಟ ಇಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ…

    ಅವರು ಹೇಳಿರುವುದು ಸತ್ಯ. ಅವರಿಗೆ ಜಾತಿ ಇಲ್ಲ. ಅವರು ಲೂಟಿ ಹೊಡೆಯುವವರ ಜಾತಿಗೆ ಸೇರಿದವರು. ಪುಣ್ಯ, ಅವರು ಹುಟ್ಟಿದ ಜಾತಿಯ ಹೆಸರನ್ನು ಹೇಳಲಿಲ್ಲ.

    8. ಸಂಪತ್ತು ಗಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಡಿಕೆಶಿ ನೀವು ಇಬ್ಬರೂ ಜಿದ್ದಿಗೆ ಬಿದ್ದಿದ್ದೀರಿ? ಇದಕ್ಕೆ ರ್ತಾಕ ಅಂತ್ಯ ಕಾಣಿಸ್ತೀರಾ?

    ಎಲ್ಲದಕ್ಕೂ ಒಂದು ಅಂತ್ಯ ಇರಲೇಬೇಕು. ಇದಕ್ಕೂ ಖಂಡಿತವಾಗಿ ಅಂತ್ಯ ಸಿಗಲಿದೆ. ನಾನು ಈ ವಿಚಾರದಲ್ಲಿ ರ್ತಾಕ ಅಂತ್ಯಕ್ಕೆ ಹೋರಾಟ ಮಾಡುತ್ತೇನೆ. ಅಂತಿಮವಾಗಿ ಭಗವಂತನ ನ್ಯಾಯಾಲಯ ಇದಕ್ಕೆ ರ್ತಾಕ ಅಂತ್ಯವನ್ನು ಕಾಣಿಸುತ್ತದೆ.

    ಹಿಂದೂ ಹುಡುಗಿಯರನ್ನು ಲವ್ ​ಯಾಕೆ ಮಾಡ್ತೀರಿ..? ನಿಮ್ಮ ಧರ್ಮದಲ್ಲೇ 5 ಮದುವೆ ಮಾಡಿಕೊಳ್ಳಿ: ಪ್ರಥಮ್​ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts