More

    ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಕ್ರಮ ಆಗಿಲ್ಲ

    ದೇವರಹಿಪ್ಪರಗಿ: ಹಿಂದುಗಳ ಮೇಲೆ ಹಲ್ಲೆ ಮಾಡುತ್ತಿರುವ ಜಿಹಾದಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ ಅಸ್ಕಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

    ಪಟ್ಟಣದಲ್ಲಿ ಬಿಜೆಪಿ ಹಾಗೂ ವಿವಿಧ ಹಿಂದುಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಅವರು ಮಾತನಾಡಿದರು.

    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗ ಹಿಂದುಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆ ಅದೆಷ್ಟೋ ಬಾರಿ ಆಗಿದೆ. ಆದರೂ ಅವರ ಮೇಲೆ ಯಾವುದೇ ತರಹದ ಕಾನೂನು ಕ್ರಮ ಆಗದ ಕಾರಣ ರಾಜಾರೋಷವಾಗಿ ಅವರು ಕೆಲವು ದಿನಗಳ ನಂತರ ಮರಳಿ ಮತ್ತೆ ತಮ್ಮ ಚಾಳಿ ಮುಂದುವರಿಸುತ್ತಿದ್ದಾರೆ. ಹುಬ್ಬಳ್ಳಿಯ ನೇಹಾ ಹಿರೇಮಠ ಸಾವಿಗೆ ಕಾರಣನಾದ ಪಯಾಜ್‌ನನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಆಗ್ರಹಿಸಿದರು.

    ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ, ವೀರೇಶ ಕುದುರಿ ಮಾತನಾಡಿ, ರಾಜ್ಯದಲ್ಲಿ ನಡೆದಿರುವ ಅಮಾನವೀಯ ಕೃತ್ಯದ ಬಗ್ಗೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಒಂದು ಧರ್ಮದ ಓಲೈಕೆಗಾಗಿ ಹೇಳಿಕೆ ನೀಡುತ್ತಿರುವುದು ದುರದೃಷ್ಟಕರ ಸಂಗತಿ. ನೇಹಾ ಹಿರೇಮಠ ಮನೆಗೆ ತೆರಳಿ ಸಾಂತ್ವನ ಹೇಳುವ ಬದಲಿಗೆ ಹಲ್ಲೆ ಮಾಡಿದ ಆರೋಪಿ ಮನೆಗೆ ಪೊಲೀಸ್ ಭದ್ರತೆ ಒದಗಿಸಿದ್ದು ನಾಚಿಕೆಗೇಡಿನ ಸಂಗತಿ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿರುವುದರಿಂದ ಇದರ ಹೊಣೆ ಹೊತ್ತು ಸಚಿವರು ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಬರುವ ದಿನಗಳಲ್ಲಿ ಇನ್ನೂ ಉಗ್ರ ಸ್ವರೂಪದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಬಿಜೆಪಿ ಮುಖಂಡ ಸಂಗನಗೌಡ ಪಾಟೀಲ ಸಾಸನೂರ, ಆರ್‌ಎಸ್‌ಎಸ್ ಮುಖಂಡ ರಾಜು ದೇಸಾಯಿ, ಬಿಜೆಪಿ ಮಂಡಲ ಅಧ್ಯಕ್ಷ ಅವಣ್ಣ ಗ್ವಾತಗಿ, ಮಾಂತೇಶ ಬಿರಾದಾರ ಮಾತನಾಡಿದರು.

    ಬಿಜೆಪಿ ಜಿಲ್ಲಾ ಮುಖಂಡ ಸುರೇಶಗೌಡ ಪಾಟೀಲ ಸಾಸನೂರ, ವಿಜಯಕುಮಾರ ಹಿರೇಮಠ, ಭೀಮನಗೌಡ ಲಚ್ಚನ, ರಮೇಶ ಈಳಗೇರ, ಹನುಮಂತ ತಾಂಬೆ, ಕಲ್ಮೇಶ ಬುದ್ಧಿ, ಸತೀಶ ಬೂದಿಹಾಳ, ಮಾಂತೇಶ ವಂದಾಲ, ದಯಾನಂದ ರಾಥೋಡ, ಪ್ರಕಾಶ ಡೋನೂರುಮಠ, ಪ್ರಕಾಶ ದೊಡ್ಡಮನಿ, ಜಕ್ಕೋ ದೊಡ್ನಿ, ಹಿಂದುಪರ ಸಂಘಟನೆ ಕಾರ್ಯಕರ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts