More

    ಮತ ಪತ್ರ ಅನೂರ್ಜಿತ ತಂತ್ರ ಬಯಲು, ಸಿಎಲ್ಪಿಯಲ್ಲಿ ಚರ್ಚೆ!

    ಮತದಾನ ಕೇಂದ್ರದಲ್ಲಿ ಪೆನ್ನು, ಮೊಬೈಲ್ ಬಳಸದಂತೆ ಸಿಎಂ ತಾಕೀತು

    ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ತಮ್ಮ‌ ಪರವಾಗಿ ನಿರ್ಧಾರ ಕೈಗೊಳ್ಳುವಂತೆ ಎದುರಾಳಿಗಳು ಆಮಿಷ ಒಡ್ಡಿದ್ದಾರೆಂದು ಕಾಂಗ್ರೆಸ್‌ನ ಹಲವು ಶಾಸಕರು ಶಾಸಕಾಂಗ ಪಕ್ಷ ಸಭೆಯಲ್ಲಿ ಹೇಳಿಕೊಂಡಿದ್ದಾರೆ. ಮತಪತ್ರದಲ್ಲಿ ಅನೂರ್ಜಿತ ಆಗುವಂತೆ ಮತದಾನ ಮಾಡಿದಲ್ಲಿ ಹಣ ನೀಡುವುದಾಗಿ ಆಮಿಷವೊಡ್ಡಿದ್ದಾರೆಂದು ಕೆಲವು ಶಾಸಕರು ಸಭೆಯಲ್ಲಿ ಹೇಳಿದ್ದಾರೆ ಎಂದು ಗೊತ್ತಾಗಿದೆ.

    ಮತಪತ್ರದಲ್ಲಿ ಡಾಟ್ ಇಡುವುದು, ಸೂಕ್ತವಲ್ಲದ ಸಂಖ್ಯೆ ಮಾಡುವುದರಿಂದ ಮತ ಅನೂರ್ಜಿತವಾಗಲಿದೆ. ಆಗ ಮೂವರು ಕೈ ಅಭ್ಯರ್ಥಿ ಪೈಕಿ ಒಬ್ಬರಿಗೆ ಸೋಲಾಗಲಿದೆ. ಇದರಿಂದಾಗಿ ಪ್ರತಿಪಕ್ಷಗಳ ಐದನೇ ಅಭ್ಯರ್ಥಿ ಗೆಲುವಿಗೆ ಸಹಕಾರಿ ಆಗಲಿದೆ ಎಂಬ ಲೆಕ್ಕಾಚಾರ ಅಡಗಿದೆ ಎಂದು ಸಭೆಯಲ್ಲಿ ಚರ್ಚೆಯಾಗಿದೆ.

    ಇನ್ನು ಕೆಲವರಿಂದ ದೂರವಾಣಿ ಕರೆ ಬಂದಿದ್ದು, ಭೇಟಿಗೆ ಯತ್ನಿಸಿರುವ ವಿಚಾರವನ್ನೂ ಶಾಸಕರು ಸಭೆಯ ಗಮನಕ್ಕೆ ತಂದಿದ್ದಾರೆ. ಶಾಸಕರ ಮಾತು ಆಲಿಸಿದ ಬಳಿಕ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಒಂದಷ್ಟು ಸಲಹೆ, ಸೂಚನೆ ನೀಡಿದ್ದಾರೆ.

    ನಮಗೆ ನಮ್ಮ ಶಾಸಕರ ಮೇಲೆ ಸಂಪೂರ್ಣ ವಿಶ್ವಾಸ ಇದೆ. ಪ್ರತಿಪಕ್ಷಗಳ ನಾಯಕರು ಆಮಿಷವೊಡ್ಡಿರುವುದನ್ನು ನೇರವಾಗಿಯೇ ಹೇಳಿದ್ದೀರಿ.‌ ನನಗೆ ಈಗಲೂ ನೂರಕ್ಕೆ ನೂರು ವಿಶ್ವಾಸ ಇದೆ. ನಮ್ಮ ಮೂವರೂ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ. ಆದರೆ, ಮತ ಚಲಾಯಿಸುವಾಗ ಎಚ್ಚರಿಕೆ ವಹಿಸುವುದು ಅತ್ಯವಶ್ಯ ಎಂದು ಹೇಳಿದ್ದಾರೆ.

    ಮೊಬೈಲ್, ಪೆನ್ನು ಒಳಗೆ ತೆಗೆದುಕೊಂಡು ಹೋಗಬೇಡಿ. ಹೇಗೆ ಮತ ಚಲಾಯಿಸಬೇಕೆಂದು ಹೇಳಿದ್ದೇವೆಯೋ ಹಾಗೆಯೇ ಮಾಡಬೇಕು. ಈ ವಿಚಾರದಲ್ಲಿ ಯಾರೂ ನಿರ್ಲಕ್ಷ್ಯ ತೋರಬಾರದು ಎಂದು ತಿಳಿ ಹೇಳಿದ್ದಾರೆ.

    ಅನುಮತಿ ಪಡೆದು ಮೂವರು ಗೈರು: 

    ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಗೆ ಮೂವರು ಶಾಸಕರು ಗೈರುಹಾಜರಾಗಿದ್ದರು. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಭದ್ರಾವತಿ ಶಾಸಕ ಸಂಗಮೇಶ್ ಹಾಗೂ ಮುದ್ದೆಬಿಹಾಳ ಶಾಸಕ ಅಪ್ಪಾಜಿ ನಾಡಗೌಡ ಗೈರಾಗಿದ್ದು, ಸಭೆಗೆ ಬರಲಾಗುತ್ತಿಲ್ಲವೆಂದು ಸಿಎಂ ಸಿದ್ದರಾಮಯ್ಯ ಗಮನಕ್ಕೆ ತಂದಿದ್ದಾರೆಂದು ಮೂಲಗಳು ತಿಳಿಸಿವೆ. ಮಂಗಳವಾರ ಮತದಾನ ಮಾಡಲು ನೇರವಾಗಿ ವಿಧಾನಸೌಧಕ್ಕೆ ಬರಲು ಅವಕಾಶ ನೀಡಲಾಗಿದೆ.

    IPL 2024: ಈ ಸ್ಟಾರ್​ ಆಟಗಾರ ಇಲ್ಲದಿದ್ದರೆ ಐಪಿಎಲ್ ನೋಡಲು ಬಲುಕಷ್ಟ ಅಂತಿದ್ದಾರೆ ಫ್ಯಾನ್ಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts