More

    ‘ಕೈ ಹಿಡಿಯಿರಿ ಮುನ್ನಡೆಯಿರಿ’ ಎಂಬ ಕಾರ್ಯಕ್ರಮದಡಿ ಕಾಂಗ್ರೆಸ್ ಪ್ರಚಾರ !

    ಮಹಾಲಿಂಗಪುರ: ಸಿದ್ದರಾಮಯ್ಯ ಸರ್ಕಾರ ವಿಧಾನಸಭೆ ಚುನಾವಣೆಯಲ್ಲಿ ಪಂಚ ಗ್ಯಾರಂಟಿಗಳ ಪ್ರಣಾಳಿಕೆ ಘೋಷಿಸಿ ಅನುಷ್ಠಾನಕ್ಕೆ ತಂದ ರೀತಿಯಲ್ಲೇ ಕೇಂದ್ರ ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿರುವ ಎಲ್ಲ ಅಂಶಗಳನ್ನು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಕೂಡಲೇ ಜಾರಿಗೊಳಿಸಲಾಗುವುದೆಂದು ಕಾಂಗ್ರೆಸ್ ಪಕ್ಷದ ಕವಿತಾ ಸಿದ್ದು ಕೊಣ್ಣೂರ ಹೇಳಿದರು.

    ‘ಕೈ ಹಿಡಿಯಿರಿ ಮುನ್ನಡೆಯಿರಿ’ ಎಂಬ ಕಾರ್ಯಕ್ರಮದಡಿ ಕಾಂಗ್ರೆಸ್ ಪಕ್ಷದ ಲೋಕಸಭೆ ಚುನಾವಣೆಯ ಹುರಿಯಾಳು ಸಂಯುಕ್ತ ಪಾಟೀಲ ಪರ ಪ್ರಚಾರಾರ್ಥ ಭಾನುವಾರ ಮನೆ ಮನೆಗೆ ಕಾಂಗ್ರೆಸ್ ಗ್ಯಾರಂಟಿ ಪತ್ರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಬಿಜೆಪಿ ಹಾಗೆ ಪೊಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬರುವ ಜಾಯಮಾನ ಕಾಂಗ್ರೆಸ್ ಪಕ್ಷದ್ದಲ್ಲ. ರಾಜ್ಯದ ಸಿದ್ದರಾಮಯ್ಯ ಸರ್ಕಾರ ಅನೇಕ ಗ್ಯಾರಂಟಿಗಳನ್ನು ತಪ್ಪಿಸದೆ ಜಾರಿಗೊಳಿಸಿದ ಜನಪ್ರಿಯ ಸರ್ಕಾರ ಎಂದು ಸಾಭೀತಾಗಿದೆ. ಅದರಂತೆ ಲೋಕಸಭೆ ಪ್ರಣಾಳಿಕೆಯಲ್ಲಿ ವರಿಷ್ಠರು ಅನೇಕ ಜನ ಪರ ಯೋಜನೆಗಳನ್ನು ಘೋಷಣೆ ಮಾಡಿದ್ದು ಜನತೆ ಕಾಂಗ್ರೆಸ್ ಪಕ್ಷದ ಮೇಲೆ ಭರವಸೆ ಇಟ್ಟಿದೆ ಎಂದರು.

    ಯುವ ನ್ಯಾಯದಲ್ಲಿ ಯುವಕರಿಗೆ 1 ಲಕ್ಷ, ರೈತ ನ್ಯಾಯದಡಿ ಸಾಲ ಮನ್ನಾ, ಪಾಲುದಾರಿಕೆಯ ನ್ಯಾಯದಡಿ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಾಗಿ ಜಾತಿ ಗಣತಿ, ಮಹಿಳಾ ನ್ಯಾಯದಡಿ ಬಡ ಕುಟುಂಬದ ಪ್ರತಿ ಮಹಿಳೆಯರಿಗೆ 1 ಲಕ್ಷ, ಶ್ರಮಿಕ ನ್ಯಾಯದಡಿ ರಾಷ್ಟ್ರೀಯ ಕನಿಷ್ಠ ವೇತನ 400 ರೂಗಳನ್ನು ಜಾರಿಗೊಳಿಸಲಾಗುವುದು. ನುಡಿದಂತೆ ನಡೆದ ಸರ್ಕಾರ ಕಾಂಗ್ರೆಸ್ ಸರ್ಕಾರ. ಪಕ್ಷಕ್ಕೆ ಮತ ನೀಡುವ ಮೂಲಕ ಕೇಂದ್ರದಲ್ಲಿ ಸರ್ಕಾರ ರಚನೆಗೆ ಬೆಂಬಲಿಸಿ ಎಂದರು.

    ಮಹಿಳಾ ಮತದಾರರು ಪಡೆದ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ಗಳನ್ನು ಪ್ರದರ್ಶಿಸಿದರು. ನೂರಾರು ಮಹಿಳೆಯರು, ಕಾರ್ಯಕರ್ತರು ಭಾಗವಹಿಸಿ ಚುನಾವಣೆ ಪ್ರಚಾರ ನಡೆಸಿದರು.

    ಕಾಂಗ್ರೆಸ್ ಮುಖಂಡರಾದ ಯಲ್ಲನಗೌಡ ಪಾಟೀಲ, ಬಲವಂತಗೌಡ ಪಾಟೀಲ, ಬಸವರಾಜ ರಾಯರ, ಅರ್ಜುನ ದೊಡಮನಿ, ಮಲ್ಲಪ್ಪ ಬಾವಿಕಟ್ಟಿ, ಮಲ್ಲು ಕುಳ್ಳೋಳಿ, ಮಹಾಲಿಂಗ ಮಾಳಿ, ಲಕ್ಷ್ಮಣ ಮಾಂಗ, ಸುನೀಲಗೌಡ ಪಾಟೀಲ, ಶ್ರೀಶೈಲ ವಜ್ಜರಮಟ್ಟಿ, ವಿಠ್ಠಲ ಕುಳಲಿ, ವಿಠ್ಠಲ ಹಲಗಣಿ, ಆನಂದಯ್ಯ ಮಠಪತಿ, ಮಹೇಶ ತಂಬದಮಠ, ಮಾಲಾ ಮಾಳಿ, ಸವಿತಾ ರಾಯರ, ಭಾರತಿ ಬಾಡಗಿ, ವಿಜಯಲಷ್ಮಿ ಮಠಪತಿ, ಸಾವಿತ್ರಿ ಮಾಳಿ, ಪೂರ್ಣಿಮಾ ಬಾಡಗಿ, ಪ್ರಭಾವತಿ ಮಾಳಿ, ಬಿಸ್ಮಿಲ್ಲಾ ಪಕಾಲಿ, ಶೋಭಾ ಕೊಕಟನೂರ, ವಿದ್ಯಾ ರಾಮಣ್ಣವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts