More

    ಪಕ್ಷ ಬಿಟ್ಟು ಹೋದವರ ಚಿಂತೆ ಬೇಡ; ಶಾಸಕ ಶಿವಶಂಕರರೆಡ್ಡಿ ಆಕ್ರೋಶ

    ಗೌರಿಬಿದನೂರು: ಸ್ವ ಲಾಭ ಹಾಗೂ ಹಣದ ವ್ಯಾಮೋಹಕ್ಕೆ ಬಿದ್ದು ಕಾಂಗ್ರೆಸ್ ಬಿಟ್ಟು ಹೋದವರ ಬಗ್ಗೆ ಚಿಂತಿಸದೆ ಪಕ್ಷ ಸಂಟನೆ ಕಡೆಗೆ ಗಮನಹರಿಸುವಂತೆ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಕಾರ್ಯಕರ್ತರಿಗೆ ಕರೆ ನೀಡಿದರು.

    ತಾಲೂಕಿನ ತರಿದಾಳು ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಪಕ್ಷದಿಂದ ಅಧಿಕಾರ ಅನುಭವಿಸಿ ಕೊನೆಗೆ ದ್ರೋಹ ಬಗೆದವರ ಬಗ್ಗೆ ಯೋಚಿಸಿ ಫಲವ್ಲಿ. ಅವರು ದುಡ್ಡಿನ ಗಿರಾಕಿಗಳ ಹಿಂದೆ ಸುತ್ತುತ್ತಿದ್ದಾರೆ. ಹಣ ಖರ್ಚು ಮಾಡಿ ಜನ ಸೇರಿಸ್ತಾರೆ. ಆದರೆ ನಾವು ಹಣ, ವಾಹನ ವ್ಯವಸ್ಥೆ ಮಾಡದಿದ್ದರೂ ಜನ ಬರ‌್ತಾರೆ. ಇದು ಕಾಂಗ್ರೆಸ್‌ನ ಸಿದ್ಧಾಂತ ಮತ್ತು ಶಕ್ತಿ ಎಂದರು.

    ನೆರೆಯ ಕೊರಟಗೆರೆ, ಮಧುಗಿರಿ, ಬಾಗೇಪಲ್ಲಿ ಮಾತ್ರವಲ್ಲ ಜಿಲ್ಲಾ ಕೇಂದ್ರದಲ್ಲೂ ಉದ್ಯಮಗಳಿಲ್ಲ. ಆದರೆ ಗೌರಿಬಿದನೂರು ತಾಲೂಕಿನಲ್ಲಿ ಕೈಗಾರಿಕಾ ಕ್ರಾಂತಿಯಾಗುತ್ತಿದೆ. ಸಾವಿರಾರು ಹೆಣ್ಣುಮಕ್ಕಳಿಗೆ ಉದ್ಯೋಗ ದೊರೆತಿದೆ. ಅಭಿವೃದ್ಧಿಯ ಫಲ ಜನರಿಗೆ ಲಭಿಸುತ್ತಿದೆ. ಜನ ನೀಡಿರುವ ಒಂದೊಂದು ಮತದ ಹಿಂದೆಯೂ ಅಭಿವೃದ್ಧಿ ಚಿಂತನೆ ಬೆಳಗಿದ್ದು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ವಿರೋಧಿಗಳಿಗೆ ಎಚ್ಚರಿಸಿದರು.

    ಪಕ್ಷವನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳೇ ನಮಗೆ ಶ್ರೀರಕ್ಷೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಪ್ರತಿ ಹಳ್ಳಿಯಲ್ಲಿ ನಡೆದಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಸಂಘಟನೆ ಮಾಡಬೇಕೆಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಮರಳೂರು ಹನುಮಂತರೆಡ್ಡಿ ಹೇಳಿದರು. ತಾಪಂ ಮಾಜಿ ಉಪಾಧ್ಯಕ್ಷ ಎಚ್‌ಎನ್ ಪ್ರಕಾಶ್‌ರೆಡ್ಡಿ, ಗ್ರಾಪಂ ಮಾಜಿ ಅಧ್ಯಕ್ಷ ತರಿದಾಳುಚಿಕ್ಕಣ್ಣ ಮಾತನಾಡಿದರು. ವಿವಿಧ ಪಕ್ಷಗಳನ್ನು ತೊರೆದು ಹಲವರು ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts