More

    ಕೋವಿಡ್ ಮಾರ್ಗಸೂಚಿ ತೆರವು ಬಳಿಕ ಸಮ್ಮೇಳನ

    ಹಾವೇರಿ: ಹಾವೇರಿಯಲ್ಲಿ ಆಯೋಜಿಸಲು ನಿರ್ಧರಿಸಿರುವ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಕೋವಿಡ್ ಮಾರ್ಗಸೂಚಿ ತೆರವುಗೊಂಡ ಬಳಿಕ ವೈಶಿಷ್ಟ್ಯೂರ್ಣವಾಗಿ ನಡೆಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಶಿ ಹೇಳಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೋವಿಡ್​ನಿಂದಾಗಿ ಕಳೆದೆರಡು ವರ್ಷಗಳಿಂದ ಸಮ್ಮೇಳನ ನಡೆಸಲು ಸಾಧ್ಯವಾಗಿಲ್ಲ. ಪ್ರಸ್ತುತ ಕರೊನಾ ತೀವ್ರತೆ ಕಡಿಮೆಯಾಗುತ್ತಿದೆ. ಆದರೆ, ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕಾಗುತ್ತದೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೂ ರ್ಚಚಿಸಿದ್ದು, ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.

    ಸಾಹಿತ್ಯ ಪರಿಷತ್ ಬೈಲಾ ತಿದ್ದುಪಡಿ ಕಾರ್ಯ ನಡೆದಿದೆ. ನ್ಯಾಯಮೂರ್ತಿ ಅರಳಿ ನಾಗರಾಜ ನೇತೃತ್ವದ ಸಮಿತಿಯಿಂದ ತಿದ್ದುಪಡಿ ಕರಡು ಸಿದ್ಧವಾಗಿದೆ. ಪ್ರಮುಖವಾಗಿ ಕಸಾಪ ರಾಜ್ಯ, ಜಿಲ್ಲಾ, ತಾಲೂಕು ಘಟಕಕ್ಕೆ ಒಮ್ಮೆ ಅಧ್ಯಕ್ಷರಾದವರು ಮತ್ತೆ ಅದೇ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶವಿಲ್ಲ. ರಾಜ್ಯ, ಜಿಲ್ಲಾ ಘಟಕಗಳಿಗೆ ಚುನಾವಣೆ ನಡೆಯುವ ರೀತಿಯಲ್ಲಿ ತಾಲೂಕು, ಹೋಬಳಿ ಘಟಕಗಳ ಅಧ್ಯಕ್ಷ ಸ್ಥಾನಕ್ಕೂ ಚುನಾವಣೆ ನಡೆಸಲು ತಿದ್ದುಪಡಿ ತರಲಾಗುತ್ತಿದೆ ಎಂದರು.

    1915ರಲ್ಲಿ ರಚನೆಯಾದ ಕಸಾಪ ಬೈಲಾದಲ್ಲಿ ಕನ್ನಡ ಓದಲು, ಬರೆಯಲು ಬರುವವರನ್ನು ಸದಸ್ಯರನ್ನಾಗಿ ಮಾಡಬೇಕು ಎಂಬ ನಿಯಮವಿದೆ. ಆದರೆ, ವಿವಿಧ ಕಾರಣಗಳಿಂದ ರಾಜ್ಯದಲ್ಲಿ ಸುಮಾರು 30ಸಾವಿರ ಸದಸ್ಯರಿಗೆ ಕನ್ನಡ ಬರೆಯಲು ಬರುವುದಿಲ್ಲ. ಅವರಿಗೆ ಓದು ಬರಹ ಕಲಿಸಿ ಸರಳ ಕನ್ನಡ ಪರೀಕ್ಷೆ ನಡೆಸಿ ಸದಸ್ಯತ್ವ ನೀಡಲು ಉದ್ದೇಶಿಸಲಾಗಿದೆ. ನೋಂದಣಿ ವ್ಯವಸ್ಥೆ ಸರಳೀಕರಣಗೊಳಿಸಲಾಗಿದ್ದು, ಅದಕ್ಕಾಗಿ ವಿಶೇಷ ಆಪ್ ಸಿದ್ಧಪಡಿಸಲಾಗಿದೆ. ಈ ಆಪ್ ಮೂಲಕ ಕಸಾಪ ಸದಸ್ಯತ್ವ ಪಡೆಯಬಹುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts