More

    ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಬಂದ್!; ಇನ್ಯಾವ ರಸ್ತೆಗಳಲ್ಲಿ ನಿರ್ಬಂಧ? ಇಲ್ಲಿದೆ ಮಾಹಿತಿ..

    ರಾಮನಗರ: ಇನ್ನೇನು ಕೆಲವೇ ಗಂಟೆಗಳಲ್ಲಿ ಹೊಸ ವರ್ಷಾಚರಣೆಯ ಚಟುವಟಿಕೆ ಬಿರುಸುಗೊಳ್ಳಲಿದೆ. ಹೊಸ ವರ್ಷವನ್ನು ಆಚರಿಸಲು ಹಲವರು ಹಲವು ರೀತಿಯ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಅದರಲ್ಲೂ ಇತ್ತೀಚೆಗಷ್ಟೇ ಆಗಿರುವ ಬೆಂಗಳೂರು-ಮೈಸೂರು ದಶಪಥದಲ್ಲಿ ಲಾಂಗ್​ಡ್ರೈವ್ ಹೋಗಿ ಹೊಸ ವರ್ಷಾಚರಣೆ ಮಾಡಬೇಕು ಎಂದು ಯಾರಾದರೂ ಪ್ಲ್ಯಾನ್ ಮಾಡಿಕೊಂಡಿದ್ದರೆ ಅದನ್ನು ರದ್ದುಗೊಳಿಸಬೇಕಾಗುತ್ತದೆ. ಏಕೆಂದರೆ, ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಬಂದ್ ಆಗಿರಲಿದೆ.

    ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಸುರಕ್ಷತೆ ಹಾಗೂ ಭದ್ರತೆಗಾಗಿ ಪೊಲೀಸರು ಹಲವು ಕ್ರಮಗಳನ್ನು ಕೈಗೊಂಡಿದ್ದು, ಅದರಲ್ಲಿ ಕೆಲವು ಹೆದ್ದಾರಿಗಳಲ್ಲಿನ ಸಂಚಾರಕ್ಕೆ ನಿರ್ಬಂಧ ವಹಿಸಿರುವಂಥದ್ದೂ ಇದೆ. ರಾಮನಗರ ಪೊಲೀಸರು ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಬಂದ್ ಮಾಡಿ ಆದೇಶ ಹೊರಡಿಸಿದ್ದಾರೆ. ಇಂದು ಸಂಜೆ 5.30ಕ್ಕೇ ಈ ಹೆದ್ದಾರಿ ಮುಚ್ಚಲ್ಪಡಲಿದ್ದು, ಬೆಳಗ್ಗೆ 4 ಗಂಟೆವರೆಗೂ ಬಂದ್ ಆಗಿರಲಿದೆ.

    ಅದೇ ರೀತಿ ರಾಮನಗರ-ಚನ್ನಪಟ್ಟಣ ಬೈಪಾಸ್​ನಲ್ಲಿನ ಸಂಚಾರಕ್ಕೂ ಇಂದು ಸಂಜೆ.5:30ರಿಂದ ನಾಳೆ ಬೆಳಗ್ಗೆ 4 ಗಂಟೆ ವರೆಗೆ ನಿರ್ಬಂಧ ವಿಧಿಸಲಾಗಿದೆ. ಮತ್ತೊಂದೆಡೆ ಕುಂಬಳಗೋಡು ಮೇಲ್ಸೇತುವೆಗೂ ನಿರ್ಬಂಧ ವಿಧಿಸಲಾಗಿದ್ದು, ರಾತ್ರಿ 8ರಿಂದ ಬೆಳಗ್ಗೆ 5ರ ವರೆಗೆ ಇದು ಬಂದ್ ಆಗಿರಲಿದೆ. ಆದರೆ ಹಳೇ ಹೆದ್ದಾರಿಯಲ್ಲಿ ಸಂಚಾರಕ್ಕೆ ಸಂಚಾರಕ್ಕೆ ಅವಕಾಶ ಇರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಂಭಾವ್ಯ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮಗಳನ್ನು ರಾಮನಗರ ಪೊಲೀಸರು ಜರುಗಿಸಿದ್ದಾರೆ. ರಾತ್ರಿ 12.30 ವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶ ಇರಲಿದ್ದು, ಸಂಭ್ರಮಾಚರಣೆ ನೆಪದಲ್ಲಿ ಪುಂಡಾಟಿಕೆ ಮಾಡಿದರೆ ಎಫ್​ಐಆರ್ ಹಾಕುವುದಾಗಿ ಎಚ್ಚರಿಕೆಯನ್ನೂ ವಿಧಿಸಿದ್ದಾರೆ. ಎಲ್ಲೆಡೆ ಪೊಲೀಸರ ಕಣ್ಗಾವಲು ಇದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ರಾಮನಗರ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

    5 ಕೊಲೆ ಮಾಡಿದ್ದವ 28 ವರ್ಷಗಳ ಬಳಿಕ ಸಿಕ್ಕಿಬಿದ್ದ!; 3 ತಿಂಗಳಿಂದ 5 ವರ್ಷದೊಳಗಿನ 4 ಮಕ್ಕಳನ್ನು ಹತ್ಯೆ ಮಾಡಿದ್ದ!

    ಸರ್ವರೋಗಕ್ಕೂ ಇದೇ ಮದ್ದು!; ಚಿನ್ನಕ್ಕಿಂತಲೂ ದುಬಾರಿ ಈ ವಸ್ತು: ಇದಕ್ಕೆಂದೇ ಚೀನಾದವರು ಭಾರತದೊಳಕ್ಕೆ ನುಗ್ಗಿದ್ದಾರೆ ಹಲವು ಸಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts