More

    2 ವರ್ಷದ ಮಗು ಸೇರಿ ಒಂದೇ ಕುಟುಂಬದ 25 ಮಂದಿಗೆ ಕರೊನಾ ಸೋಂಕು: ಕಾರಣ ಕೇಳಿದ್ರೆ ದಂಗಾಗ್ತೀರಾ!

    ಸಾಂಗ್ಲಿ: ಮಹಾರಾಷ್ಟ್ರದ ಸಾಂಗ್ಲಿ ಪಟ್ಟಣದಲ್ಲಿ ಒಂದೇ ಕುಟುಂಬದ 25 ಮಂದಿಗೆ ಕರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಅದಕ್ಕೆ ಕಾರಣ ಬಹಳ ಇಕ್ಕಟಾದ ಜಾಗದಲ್ಲಿ ವಾಸವಿದ್ದದ್ದೇ ಕಾರಣ ಎಂದು ಅಧಿಕೃತ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

    ಪ್ರಾರಂಭದಲ್ಲಿ ಸೌದಿ ಅರೇಬಿಯಾದಿಂದ ಮಾರ್ಚ್​ 23ರಂದು ತವರಿಗೆ ಮರಳಿದ್ದ ಕುಟುಂಬದ ನಾಲ್ವರು ಸದಸ್ಯರಿಗೆ ಸೋಂಕು ತಗುಲಿರುವುದು ದೃಢವಾಗಿತ್ತು. ಬಳಿಕ ಒಂದೇ ವಾರದಲ್ಲಿ 2 ವರ್ಷದ ಮಗು ಸೇರಿದಂತೆ ಕುಟುಂಬದ ಇನ್ನುಳಿದ 21 ಮಂದಿಗೂ ಕರೊನಾ ಸೋಂಕು ತಗುಲಿದೆ.

    ಸಾಂಗ್ಲಿಯ ಇಸ್ಲಾಂಪುರದಲ್ಲಿ ವಾಸವಿರುವ 25 ಮಂದಿಯುಳ್ಳ ಬಹುದೊಡ್ಡ ಕುಟುಂಬ ಇಕ್ಕಟಾದ ಸ್ಥಳದಲ್ಲಿ ವಾಸವಿತ್ತು. ಖುಷಿಯ ವಿಚಾರವೆಂದರೆ, ಪ್ರಕರಣ ಬೆಳಕಿಗೆ ಬಂದ ಈವರೆಗೂ ಸಮುದಾಯ ಹರಡುವಿಕೆಯನ್ನು ನಿರ್ವಹಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿಜಿತ್​ ಚೌಧರಿ ಭಾನುವಾರ ತಿಳಿಸಿದ್ದಾರೆ.

    ಕುಟುಂಬ ಹೊರತುಪಡಿಸಿ ಹೊರಗಿನ ಸಂಪರ್ಕ ಇಲ್ಲದಿದ್ದರಿಂದ ಸೋಂಕು ಬೇರೆಯವರಿಗೆ ಹರಡಿಲ್ಲ. ಕರೊನಾ ಸೋಂಕಿತ ವ್ಯಕ್ತಿ ಕೆಮ್ಮು ಅಥವಾ ಸೀನಿದಾಗ ಹನಿಗಳು ವಸ್ತುವಿನ ಮೇಲೆ ಬಿದ್ದು, ಅದನ್ನು ಇನ್ನುಳಿದವರು ಸ್ಪರ್ಶಿಸಿದಾಗ ಇಡೀ ಕುಟುಂಬಕ್ಕೆ ಸೋಂಕು ತಗುಲಿದೆ ಎಂದು ಚೌಧರಿ ವಿವರಿಸಿದ್ದಾರೆ. (ಏಜೆನ್ಸೀಸ್​)

    ಅಬ್ಬಬ್ಬಾ… ಎಂಥೆಂಥಾ ವೈರಸ್​ಗಳು ಜಗತ್ತನ್ನು ಕಾಡಿದ್ದವು, ಕಾಡುತ್ತಿವೆ ಗೊತ್ತ?

    ಕರೊನಾ ಲಾಕ್​ಡೌನ್​: ಜನರ ನೆರವಿಗೆ ಇಂಡಿಯನ್ ಬ್ಯಾಂಕ್​ನಿಂದ ಮೊಬೈಲ್ ಎಟಿಎಂ ಸೇವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts