More

    ಬಡವರಿಗೆ ಮೋಸ ಮಾಡಿದ್ದ ಕಾಂಗ್ರೆಸ್

    ಗೋಕರ್ಣ: ಈ ಹಿಂದೆ 2013ರಿಂದ 2018ರ ತನಕ ರಾಜ್ಯದಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್ ಸರ್ಕಾರ ತನ್ನ ಅಧಿಕಾರಾವಧಿಯ ಕೊನೆಯಲ್ಲಿ ವಸತಿ ಯೋಜನೆಯಡಿ 1 ಲಕ್ಷ ಮನೆ ಒದಗಿಸುವ ಯೋಜನೆ ಘೋಷಣೆ ಮಾಡಿ, ಅಗತ್ಯ ಹಣಕಾಸು ಒದಗಿಸದೆ ಆದೇಶ ಪತ್ರ ಜನರಿಗೆ ನೀಡಿ ಮೋಸ ಮಾಡಿತ್ತು ಎಂದು ಶಾಸಕ ದಿನಕರ ಶೆಟ್ಟಿ ಆರೋಪಿಸಿದರು.

    ಇಲ್ಲಿನ ಗಂಗಾ-ವಿಶ್ವೇಶ್ವರ ಸಭಾಭವನದಲ್ಲಿ ನೂರಕ್ಕೂ ಹೆಚ್ಚು ಫಲಾನುಭವಿಗಳಿಗೆ ಗುರುವಾರ ವಸತಿ ಯೋಜನೆ ಕಾಮಗಾರಿಗಳ ಆದೇಶ ಪತ್ರ ವಿತರಿಸಿ ಅವರು ಮತನಾಡಿದರು.

    ನೆರೆ ಪೀಡಿತರಿಗೆ ನೀಡುತ್ತಿದ್ದ ತುರ್ತು ನೆರವನ್ನು ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ. ಹಿಂದಿನ ಬಿಜೆಪಿ ಸರ್ಕಾರ ಪ್ರವಾಹ ಪೀಡಿತ ಪ್ರತಿ ಮನೆಗೆ ಕೇಂದ್ರ ಸರ್ಕಾರದ 5 ಸಾವಿರ ರೂ. ಸೇರಿ 10 ಸಾವಿರ ರೂ. ತುರ್ತು ನೆರವು ನೀಡುತ್ತಿತ್ತು. ಆದರೆ. ಕಾಂಗ್ರೆಸ್ ಸರ್ಕಾರ ಕೇಂದ್ರದಿಂದ ಬರುವ 5 ಸಾವಿರ ರೂ. ಮಾತ್ರ ಕೊಟ್ಟು ತನ್ನ ಪಾಲಿನ 5 ಸಾವಿರ ರೂ. ನೆರೆ ಪೀಡಿತರಿಗೆ ಕೊಡದೆ ಬೇಜವಾಬ್ದಾರಿ ತೋರುತ್ತಿದೆ. ಇದರಿಂದ ನೆರೆಗೆ ಸಿಲುಕಿ ಸಂತ್ರಸ್ತರಾದ ಅನೇಕ ಬಡವರು ತೊಂದರೆ ಹೆಚ್ಚಾಗುವಂತಾಗಿದೆ ಎಂದರು.

    ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣ ಗೋಕರ್ಣದ ಅಭಿವೃದ್ಧಿಯ ದೃಷ್ಟಿಯಿಂದ ಇಲ್ಲಿನ ಗ್ರಾಮ ಪಂಚಾಯಿತಿ ಮೇಲ್ದರ್ಜೆಗೇರಿಸಿ, ಪಟ್ಟಣ ಪಂಚಾಯಿತಿ ಮಾಡುವ ಬಗ್ಗೆ ಹಿಂದಿನ ಸರ್ಕಾರದ ಅವಧಿಯಲ್ಲಿಯೇ ಎಲ್ಲ ಅಗತ್ಯ ಕಾರ್ಯ ಪೂರ್ಣಗೊಳಿಸಲಾಗಿದೆ. ಇದರ ಕುರಿತು ಕೂಡ ಈಗಿನ ಸರ್ಕಾರ ತ್ವರಿತವಾಗಿ ಆದೇಶಿಸಿ ಗೋಕರ್ಣಕ್ಕೆ ನ್ಯಾಯ ಒದಗಿಸಲು ಸರ್ವ ಪ್ರಯತ್ನ ಕೈಗೊಳ್ಳಲಾಗುವುದು ಎಂದರು.

    ಗೋಕರ್ಣ, ಹನೇಹಳ್ಳಿ ಮತ್ತು ನಾಡುಮಾಸ್ಕೇರಿ ಪಂಚಾಯಿತಿಗಳ ನೂರಕ್ಕೂ ಹೆಚ್ಚಿನ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಲಾಯಿತು.

    ಪಂಚಾಯಿತಿ ಅಧ್ಯಕ್ಷ ಮಂಜುನಾಥ ಜನ್ನು ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷರಾದ ಭಾರತಿ ಗೌಡ, ಧನಶ್ರೀ ಅಂಕೋಲೆಕರ, ಉಪಾಧ್ಯಕ್ಷರಾದ ಭರತ ಗಾಂವಕರ, ಶಾರದಾ ಮೂಡಂಗಿ ವೇದಿಕೆಯಲ್ಲಿದ್ದರು. ಗ್ರಾಪಂ ಪಿಡಿಒಗಳಾದ ವಿನಯಕುಮಾರ, ಪವಿತ್ರಾ ತಾರ್ಕರ್, ವಿನಾಯಕ ನಾಯ್ಕ, ಕಾರ್ಯದರ್ಶಿಗಳಾದ ವಿನಾಯಕ ಸಿದ್ದಾಪುರ, ಶ್ರೀಧರ ಬೋಮ್ಕರ ಮತ್ತು ಸಿಬ್ಬಂದಿ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts