More

    ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ; ಕುಣಿಗಲ್ ಪೊಲೀಸರ ವಿರುದ್ಧ ಕ್ರಮಕ್ಕೆ ಒತ್ತಾಯ

    ಕುಣಿಗಲ್: ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಿರುವ ಕುಣಿಗಲ್ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪಾಲಕರು ಹಾಗೂ ವಿದ್ಯಾರ್ಥಿಗಳು ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

    ಕಾಲೇಜು ತರಗತಿಗಳು ಆರಂಭಕ್ಕೂ ಮುನ್ನ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿಗಳು ಮತ್ತು ಪಾಲಕರು ಕಾಲೇಜಿನ ಮುಖ್ಯದ್ವಾರದಲ್ಲಿ ಜಮಾವಣೆಗೊಂಡು ಪೊಲೀಸರು ಹಾಗೂ ಪ್ರಾಚಾರ್ಯರ ವಿರುದ್ಧ ಧಿಕ್ಕಾರ ಕೂಗಿದರು. ನಗರ ಬಿಜೆಪಿ ಮಾಜಿ ಅಧ್ಯಕ್ಷ ಕೆ.ಕೆ.ರಮೇಶ್ ಮಾತನಾಡಿ, ಮಾ.3ರಂದು ಎರಡು ವಿದ್ಯಾರ್ಥಿ ಗುಂಪುಗಳ ನಡುವೆ ಗಲಾಟೆ ನಡೆಯುವಾಗ ಗಲಾಟೆ ಬಿಡಿಸಲು ಹೋದ ನನ್ನ ಮಗ ರವೀಶ್ ಹಾಗೂ ಆತನ ಸ್ನೇಹಿತರಾದ ಮನೋಜ್, ಅರುಣ್. ಚಂದ್ರಶೇಖರ್ ಹಾಗೂ ಯದುನಂದನ ಅವರನ್ನು ಪೇದೆಗಳಾದ ಮಲ್ಲಿಕಾರ್ಜುನ್ ಹಾಗೂ ದಯಾನಂದ ಸಮವಸ ಇಲ್ಲದೇ ಏಕಾಏಕಿ ಕಾಲೇಜಿನ ಅವರಣಕ್ಕೆ ನುಗ್ಗಿ ಗಲಾಟೆ ಮಾಡುತ್ತಿದ್ದವರನ್ನು ಬಿಟ್ಟು, ಗಲಾಟೆ ಬಿಡುಸುತ್ತಿದ್ದವರನ್ನು ಎಳೆದುಕೊಂಡು ಹೋಗಿ ಠಾಣಿಯಲ್ಲಿ ಥಳಿಸಿ, ಅವಾಚ್ಯವಾಗಿ ನಿಂದಿಸಿ ದೌರ್ಜನ್ಯವೆಸಗಿದ್ದಾರೆ ಎಂದರು.

    ನಿಮ್ ಅಪ್ಪ ಬಿಜೆಪಿ ಲೀಡರಾ, ನಿಮ್ಮ ಬಿಜೆಪಿಯವರು ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಪಿಎಸ್‌ಐ ವಿಕಾಸ್ ಗೌಡ ಅವಾಚ್ಯವಾಗಿ ನಿಂದಿಸಿದ್ದಾರೆ. ಇದನ್ನು ಪ್ರಶ್ನೆ ಮಾಡಿದ ರವೀಶ್ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ಬೂಟ್ ಕಾಲಿನಿಂದ ತುಳಿದಾಗ ರವೀಶ್ ಕೈಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ಅರೋಪಿಸಿದರು. ಪೊಲೀಸರು ವಿದ್ಯಾರ್ಥಿಗಳನ್ನು ಎಳೆದುಕೊಂಡು ಹೋದರೂ ಪಾಲಕರಿಗೆ ಮಾಹಿತಿ ನೀಡದೆ ಪೊಲೀಸರ ಪರವಾಗಿ ನಿಂತಿರುವ ಪ್ರಾಚಾರ್ಯ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

    ಜಿಲ್ಲಾ ಬಿಜೆಪಿ ಕಾರ್ಯಕಾರಿ ಸಮಿತಿ ನಿರ್ದೇಶಕ ಎಚ್.ಡಿ.ರಾಜೇಶ್ ಗೌಡ, ಹುಲಿಯೂರುದುರ್ಗ ನಟರಾಜು, ಪುರಸಭೆ ಸದಸ್ಯರಾದ ರಂಗಸ್ವಾಮಿ ಕೋಟೆ ನಾಗಣ್ಣ, ವಿಜಯಲಕ್ಷ್ಮೀ, ಪುರಸಭೆ ಮಾಜಿ ಅಧ್ಯಕ್ಷ ಹರೀಶ್ ಇದ್ದರು.

    ಕಾಲೇಜಿನ ಪ್ರಾಚಾರ್ಯರು ದೂರು ಕೊಡದೇ ವಿದ್ಯಾರ್ಥಿಗಳನ್ನು ಎಳೆದುಕೊಂಡು ಹೋಗಿ ಅಮಾನವೀಯವಾಗಿ ಥಳಿಸಿರುವ ಪಿಎಸ್‌ಐ ವಿಕಾಸ್ ಗೌಡ, ಪೇದೆಗಳಾದ ಮಲ್ಲಿಕಾರ್ಜುನ್ ಹಾಗೂ ದಯಾನಂದ್ ವಿರುದ್ಧ ಸೂಕ್ತ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಬೇಕು.
    ಕೆ.ಕೆ.ರಮೇಶ್  ನಗರ ಬಿಜೆಪಿ ಮಾಜಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts