More

    ಗದಗ: ಕಾಂಗ್ರೆಸ್​ ಕಾರ್ಯಕರ್ತರಿಂದ ಹಲ್ಲೆ ಆರೋಪ

    ಗದಗ:
    ಗದಗ ಶಹರದ ಕಾಶಿ ವಿಶ್ವನಾಥ ಬಡವಾಣೆ ಮತ್ತು ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ಕುರುಬ ಸಮುದಾಯದ ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್​ ಕಾರ್ಯಕರ್ತರ ಹಲ್ಲೆ ಆರೋಪ ಕೇಳಿ ಬಂದಿದೆ. ಕಾರ್ಯಕರ್ತರು ಬಿಜೆಪಿಯನ್ನು ಬೆಂಬಲಿಸಿದ ಪರಿಣಾಮ ಕಾಂಗ್ರೆಸ್​ ಕಾರ್ಯಕರ್ತರು ವಿಚಲಿತರಾಗಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.
    ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ಶಾಸಕ ಹೆಚ್​.ಕೆ.ಪಾಟೀಲ ಬೆಂಬಲಿಗರಿಂದ ಹಲ್ಲೆ ಆರೋಪ ಕೇಳಿ ಬಂದಿದ್ದು, ಹುಲಕೋಟಿ ಗ್ರಾಮದಲ್ಲಿ ಹಾಲಮತ ಮಹಾಸಭಾ ಸಭೆಯು ಕುರುಬರು ಬಿಜೆಪಿಯನ್ನು ಬೆಂಬಲಿಸಿ ಎಂದು ಮನೆ ಮನೆ ಪ್ರಚಾರ ನಡೆಸುತ್ತಿರು ಸಂದರ್ಭದಲ್ಲಿ ಹಲ್ಲೆ ನಡೆದಿದೆ ಎಂದು ಕೇಳಿ ಬಂದಿದೆ. ಕುರುಬರು ಬಿಜೆಪಿಗೆ ಬೆಂಬಲಿಸಬೇಡಿ ಮಾಡಬೇಡಿ ಅಂತ ಹಲ್ಲೆ ಮಾಡಿದ್ದಾರೆ ಎಂದು ಹಾಲುಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಆರೋಪಿಸಿದ್ದಾರೆ. ಹಾಲುಮತ ಮಹಾಸಭಾದ ಸದಸ್ಯರಾದ ಮೋಹನ್​ ಕೋರಿ, ಹನುಮಂತಪ್ಪ ನಿಂಬನಾಯಕರ್​, ರೇಣುಕರಾಜ್​ ಗುಡಿಸಲಮನಿ, ಕರಿಯಪ್ಪ ಪೂಜಾರ್​ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.
    ಹುಲಕೋಟಿಯಲ್ಲಿ ನಡೆದ ಟನೆಯಂತೆಯೇ ನಗರದ ವಾರ್ಡ್​ ನಂಬರ್​ 27ರ ಕಾಶಿ ವಿಶ್ವನಾಥ ನಗರದಲ್ಲಿ ಬಿಜೆಪಿ ಮಹಿಳಾ ಕಾರ್ಯತರ ಮೇಲೆ ಕಾಂಗ್ರೆಸ್​ ನಗರಸಭಾ ಸದಸ್ಯರ ಸಂಬಂಧಿಕರಿಂದ ಹಲ್ಲೆ ನಡೆದಿದ್ದು, ಹಲ್ಲೆ ನಡೆಸಿದವರನ್ನು ಬಂಧಿಸುವಂತೆ ಬಿಜೆಪಿ ಕಾರ್ಯಕರ್ತರು ಆರೋಪಿಸಿದರು. ಬಿಜೆಪಿ ಬೆಂಬಲಿದ ಕಾರ್ಯಕರ್ತೆ ಶೋಭಾ ಹುನಸಿಕಟ್ಟಿ ಎಂಬುವರ ಮನೆಗೆ ಕಾಂಗ್ರೆಸ್​ ಕಾರ್ಯಕರ್ತರು ನುಗ್ಗಿ ದಾಂದಲೆ ನಡೆಸಿದ್ದಾರೆ ಮತ್ತು ಕೊಚ್ಚಿ ಹಾಕುವುದಾಗಿ ಬೆದರಿಕೆ ಒಡ್ಡಿದ್ದಾರೆಂದು ಶೋಭಾ ಆರೋಪಿಸಿದ್ದಾರೆ.
    ಟನಾ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಅಭ್ಯಥಿರ್ ಅನಿಲ್​ ಮೆಣಸಿನಕಾಯಿ “ಕಾಂಗ್ರೆಸ್​ ತನ್ನ ಗುಂಡಾಗಿರಿಯನ್ನು ಮತ್ತೆ ಸಾಭಿತು ಪಡಿಸಿದೆ. ದೂರು ದಾಖಲಿಸಲು ಪೊಲೀಸ್​ ಠಾಣೆಗೆ ಹೋದರೆ ಕೌಮಟರ್​ ದೂರು ಸಾಖಲಿಸಿಕೊಂಡು ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ಮಾಡುತ್ತಾರೆ ಎಂದು ಆರೋಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts