More

    ಕಾಂಗ್ರೆಸಿಗರು ಬಡತನ ನಿರ್ಮೂಲನೆ ಮಾಡಿಲ್ಲ, ಬಡವರನ್ನೇ ನಿರ್ಮೂಲನೆ ಮಾಡಿದ್ರು: ಅಮಿತ್ ಷಾ

    ಬೆಂಗಳೂರು: ಗರೀಬಿ ಹಠಾವೋ ಯೋಜನೆ ತಂದರೂ ಕಾಂಗ್ರೆಸಿಗರು ಬಡತನ ನಿರ್ಮೂಲನೆ ಮಾಡಿಲ್ಲ, ಬಡವರನ್ನೇ ನಿರ್ಮೂಲನೆ ಮಾಡಿದರು ಎಂದು ಎಂದು ಕೇಂದ್ರ ಗೃಹಸಚಿವ ಅಮಿತ್ ಷಾ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕ ಪ್ರವಾಸದಲ್ಲಿರುವ ಅವರು ಇಂದು ಅರಮನೆ ಮೈದಾನದಲ್ಲಿ ಬಿಜೆಪಿ ಬೆಂಗಳೂರು ಮಹಾನಗರ ಬೂತ್ ವಿಜಯ ಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

    ಕಾಂಗ್ರೆಸಿಗರು ಬಡವರನ್ನೇ ನಿರ್ಮೂಲನೆ ಮಾಡಿದರು, ಅವರನ್ನು ಅಭಿವೃದ್ಧಿ ಆಗದಂತೆ ನೋಡಿಕೊಂಡರು. ಆದರೆ ನರೇಂದ್ರ ಮೋದಿ ಅವರ ಸರ್ಕಾರ ಬಡವರ ಅಭಿವೃದ್ಧಿಗೆ ಹಲವು ಯೋಜನೆ ತಂದಿತು. ಕರೊನಾ ಬಂದಾಗಲೂ ಮೋದಿಯವರು ಲಸಿಕೆ ತಂದು ಎಲ್ಲರಿಗೂ ಉಚಿತವಾಗಿ ಕೊಡಿಸಿದರು. ದೇವೇಗೌಡ, ಸಿದ್ದರಾಮಯ್ಯ ಬಡವರ ಬಗ್ಗೆ ಮಾತನಾಡುತ್ತಾರೆ, ಅವರು ಬಡತನ ನಿರ್ಮೂಲನೆ ಮಾಡಿದ್ರಾ? ಬಹಿರಂಗ ಚರ್ಚೆಗೆ ಬರಲಿ, ನಾನು ಸವಾಲು ಹಾಕುತ್ತೇನೆ ಎಂದು ಷಾ ಹೇಳಿದರು.

    ಪಿಎಫ್​ಐ ಸಂಘಟನೆಯನ್ನು ನರೇಂದ್ರ ಮೋದಿಯವರು ಬ್ಯಾನ್ ಮಾಡಿದರು. ಸಿದ್ದರಾಮಯ್ಯ-ಕುಮಾರಸ್ವಾಮಿ ಅಂಥವರ ಮೇಲಿನ ಕೇಸ್ ವಾಪಸ್ ಪಡೆದರು. ಕಾಂಗ್ರೆಸ್-ಜೆಡಿಎಸ್ ಒಂದೇ ನಾಣ್ಯದ ಎರಡು ಮುಖ. ಜೆಡಿಎಸ್​ನವರು ನಮ್ಮ ಜೊತೆ ಬರಲು ಯತ್ನಿಸುತ್ತಾರೆ. ಆದರೆ ನಾವು ಯಾರ ಜೊತೆಗೂ ಮೈತ್ರಿ ಮಾಡಿಕೊಳ್ಳಲ್ಲ. ಈ ಸಲ ನೇರಾನೇರ ತ್ರಿಕೋನ ಹೋರಾಟ ಇರಲಿದೆ, ನಾವು ನೇರವಾಗಿ ಸ್ಪರ್ಧೆ ಮಾಡಿ ವಿಜಯ ಪಡೆಯುತ್ತೇವೆ, ಯಾರು ಬೇಕು ಎಂದು ಜನರು ತೀರ್ಮಾನ ಮಾಡಲಿ ಎಂದು ಷಾ ಹೇಳಿದರು.

    ಮುಂದಿನ ಬಾರಿ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರಬೇಕು. ಮೋದಿಯವರು ನಮ್ಮ ಚುನಾವಣೆ ನೇತೃತ್ವ ವಹಿಸಲಿದ್ದಾರೆ. ಮೋದಿಯವರ ಸಂದೇಶ ತೆಗೆದುಕೊಂಡು ಮನೆ ಮನೆಗೆ ಹೋಗಬೇಕು ಎಂದು ಬೂತ್ ಕಾರ್ಯಕರ್ತರಿಗೆ ಷಾ ಕರೆ ನೀಡಿದರು. ಒಂದು ಬಾರಿ ಬಿಜೆಪಿಗೆ ಬಹುಮತ ನೀಡಿ, ಕುಟುಂಬ ರಾಜಕಾರಣದ, ಜಾತಿವಾದದ, ಭ್ರಷ್ಟಾಚಾರ ಪಕ್ಷವನ್ನ ಮೂಲೆಗೆ ಕಳುಹಿಸಿ ಎಂದು ಷಾ ಹೇಳಿದರು.

    ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ಅಶೋಕ್, ಅಶ್ವತ್ಥ ನಾರಾಯಣ, ಮುನಿರತ್ನ, ಗೋಪಾಲಯ್ಯ, ಕೋಟ ಶ್ರೀನಿವಾಸ ಪೂಜಾರಿ. ಶಾಸಕ ಅರವಿಂದ ಲಿಂಬಾವಳಿ ಮುಂತಾದವರು ಈ ಸಮಾವೇಶದಲ್ಲಿ ಉಪಸ್ಥಿತರಿದ್ದಾರೆ.

    5 ಕೊಲೆ ಮಾಡಿದ್ದವ 28 ವರ್ಷಗಳ ಬಳಿಕ ಸಿಕ್ಕಿಬಿದ್ದ!; 3 ತಿಂಗಳಿಂದ 5 ವರ್ಷದೊಳಗಿನ 4 ಮಕ್ಕಳನ್ನು ಹತ್ಯೆ ಮಾಡಿದ್ದ!

    ಸರ್ವರೋಗಕ್ಕೂ ಇದೇ ಮದ್ದು!; ಚಿನ್ನಕ್ಕಿಂತಲೂ ದುಬಾರಿ ಈ ವಸ್ತು: ಇದಕ್ಕೆಂದೇ ಚೀನಾದವರು ಭಾರತದೊಳಕ್ಕೆ ನುಗ್ಗಿದ್ದಾರೆ ಹಲವು ಸಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts