More

    ಲಸಿಕೆ ವಿತರಣೆಯಲ್ಲಿ ಗೊಂದಲ

    ಹುಬ್ಬಳ್ಳಿ: ಕರೊನಾ ಗೆಲ್ಲಲು ಲಸಿಕೆ ವಿತರಣೆ ಪುನಃ ಆರಂಭವಾಗಿದ್ದರೂ ಮಂಗಳವಾರ ಧಾರವಾಡ ಜಿಲ್ಲೆಯ ಬಹುತೇಕ ಕೇಂದ್ರಗಳಲ್ಲಿ ಗೊಂದಲ ಉಂಟಾಯಿತು. ಕಿಮ್್ಸ ಸೇರಿ ವಿವಿಧ ಕೇಂದ್ರಗಳಲ್ಲಿ 150 ಜನರಿಗೆ ಟೋಕನ್ ಕೊಡಲಾಗಿತ್ತು. 18ರಿಂದ 45 ವರ್ಷದೊಳಗಿನವರಿಗೆ ಲಸಿಕೆ ನೀಡಲಾಗುತ್ತದೆ ಎಂಬ ಕಾರಣಕ್ಕೆ ಹಲವರು ಬೆಳಗ್ಗೆಯಿಂದಲೇ ಕೇಂದ್ರದ ಎದುರು ಸರದಿ ಸಾಲಿನಲ್ಲಿ ನಿಂತಿದ್ದರು. ಅನೇಕರು ಆಪ್​ನಲ್ಲಿ ನಮೂದಿಸಿದ ಆದ್ಯತಾ ಸಮಯಕ್ಕೆ ಸರಿಯಾಗಿ ಬಂದಿದ್ದರು.

    ಜಿಲ್ಲಾ ಕೇಂದ್ರಗಳಿಂದ ಇತರ ಕಡೆಗೆ ಲಸಿಕೆ ತಲುಪಲು ಒಂದಿಷ್ಟು ತಡವಾಯಿತು. ಲಸಿಕೆ ನೀಡಿಕೆ ಆರಂಭವಾದ ಮೇಲೆಯೂ ಸಣ್ಣಪುಟ್ಟ ಗೊಂದಲಗಳು ಉಂಟಾದವು. ಅನೇಕರು ನೋಂದಣಿ ಮಾಡಿಕೊಂಡರೂ ಲಸಿಕೆ ಸಿಗಲಿಲ್ಲ ಎಂದು ಆರೋಪಿಸುವಂತಾಯಿತು. ಹುಬ್ಬಳ್ಳಿಯ ಕೆಲವರು ಕುಂದಗೋಳ, ನವಲಗುಂದ ಕೇಂದ್ರಕ್ಕೆ ಹೋಗಲು ತಮಗೆ ಸೂಚನೆ ಬಂದಿದೆ ಎಂದು ಅಲ್ಲಿಗೆ ಹೋಗಿದ್ದರು. ಆದರೆ, ಅಲ್ಲಿ ಕೆಲವೇ ಜನರಿಗೆ ಲಸಿಕೆ ನೀಡಲಾಯಿತು. ನಂತರ, ಎರಡನೇ ಹಂತದಲ್ಲಿ ಲಸಿಕೆ ಪಡೆಯುವವರಿಗೆ ಆದ್ಯತೆ ಎಂದು ಹೇಳಲಾಯಿತು. ಇದರಿಂದ ದಿನವಿಡೀ ನಿಂತರೂ ಲಸಿಕೆ ದೊರೆಯಲಿಲ್ಲ. ಸಮರ್ಪಕವಾದ ಕಾರಣ ಹೇಳದ ಕೇಂದ್ರದ ಅಧಿಕಾರಿಗಳು ಹಿರಿಯ ಅಧಿಕಾರಿಗಳ ಸಂಪರ್ಕ ಸಂಖ್ಯೆ ನೀಡಿದರು. ಆದರೆ, ಆ ಸಂಪರ್ಕ ಸಂಖ್ಯೆಗೆ ಕರೆ ಹೋಗಲಿಲ್ಲ. ಹೀಗೆ ವಿವಿಧ ರೀತಿಯ ಗೊಂದಲಗಳು ಉಂಟಾಗಿವೆ ಎಂಬ ಆರೋಪ ಕೇಳಿಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts