More

    ಎರಡು ದಿನಗಳಲ್ಲಿ ಕಾಂಗ್ರೆಸ್ 2ನೇ ಪಟ್ಟಿ ಪ್ರಕಟ

    ಗೊರೇಬಾಳ: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರಿರುವ ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಪಕ್ಷದ ಹೈಕಮಾಂಡ್ ಪ್ರಕಟಿಸಿದೆ. ಇನ್ನುಳಿದ ಕ್ಷೇತ್ರಗಳ ಪಟ್ಟಿ ಇನ್ನೆರಡು ದಿನಗಳಲ್ಲಿ ಪ್ರಕಟವಾಗಲಿದೆ ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

    ಗ್ರಾಮದ ಪ್ರಮುಖ ಆರ್.ಮೊಹನರಡ್ಡಿಗೌಡ ಹಾಗೂ ಕುಟುಂಬದವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಖಚಿತ. ಹೈಕಮಾಂಡ್ ಮಾಡಿಸಿರುವ ಸಮೀಕ್ಷೆಯಂತೆ ನನಗೇ ಪಕ್ಷದ ಟಿಕೆಟ್ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಜಿ.ಪಂ. ಮಾಜಿ ಸದಸ್ಯ ಶಿವನಗೌಡ ಎಲೆಕೂಡ್ಲಿಗಿ, ಪ್ರಮುಖರಾದ ಲಿಂಗಪ್ಪ ಸಾಹುಕಾರ ದಢೇಸುಗೂರು, ಬಸವರಾಜ ಹಿರೇಗೌಡ ರೌಡಕುಂದ, ರಾಜುಗೌಡ ಬಾದರ್ಲಿ, ಯಂಕೋಬ ಕಲ್ಲೂರು, ಎಂ.ರಂಗನಗೌಡ, ಸಣ್ಣ ಭೀಮನಗೌಡ, ಪಾಲ ರಾಮಪ್ಪ, ದುರ್ಗಾಪ್ರಸಾದ, ಎಂ.ಲಕ್ಷ್ಮಣರಾವ್, ಮಲ್ಲಿಕಾರ್ಜುನ ಗೌಡ, ಎಚ್.ಶರಣೇಗೌಡ ಇಂಗಳಿಗಿ, ಎನ್.ವೆಂಕಟೇಶ್ವರ ರಾವ್, ಸಿಂಹಾದ್ರಿ ಶರಣೇಗೌಡ, ಆರ್.ರಾಮನಗೌಡ, ಆರ್.ಪಾಲಾಕ್ಷಗೌಡ, ಆರ್.ವಿರುಪನಗೌಡ, ಎಸ್.ವಿರುಪನಗೌಡ, ರಾಜಶೇಖರಗೌಡ ಹುಲಿ, ಆರ್.ಮಹೇಶ್ ಗೌಡ, ಆರ್.ಬಸವನಗೌಡ, ಮಲ್ಲಿಕಾರ್ಜುನ ಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts