More

    ಬುಡಕಟ್ಟು ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ಪ್ರಕರಣ: ಗಂಗಾಜಲದಿಂದ ಸಂತ್ರಸ್ತನ ಮುಖ ತೊಳೆದ ಕಾಂಗ್ರೆಸ್ ಮುಖಂಡ, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ

    ಮಧ್ಯಪ್ರದೇಶ: ಮಧ್ಯಪ್ರದೇಶದ ಸೀದೀ ಜಿಲ್ಲೆಯಲ್ಲಿ ಬುಡಕಟ್ಟು ವ್ಯಕ್ತಿ ದಶಮತ್ ರಾವತ್ ಮೇಲೆ ಪ್ರವೇಶ್ ಶುಕ್ಲಾ ಎಂಬ ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿದ ಘಟನೆ ಬಗ್ಗೆ ನಿರಂತರವಾಗಿ ಚರ್ಚೆ ನಡೆಯುತ್ತಿದೆ. ಮೊದಲಿಗೆ ರಾಜ್ಯದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಅವರು ದಶಮತ್ ಅವರನ್ನು ಅವರ ನಿವಾಸಕ್ಕೆ ಸ್ವಾಗತಿಸಿ, ಅವರ ಪಾದಗಳನ್ನು ತೊಳೆದು, ಒಟ್ಟಿಗೆ ಊಟ ಮಾಡಿದರು. ತದನಂತರ ಅವರಿಗೆ ಪರಿಹಾರದ ಮೊತ್ತವನ್ನೂ ನೀಡಿದರು. ಅಲ್ಲಿಂದ ವಾಪಸಾದ ಬಳಿಕ ಶುಕ್ರವಾರ ದಶಮತ್ ರಾವತ್ ಅವರ ಮನೆಗೆ ಸಿಧಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜ್ಞಾನ್ ಸಿಂಗ್ ಬಂದರು.

    ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಮೊದಲು ದಶಮತ್ ಮುಖ ಮತ್ತು ತಲೆಯನ್ನು ಗಂಗಾಜಲದಿಂದ ಒರೆಸಿದರು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಈ ಬಗ್ಗೆ ಜನರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. “ಇದನ್ನೆಲ್ಲಾ ನೋಡಿದರೆ ದೊಡ್ಡ ಚಲನಚಿತ್ರ ನಿರ್ದೇಶಕರು ನಿರ್ದೇಶಿಸುತ್ತಿರುವಂತೆ ತೋರುತ್ತಿದೆ, ಅವನು ಹೆಚ್ಚು ತಪ್ಪು ಮಾಡಿದನೋ ಅಥವಾ ಇದು … ಖಚಿತಪಡಿಸಿಕೊಳ್ಳುವುದು ಕಷ್ಟ. ಈಗ ಮೂರ್ತಿಯ ನಿರ್ಮಾಣ ಮಾತ್ರ ಬಾಕಿ ಉಳಿದಿದೆ, ಇದೆಲ್ಲವನ್ನೂ ಕ್ಯಾಮೆರಾದ ಮುಂದೆ ಮಾಡುವುದು ಮುಖ್ಯ..ನೇರವಾಗಿ” ಎಂದೆಲ್ಲಾ ಕಾಮೆಂಟ್ ಮಾಡಲಾಗಿದೆ.

    ನಾನು ತಪ್ಪು ಮಾತಾಡಿಲ್ಲ, ನೋಟಿಸ್ ಇನ್ನೂ ತಲುಪಿಲ್ಲ; ಕಿಚ್ಚನ ಬಗ್ಗೆ ನಿರ್ಮಾಪಕರು ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts