More

    ಕಾಂಗ್ರೆಸ್​, ಜೆಡಿಎಸ್​ ಒಂದೇ ನಾಣ್ಯದ ಎರಡು ಮುಖಗಳು; ಸಂಸದ ಎಸ್​.ಮುನಿಸ್ವಾಮಿ ಟೀಕೆ 

    ಬಂಗಾರಪೇಟೆ ಗ್ರ್ರಾಮಾಂತರ: ಕ್ಷೇತ್ರದಲ್ಲಿ ಕಾಂಗ್ರೆಸ್​ ಶಾಸಕ ಎಸ್​.ಎನ್​. ನಾರಾಯಣಸ್ವಾಮಿ ಹಾಗೂ ಜೆಡಿಎಸ್​ ಅಭ್ಯರ್ಥಿ ಮಲ್ಲೇಶ್​ ಮುನಿಸ್ವಾಮಿ ಇಬ್ಬರೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅವರನ್ನು ನಂಬದೆ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಬೆಂಬಲಿಸಬೇಕು ಎಂದು ಸಂಸದ ಎಸ್​.ಮುನಿಸ್ವಾಮಿ ಹೇಳಿದರು.

    ಬಂಗಾರಪೇಟೆ ತಾಲೂಕಿನ ಕೆಸರನಹಳ್ಳಿ ಗ್ರಾಪಂ ವ್ಯಾಪ್ತಿಯ ತಟ್ನಹಳ್ಳಿಯಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ಬೂತ್​ ವಿಜಯ ಅಭಿಯಾನದಲ್ಲಿ ಮಾತನಾಡಿದರು. ಹತ್ತು ವರ್ಷಗಳಿಂದ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದಿದ್ದರೂ ಬಿಟ್ಟಿ ಪ್ರಚಾರದಲ್ಲಿ ತೊಡಗಿ, ಜನರನ್ನು ಯಾಮಾರಿಸುತ್ತಿರುವ ಶಾಸಕ ನಾರಾಯಣಸ್ವಾಮಿ ಒಂದೆಡೆಯಾದರೆ, ಕಳೆದ ಚುನಾವಣೆ ಬಳಿಕ ಮಲ್ಲೇಶ್​ ಮುನಿಸ್ವಾಮಿ ತಮ್ಮ ಇರುವಿಕೆಯನ್ನೇ ತೋರಿಸಲಿಲ್ಲ. ಶಾಸಕರ ದುರಾಡಳಿತದ ವಿರುದ್ಧ ಎಲ್ಲಿಯೂ ಧ್ವನಿ ಎತ್ತದೆ ಮೌನವಾಗಿದ್ದರು. ಆದ್ದರಿಂದ ಇವರಿಬ್ಬರೂ ಒಂದೇ ಎಂಬುದು ತಿಳಿಯುತ್ತದೆ ಎಂದು ಟೀಕಿಸಿದರು.

    ರೋಗಿಗಳಿಲ್ಲದೆ ಸುತ್ತಾಡಿದ ಆ್ಯಂಬುಲೆನ್ಸ್​: ಕರೊನಾ ಲಾಕ್​ಡೌನ್​ ಸಮಯದಲ್ಲಿ ಮಲ್ಲೇಶ್​ ಮುನಿಸ್ವಾಮಿ ಅವರು ಆ್ಯಂಬುಲೆನ್ಸ್​ ನೀಡಿದ್ದು, ಅದರಲ್ಲಿ ರೋಗಿಗಳಿಲ್ಲದಿದ್ದರೂ ನಿತ್ಯ ಪ್ರಚಾರಕ್ಕಾಗಿ ಆಂಬ್ಯುಲೆನ್ಸ್​ ಸಂಚರಿಸುತ್ತಿತ್ತು. ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಜನರ ಒಳಿತಿಗಾಗಿ ಕೆಲಸ ಮಾಡದೆ ತಮ್ಮ ಸ್ವಂತ ಹಾಗೂ ಕುಟುಂಬಸ್ಥರ ಒಳಿತಿಗಾಗಿ ಹತ್ತು ವರ್ಷಗಳಿಂದ ಶ್ರಮಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

    ಜನರಿಗೆ ವಂಚನೆ: ಸರ್ಕಾರಿ ಗೋಮಾಳ ಮತ್ತು ಖರಾಬು ಜಮೀನುಗಳನ್ನು ಕಬ್ಜ ಮಾಡಿಕೊಂಡಿರುವುದೇ ಶಾಸಕರ ಸಾಧನೆ. ಈಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮಹಿಳೆಯರಿಗೆ 50 ರೂಪಾಯಿ ಬೆಲೆಬಾಳುವ ಸ್ವೆಟರ್​ಗಳನ್ನು ಹಂಚಿ ವಂಚಿಸಲು ಮುಂದಾಗಿದ್ದಾರೆ. ಇದನ್ನು ಜನರು ನಂಬದೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಗಮನಿಸಿ, ಮತ್ತೊಮ್ಮೆ ಅಧಿಕಾರಕ್ಕೆ ತರಬೇಕೆ ವಿನ@ ಭೂಗಳ್ಳರನ್ನಲ್ಲ ಎಂದರು.

    ಬಿಜೆಪಿ ಜನಪರ ಯೋಜನೆಗಳು: 176 ಕೋಟಿ ರೂ. ವೆಚ್ಚದಲ್ಲಿ ಕ್ಷೇತ್ರದ ಮನೆ ಮನೆಗೂ ನೀರು ಪೂರೈಸಲು ಕೇಂದ್ರ ಸರ್ಕಾರ ಹಣ ಮಂಜೂರು ಮಾಡಿದೆ. ಎಲ್ಲರ ಆರೋಗ್ಯಕ್ಕಾಗಿ ಆಯುಷ್ಮಾನ್​ ಭಾರತ್​ ಆರೋಗ್ಯಕಾರ್ಡ್​ ನೀಡಿದೆ. ಬಡವರಿಗೆ ಎರಡು ವರ್ಷದಿಂದ ಉಚಿತ ಅಕ್ಕಿ ನೀಡಿದ್ದು, ಈಗ ಮತ್ತೆ ಒಂದು ವರ್ಷಕ್ಕೆ ವಿಸ್ತರಿಸಿದೆ. ಬಡ ವರ್ಗದವರಿಗೆ ಉಚಿತ ಗ್ಯಾಸ್​ ನೀಡಿದೆ. ಕರೊನಾ ಸಮಯದಲ್ಲಿ ಉಚಿತ ಚಿಕಿತ್ಸೆ ನೀಡಿ ಜನರ ಪ್ರಾಣರಕ್ಷಣೆ ಮಾಡುವುದರ ಜತೆಗೆ ಕರೊನಾದಿಂದ ಸುರಕ್ಷಿತರಾಗಿರಲು ಉಚಿತ ಲಸಿಕೆ ವಿತರಿಸಿದೆ. ಕಿಸಾನ್​ ಸಮ್ಮಾನ್​ ಯೋಜನೆ ಸೇರಿ ಹಲವು ಯೋಜನೆಗಳ ಮೂಲಕ ಸರ್ಕಾರದ ಸಹಾಯಧನ ನೇರವಾಗಿ ಫಲಾನುಭವಿಗಳಿಗೆ ತಲುಪಿಸಲು ಕೇಂದ್ರ ಶ್ರಮ ವಹಿಸಿದೆ ಎಂದರು.

    ಮಾಜಿ ಶಾಸಕ ಬಿ.ಪಿ. ವೆಂಕಟಮುನಿಯಪ್ಪ, ಕೆ.ಚಂದ್ರಾರೆಡ್ಡಿ, ಬಿ.ವಿ.ಮಹೇಶ್​, ಬೂತ್​ ಕಮಿಟಿ ವಿಸ್ತಾರಕ ಆನಂದ್​, ಬಿಜೆಪಿ ತಾಲೂಕು ಅಧ್ಯಕ್ಷ ನಾಗೇಶ್​, ಶ್ರೀನಿವಾಸಗೌಡ, ಅಮರೇಶ್​, ಕಪಾಲಿ ಶಂಕರ್​, ಚೌಡಪ್ಪ, ಶಾಂತಿನಗರ ಮಂಜುನಾಥ್​ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts