More

    ವೆಂಟಿಲೇಟರ್​ ವಿಚಾರ ಕ್ರಿಮಿನಲ್​ ಪಿತೂರಿ ಅಲ್ಲವೇ? ಪ್ರಧಾನಿಗೆ ರಾಹುಲ್​ ಗಾಂಧಿ ಪ್ರಶ್ನೆ

    ನವದೆಹಲಿ: ದೇಶದಲ್ಲಿ ಕರೊನಾ ವೈರಸ್​ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ್ದು ಸೋಂಕಿನ ನಿಯಂತ್ರಣಕ್ಕೆ ಅನೇಕ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ವೆಂಟಿಲೇಟರ್​ಗಳ ಸಮಸ್ಯೆ ಉಂಟಾಗಬಹುದು ಎಂದು ಪರಿಣತರು ಹೇಳಿದ್ದು ಈ ಕುರಿತಾಗಿ ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಪ್ರಧಾನಿ ಮೋದಿಗೆ ಪ್ರಶ್ನಿಸಿದ್ದಾರೆ.

    ಗೌರವಯುತ ಪ್ರಧಾನಿಯವರೇ, ದೇಶದಲ್ಲಿ ವೆಂಟಿಲೇಟರ್​ಗಳನ್ನು ಸಮರ್ಪಕವಾಗಿಟ್ಟುಕೊಳ್ಳಬೇಕು ಎಂದು ಗೊತ್ತಿದ್ದ ಮೇಲೂ ಕೇಂದ್ರ ಸರ್ಕಾರ ಮಾರ್ಚ್​ 19ರವರೆಗೆ ವೆಂಟಿಲೇಟರ್​ ಮತ್ತು ಮಾಸ್ಕ್​ಗಳನ್ನು ರಫ್ತು ಮಾಡುವುದಕ್ಕೆ ಅವಕಾಶವನ್ನೇಕೆ ನೀಡಿತು. ಇದು ಯಾರು ಮಾಡಿರುವ ಅವ್ಯವಸ್ಥೆ. ಇದರ ಹಿಂದೆ ಕ್ರಿಮಿನಲ್​ ಪಿತೂರಿ ಇದೆಯಲ್ಲವೇ ಎಂದು ಪ್ರಶ್ನಿಸಿ ಟ್ವೀಟ್​ ಮಾಡಿದ್ದಾರೆ.

    ದೇಶದಲ್ಲಿ ಒಂದು ವೇಳೆ ಕರೊನಾ ವೈರಸ್​ ಸಮಸ್ಯೆ ಕಡಿಮೆಯಾಗದೆ ಹೆಚ್ಚಾದರೆ, ದೇಶದಲ್ಲಿರುವ 40,000 ವೆಂಟಿಲೇಟರ್​ಗಳು ಸಾಲದಾಗುತ್ತದೆ ಎಂದು ಪರಿಣತರು ತಿಳಿಸಿದ್ದಾರೆ. ಕರೊನಾ ವೈರಸ್​ ಸೋಂಕಿತರಲ್ಲಿ ಶೇ.5 ಜನರಿಗೆ ಉಸಿರಾಟದ ತೊಂದರೆ ಹೆಚ್ಚಾಗುವ ಕಾರಣ ಅವರನ್ನು ವೆಂಟಿಲೇಟರ್​ ಮೂಲಕ ಉಸಿರಾಡುವಂತೆ ಮಾಡುವ ಅವಶ್ಯಕತೆ ಇದೆ.

    ಮಾರ್ಚ್​ 19ರ ನಂತರ ದೇಶದಲ್ಲಿ ವೆಂಟಿಲೇಟರ್​ಗಳ ರಫ್ತನ್ನು ನಿಷೇಧಿಸಲಾಗಿದೆ. ಕರೊನಾ ಸೋಂಕಿತರಿಗೆ ಐಸಿಯು ವ್ಯವಸ್ಥೆ ಮಾಡುವ ಸಲುವಾಗಿ ಕೆಲವು ಶಸ್ತ್ರಚಿಕಿತ್ಸೆಗಳನ್ನೂ ಸಹ ಮುಂದೂಡಲಾಗಿದೆ. ದೇಶದಾದ್ಯಂತ ಅನೇಕ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು ಕೆಲ ರಾಜ್ಯಗಳನ್ನು ಸಂಪೂರ್ಣವಾಗಿ ಲಾಕ್​ ಡೌನ್​ ಮಾಡಲಾಗಿದೆ. (ಏಜೆನ್ಸೀಸ್​)

    ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಬಿಜೆಪಿಯ ಶಿವರಾಜ್​ ಸಿಂಗ್​ ಚೌಹಾಣ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts