More

    ಹಣ ಕೊಟ್ಟು ಪ್ರಾಣವಾಯು ಕೊಳ್ಳುವ ಸ್ಥಿತಿ

    ಹಾನಗಲ್ಲ: ನೈಸರ್ಗಿಕವಾಗಿ ಆಮ್ಲಜನಕ ಸೃಷ್ಟಿಸಲು ಗಿಡ-ಮರಗಳಿಗೆ ಮಾತ್ರ ಸಾಧ್ಯವಿದೆ. ನಮ್ಮ ದುರಾಸೆಯಿಂದಾಗಿ ನೀರು ಮತ್ತು ಪ್ರಾಣವಾಯುವನ್ನೂ ಹಣಕೊಟ್ಟು ಕೊಂಡುಕೊಳ್ಳುವಂತಾಗಿದೆ ಎಂದು ಪಿಎಸ್​ಐ ಶ್ರೀಶೈಲ ಪಟ್ಟಣಶೆಟ್ಟಿ ಬೇಸರ ವ್ಯಕ್ತಪಡಿಸಿದರು.

    ಪಟ್ಟಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗೂ ಎನ್​ಸಿಜೆಸಿ ಗೆಳೆಯರ ಬಳಗ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶನಿವಾರ ಆಯೋಜಿಸಿದ್ದ ಆಕ್ಸಿಜನ್ ಚಾಲೆಂಜ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಪರಿಸರದ ಮೇಲೆ ನಮ್ಮ ಒತ್ತಡ ಮುಂದುವರಿದರೆ ಮುಂಬರುವ ದಿನಗಳಲ್ಲಿ ವಾಯುವಿಹಾರಕ್ಕೂ ಶುಲ್ಕ ನಿಗದಿಯಾದರೆ ಆಶ್ಚರ್ಯ ಪಡುವಂತಿಲ್ಲ. ಮನೆಯೊಂದಕ್ಕೆ ಇಂತಿಷ್ಟು ಗಿಡಗಳಿರಬೇಕೆಂಬ ಕಡ್ಡಾಯ ಕಾನೂನು ರಚಿಸುವ ಅಗತ್ಯವಿದೆ ಎಂದರು.

    ಎಬಿವಿಪಿ ಪ್ರಮುಖ ಬಸವರಾಜ ಮಟ್ಟಿಮನಿ ಮಾತನಾಡಿ, ಪಟ್ಟಣದಲ್ಲಿ ನಮ್ಮ ಸಂಘಟನೆಯಿಂದ ಜೂನ್​ನಲ್ಲಿ 500ಕ್ಕೂ ಅಧಿಕ ಸಸಿ ನೆಟ್ಟು ಬೆಳೆಸಲು ತೀರ್ವನಿಸಲಾಗಿದೆ. ಸಾರ್ವಜನಿಕರ ಸಹಕಾರದಿಂದ ಅವುಗಳ ರಕ್ಷಣೆಗೆ ಮುಂದಾಗಲಿದ್ದೇವೆ. ರಸ್ತೆ ಬದಿಗಳಲ್ಲಿ ಸಸಿ ನೆಡಲಾಗುತ್ತಿದ್ದು, ಅಲ್ಲಿರುವ ಮನೆಗಳವರಿಗೆ ಸಂರಕ್ಷಣೆಗೆ ಕೈಜೋಡಿಸುವಂತೆ ಮನವಿ ಮಾಡಲಾಗುತ್ತಿದೆ. ಆಕ್ಸಿಜನ್ ಚಾಲೆಂಜ್​ನಡಿ ಪೊಲೀಸ್ ಠಾಣೆ ಸಿಬ್ಬಂದಿಗೂ ಆವರಣದಲ್ಲಿ 10 ಸಸಿ ಹಚ್ಚಿ ಬೆಳೆಸಲು ನೀಡಲಾಗಿದೆ ಎಂದರು.

    ಪ್ರಕಾಶ ಮುಧೋಳಕರ, ಶಿವಕುಮಾರ ಆಲದಕಟ್ಟಿ, ಯತೀಶ ಪಟಗಾರ, ಪ್ರದೀಪ ಹುನಗುಂದ, ರವಿ ಪೂಜಾರ, ಬಿ. ಕಾಂತೇಶ, ಕೆ.ನಂದನ್, ಜಿ.ಕಿರಣ್, ಓಂ.ಸಚಿನ್, ಸುಹಾಸ ಬೆಂಡಿಗೇರಿ, ಭರತ್ ಕಟ್ಟಿಮನಿ, ಅಶೋಕ ಕೆರೂರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts