More

    ತೈಲಬೆಲೆ ಹೆಚ್ಚಳಕ್ಕೆ ಖಂಡನೆ ; ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಕಾರ್ಯಕರ್ತರ ಪ್ರತಿಭಟನೆ

    ತುಮಕೂರು: ನಿರಂತರ ತೈಲಬೆಲೆ ಹೆಚ್ಚಳ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ಸಂಕಷ್ಟದಲ್ಲಿರುವ ಜನರಿಗೆ ತೈಲ ಬೆಲೆ ಹೆಚ್ಚಳದಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಕೇಂದ್ರ ಸರ್ಕಾರ ತನ್ನ ಆದಾಯದ ಮೂಲವಾಗಿ ತೈಲ ಬೆಲೆಗಳನ್ನು ಹೆಚ್ಚಿಸಿಕೊಂಡಿದೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗಿದ್ದರೂ ಭಾರತೀಯ ಮಾರುಕಟ್ಟೆಯಲ್ಲಿ ಸತತ ಬೆಲೆ ಹೆಚ್ಚಳ ಜನರ ಬದುಕನ್ನು ಬೀದಿಗೆ ತಂದಿದೆ ಎಂದರು.

    ತುಮಕೂರು ಮಹಾನಗರ ಪಾಲಿಕೆ ಮೇಯರ್ ಫರೀಧಾ ಬೇಗಂ ಮಾತನಾಡಿ, ದೇಶವೇ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಇರುವಾಗ ನಿರಂತರವಾಗಿ ತೈಲ ಬೆಲೆಗಳ ಹೆಚ್ಚಳ ಸಮಂಜಸವಲ್ಲ. ಇದನ್ನು ಜನಸಾಮಾನ್ಯರಿಗೆ ತಿಳಿಸುವ ಮೂಲಕ ಅವರಿಗೆ ಆಗುತ್ತಿರುವ ಅನ್ಯಾಯ ಮನವರಿಕೆ ಮಾಡಿಕೊಡಲು ಎಲ್ಲ ವಿರೋಧಪಕ್ಷಗಳು ಮಾಡಬೇಕಿದೆ ಎಂದರು. ಮಾಜಿ ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರಲ್‌ಗೆ 40 ಡಾಲರ್ ಬೆಲೆ ಇದೆ. ಆದರೆ, ಡಿಸೇಲ್ ಮತ್ತು ಪೆಟ್ರೋಲ್ ಬೆಲೆ ಕಳೆದ 14 ದಿನಗಳಲ್ಲಿ 10 ರೂ.ಹೆಚ್ಚಳವಾಗಿರುವುದು ಆಶ್ಚರ್ಯ ತಂದಿದೆ ಎಂದರು.

    ಯುಪಿಎ ಸರ್ಕಾರ ತೈಲ ಬೆಲೆಯನ್ನು 12ಪೈಸೆಗಳಷ್ಟು ಹೆಚ್ಚಳ ಮಾಡಿದ್ದನ್ನು ಖಂಡಿಸಿ, ಅಂದಿನ ಗುಜರಾತ್ ಸಿಎಂ, ಇಂದಿನ ಪ್ರಧಾನಿ ನರೇಂದ್ರ ಮೋದಿ 24 ಗಂಟೆಗಳ ಕಾಲ ಗುಜರಾತ್ ಬಂದ್ ನಡೆಸಿ, ಪ್ರಬಲವಾಗಿ ವಿರೋಧಿಸಿದ್ದರು. ಕಳೆದ 14 ದಿನಗಳಲ್ಲಿ ತೈಲ ಬೆಲೆ ಶೇ10-12 ಹೆಚ್ಚಳವಾದರೂ ಜನರು ವಿರೋಧಿಸುತ್ತಿಸುತ್ತಿಲ್ಲ ಎಂದರು.

    ಮಾಜಿ ಶಾಸಕರಾದ ಎಸ್.ಷಫಿಅಹಮದ್, ಆರ್.ನಾರಾಯಣ್, ಮಹಿಳಾ ಘಟಕದ ಅಧ್ಯಕ್ಷೆ ಗೀತಾ, ಪಾಲಿಕೆ ಸದಸ್ಯ ನಯಾಜ್‌ಅಹ್ಮದ್, ಮಹೇಶ್, ಮುಖಂಡರಾದ ಮುರಳೀಧರ ಹಾಲಪ್ಪ, ಡಿ.ಟಿ.ವೆಂಕಟೇಶ್, ನರಸೀಯಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts