More

    ಗ್ಯಾರಂಟಿ ವಿಷಯದಲ್ಲಿ ನುಡಿದಂತೆ ನಡೆದ ಕಾಂಗ್ರೆಸ್

    ಗೋಣಿಕೊಪ್ಪ: ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್ ಪಕ್ಷ ನೀಡಿದ ಐದು ಗ್ಯಾರಂಟಿ ಭರವಸೆಗಳನ್ನು ಅಧಿಕಾರಕ್ಕೆ ಬಂದ ನಂತರ ನುಡಿದಂತೆ ಈಡೇರಿಸಿದ್ದೇವೆ. ಇದು ದೇಶದಲ್ಲಿಯೇ ಪ್ರಥಮ ಎಂದು ಶಾಸಕ ಎ.ಎಸ್ ಪೊನ್ನಣ್ಣ ಹೇಳಿದರು.

    ಗೋಣಿಕೊಪ್ಪಲುವಿನ ಕಿತ್ತಳೆ ಬೆಳಗಾರರ ಸಂಘದ ಆವರಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಪೊನ್ನಂಪೇಟೆ ಬಾಕ್ ಕಾಂಗ್ರೆಸ್ ಬೂತ್ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಹೇಳಿದ್ದಾರೆ.

    ನುಡಿದಂತೆ ನಡೆದಿರುವ ನಮ್ಮ ಸರ್ಕಾರದ ಗ್ಯಾರಂಟಿಯನ್ನು ಜನಗಳ ಮುಂದೆ ಹೋಗಿ ಹೇಳುವ ಮೂಲಕ ಲೋಕ ಸಭಾ ಅಭ್ಯರ್ಥಿ ಲಕ್ಷ್ಮಣ್‌ಗೌಡ ಅವರಿಗೆ ಮತ ಕೇಳಬೇಕು ಎಂದು ಶಾಸಕ ಎ.ಎಸ್.ಪೊನ್ನಣ್ಣ ಮನವಿ ಮಾಡಿದರು.

    ಧರ್ಮ ಪಾಲನೆ ಮಾಡುತ್ತಿರುವವರು ಕಾಂಗ್ರೆಸ್ ಪಕ್ಷ. ಧರ್ಮ ರಾಜಕಾರಣ ಮಾಡುತ್ತಿರುವವರು ಬಿಜೆಪಿ ಪಕ್ಷದವರು ಎಂದು ಹೇಳಿದರು. ನನ್ನ ಮನೆಗೆ ಯಾರು ಬೇಕಾದರೂ ಬರಬಹುದು ಆದರೆ, ಅರಮನೆಗೆ ಹೋಗಬೇಕಾದರೆ ಟಿಕೆಟ್ ತೆಗೆದುಕೊಂಡೇ ಹೋಗಬೇಕು ಎಂದು ಪರೋಕ್ಷವಾಗಿ ಯದುವೀರ್ ಅವರಿಗೆ ಟಾಂಗ್ ನೀಡಿದರು. ತಲಕಾವೇರಿ ಅಭಿವೃದ್ಧಿಗೆ ಹಾಗೂ ತುಲಾ ಸಂಕ್ರಮಣ ಆಚರಣೆಗೆ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಅವರಲ್ಲಿ ಮನವಿ ಮಾಡಿದಾಗ ಕೂಡಲೇ ರೂ.2.60 ಕೋಟಿ ಬಿಡುಗಡೆ ಮಾಡಿ ಸಹಕರಿಸಿದ್ದಾರೆ. ಕೊಡಗು ಜಿಲ್ಲೆಯ ಅಭಿವೃದ್ಧಿಗೆ 350 ಕೋಟಿಗೂ ಹೆಚ್ಚು ಹಣ ಬಿಡುಗಡೆಗೊಂಡು ಕಾಮಗಾರಿ ಆರಂಭಿಸಲಾಗಿದೆ ಎಂದರು.

    2014 ರಲ್ಲಿ ಮನಮೋಹನ್ ಸಿಂಗ್ ಸರ್ಕಾರ ಅಧಿಕಾರ ತ್ಯಜಿಸುವಾಗ ಭಾರತದ ಸಾಲ ರೂ.55 ಲಕ್ಷ ಕೋಟಿ ರೂ. ಇತ್ತು. ಬಿಜೆಪಿ ಸರ್ಕಾರದ 10 ವರ್ಷದ ಅವಧಿಯಲ್ಲಿ ಸಾಲ ರೂ.188 ಲಕ್ಷ ಕೋಟಿ ರೂ. ಸಾಲವಿದೆ. ಅಂದರೆ ಪ್ರತಿ ಪ್ರಜೆಯ ಮೇಲೆ ರೂ.90000 ಸಾಲದ ಹೊರೆ ಇದೆ .ಅಭಿವೃದ್ಧಿಯ ಬಗ್ಗೆ ಮಾತ್ರ ನಾವು ಚಿಂತೆನೆ ಹರಿಸುತ್ತೇವೆ ಎಂದರಲ್ಲದೆ ಸಮಗ್ರ ಅಭಿವೃದ್ಧಿಗಾಗಿ ನಿಮ್ಮೆಲ್ಲರ ಮತವು ಈ ಬಾರಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಎಂ. ಲಕ್ಷ್ಮಣ್ ಅವರಿಗೆ ನೀಡುವಂತೆ ಕರೆ ನೀಡಿದರು. ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಮುಖಂಡರು, ವಿವಿಧ ಘಟಕಗಳ ಅಧ್ಯಕ್ಷರುಗಳು ಹಾಗೂ ಬೂತ್ ಸಮಿತಿಯ ಪದಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts