More

    ಎನ್​ಐಎ ಕಾಯ್ದೆ ಅಸಾಂವಿಧಾನಿಕ ಎಂದು ಘೋಷಿಸಲು ಆಗ್ರಹಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಛತ್ತೀಸ್​ಗಢ ಕಾಂಗ್ರೆಸ್ ಸರ್ಕಾರ!

    ನವದೆಹಲಿ: ನ್ಯಾಷನಲ್ ಇನ್​ವೆಸ್ಟಿಗೇಷನ್​ ಏಜೆನ್ಸಿ(ಎನ್​ಐಎ) ಕಾಯ್ದೆ 2008 ಅಸಾಂವಿಧಾನಿಕ ಎಂದು ಘೋಷಿಸುವಂತೆ ಆಗ್ರಹಿಸಿ ಕಾಂಗ್ರೆಸ್ ನೇತೃತ್ವದ ಛತ್ತೀಸ್​ಗಢ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದೆ.

    ಈ ಕಾಯ್ದೆಯನ್ನು ಪ್ರಶ್ನಿಸುತ್ತಿರುವ ಮೊದಲ ರಾಜ್ಯ ಸರ್ಕಾರ ಇದಾಗಿದೆ. ಇದಕ್ಕೂ ಮುನ್ನ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಂವಿಧಾನದ ಅನುಚ್ಛೇದ 131 ಪ್ರಕಾರ ಪ್ರಶ್ನಿಸಿ ಕೇರಳ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

    ಛತ್ತೀಸ್​ಗಢ ಸರ್ಕಾರ ಕೂಡ ಇದೇ ಅನುಚ್ಛೇದ ಪ್ರಕಾರವೇ ಈಗ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದೆ. ಇದರ ಪ್ರಕಾರ, ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ನೇರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಕ್ಕೆ ಅವಕಾಶವಿದೆ.

    ಅರ್ಜಿಯಲ್ಲಿ ಹೇಳಿರುವ ಪ್ರಕಾರ, ಎನ್​ಐಎ ಕಾಯ್ದೆ ಪ್ರಕಾರ ಕೇಂದ್ರ ಸರ್ಕಾರಕ್ಕೆ ತನಿಖೆಗಾಗಿ ಏಜೆನ್ಸಿ ರಚಿಸುವ ಅಧಿಕಾರ ಇದೆಯೇ ಹೊರತು ಅದು, ಎನ್​ಐಎ ಜತೆಗೆ ಹೊಂದಿಕೆಯಾಗುವುದಿಲ್ಲ. ತನಿಖೆಯ ಏಜೆನ್ಸಿಯನ್ನು ರಾಜ್ಯ ಪೊಲೀಸರನ್ನು ಬಳಸಿಕೊಂಡು ಮಾಡಬೇಕು. ಸಂವಿಧಾನದ ಷೆಡ್ಯೂಲ್ 7, ಲಿಸ್ಟ್​ 2, ಎಂಟ್ರಿ 2ರ ಪ್ರಕಾರ ರಾಜ್ಯ ಪೊಲೀಸರನ್ನು ತನಿಖೆಗೆ ಬಳಸಿಕೊಳ್ಳಬೇಕು. ಹೀಗಾಗಿ ರಾಜ್ಯದ ತನಿಖೆಯ ಅಧಿಕಾರವನ್ನು ಕೇಂದ್ರ ಸರ್ಕಾರ ಈ ಕಾಯ್ದೆ ಮೂಲಕ ಕಸಿದುಕೊಂಡಿದೆ ಎಂದು ಆರೋಪಿಸಲಾಗಿದೆ.
    ಹೀಗಾಗಿ ಈ ಪ್ರಕರಣ ಈಗ ದೇಶದ ಗಮನಸೆಳೆದಿದ್ದು, ಕೋರ್ಟ್​ ಇದನ್ನು ಯಾವ ರೀತಿ ಇತ್ಯರ್ಥಗೊಳಿಸುವುದೆಂಬ ಕುತೂಹಲ ಮೂಡಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts