More

    ಸಿದ್ದರಾಮಯ್ಯ ಅವರಿಗೆ ಭಾಷಾ ಪ್ರಯೋಗವೇ ಗೊತ್ತಿಲ್ಲ: ಸಚಿವ ಈಶ್ವರಪ್ಪ ಟೀಕೆ

    ಶಿವಮೊಗ್ಗ: ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಳಸುತ್ತಿರುವ ಪದಗಳು ಆಕ್ಷೇಪಾರ್ಹ. ನಮ್ಮ ಪಕ್ಷದ ರಾಜ್ಯಾಧ್ಯಕ್ಷರನ್ನು ವಿಧೂಷಕ ಎಂದು ಹೇಳಿರುವುದು ಮಾಜಿ ಸಿಎಂಗೆ ಶೋಭೆ ತರುವುದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕಿಡಿ ಕಾರಿದರು.
    ಸಿದ್ದರಾಮಯ್ಯ ನನ್ನ ಬಗ್ಗೆಯೂ ಕ್ಷುಲ್ಲಕ ಪದ ಬಳಸುತ್ತಿದ್ದಾರೆ. ನಾನು ಅವರದೇ ದಾಟಿಯಲ್ಲಿ ಉತ್ತರ ನೀಡಿದ್ದೇನೆ. ಬಹುಶಃ ಕೀಳು ಮಟ್ಟದ ಶಬ್ಧ ಬಳಸಿ ಮಾತನಾಡಿದರೆ, ಎಲ್ಲರನ್ನೂ ಏಕ ವಚನದಲ್ಲಿ ಕರೆದರೆ ಮಾತ್ರ ಸಿದ್ದರಾಮಯ್ಯ ಅವರ ಆತ್ಮಕ್ಕೆ ಶಾಂತಿ ಸಿಗಬಹುದೇನೋ ಎಂದು ಲೇವಡಿ ಮಾಡಿದರು.
    ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಸಂಸದೀಯ ಭಾಷೆಯ ಪ್ರಯೋಗವೇ ಗೊತ್ತಿಲ್ಲ. ನನಗೆ ಬ್ರೈನ್ ಇಲ್ಲ ಅಂತಾರೆ. ಸುಮ್ಮನೇ ಸರ್ಕಾರದ ಮೇಲೆ ಆರೋಪ ಮಾಡುತ್ತಾರೆ. ನಾನು ಕೆಲ ಮಾಹಿತಿಗೆ ರಾಜ್ಯಪಾಲರಿಗೆ ಪತ್ರ ಬರೆದರೆ ಅದನ್ನೇ ಟೀಕಿಸುತ್ತಾರೆ ಎಂದು ಹರಿಹಾಯ್ದರು.
    ಮುಂದಿನ ಜನ್ಮಕ್ಕೂ ಬುದ್ದಿ ಬರಲ್ಲ
    ಕರೊನಾ ನಿರ್ವಹಣೆ ಕುರಿತು ಚರ್ಚಿಸಲು ಸರ್ವ ಪಕ್ಷಗಳ ಸಭೆ ಕರೆದರೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಭೆಯ ಔಚಿತ್ಯವೇನು ಎಂದು ಪ್ರಶ್ನೆ ಮಾಡುತ್ತಾರೆ. ಅವರಿಬ್ಬರಿಗೆ ಮುಂದಿನ ಜನ್ಮಕ್ಕೂ ಬುದ್ದಿ ಬರಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
    ಕಾಂಗ್ರೆಸ್‌ನವರಿಗೆ ಈಗಲೇ ಅಧಿಕಾರ ಬೇಕಾಗಿದೆ. ಅದಕ್ಕಾಗಿ ಬಿಜೆಪಿ ಹಾಗೂ ಸರ್ಕಾರದ ವಿರುದ್ಧ ಇನ್ನಿಲ್ಲದ ಟೀಕೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಭ್ರಷ್ಟಾಚಾರ ಮಾಡಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದವರು ಹಣ ಪಡೆದಿದ್ದಾರೆ ಎಂದು ಉಪಚುನಾವಣೆ ಕಣದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬೊಬ್ಬೆ ಹಾಕುತ್ತಿದ್ದಾರೆ. ಸಿದ್ದರಾಮಯ್ಯ ಹಣ ಪಡೆದು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಸೇರಿದರಾ? ಡಿ.ಕೆ.ಶಿವಕುಮಾರ್ ಯಾವುದೇ ಭ್ರಷ್ಟಾಚಾರ ಮಾಡದೇ ಜೈಲಿಗೆ ಹೋಗಿ ಬಂದರೇ? ಎಂದು ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts