More

    ಜಿಲ್ಲೆಯಲ್ಲಿ ಸದ್ಯಕ್ಕಿಲ್ಲ ಸಿನಿಮಾ ಶೋ: ಪ್ರದರ್ಶಕರ ಮಂಡಳಿ ತೀರ್ಮಾನ

    ರಾಮನಗರ: ಜಿಲ್ಲೆಯಲ್ಲಿ ಗುರುವಾರ ಚಿತ್ರಮಂದಿರಗಳು ಪುನರಾರಂಭಗೊಳ್ಳುವುದಿಲ್ಲ. ಅನ್​ಲಾಕ್ ಪ್ರಕ್ರಿಯೆ ಆರಂಭಗೊಂಡ ನಂತರ ಕೇಂದ್ರ ಸರ್ಕಾರ ಚಿತ್ರಮಂದಿರಗಳು ಪುನರಾರಂಭಗೊಳ್ಳಲು ಅನುಮತಿ ನೀಡಿದ್ದು ಸಿನಿಮಾ ಪ್ರದರ್ಶನಗೊಳ್ಳಬೇಕಿತ್ತು. ಆದರೆ ಪ್ರದರ್ಶಕರ ಮಂಡಳಿ ಸರ್ಕಾರ ಮತ್ತು ನಿರ್ವಪಕರ ಎದುರು ಹಲವಾರು ಬೇಡಿಕೆಗಳನ್ನು ಇಟ್ಟಿದ್ದು ಇವು ಈಡೇರದ ಹೊರತು ಪ್ರದರ್ಶನ ಮಾಡದಿರಲು ನಿರ್ಧರಿಸಲಾಗಿದೆ.

    ಸರ್ಕಾರದ ಕೆಲವು ನಿಯಮಗಳು ಹಾಗೂ ನಿರ್ವಪಕರೊಂದಿಗಿನ ನಮ್ಮ ವ್ಯವಹಾರಗಳಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿರá-ವುದರಿಂದ ಚಿತ್ರ ಪ್ರದರ್ಶನ ಉದ್ಯಮ ಲಾಭ ಶೂನ್ಯವಾಗá-ತ್ತಿದೆ. ಹೀಗಾಗಿ ಚಿತ್ರ ಪ್ರದರ್ಶನ ಉದ್ಯಮದ ಉಳಿವಿಗಾಗಿ ಸರ್ಕಾರದ ಮತ್ತು ಚಿತ್ರ ನಿರ್ವಪಕರ ಗಮನ ಸೆಳೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರಾಮನಗರದ ಶ್ರೀರಾಮ ಚಿತ್ರ ಮಂದಿರ ಮಾಲೀಕರು ಹಾಗೂ ಕರ್ನಾಟಕ ಚಿತ್ರಪ್ರದರ್ಶಕರ ಮಹಾಮಂಡಲದ ಕಾರ್ಯದರ್ಶಿ (ದಕ್ಷಿಣ) ಜಿ.ಸá-ರೇಂದ್ರನಾಥ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿವೆ 14 ಚಿತ್ರಮಂದಿರಗಳು

    ರಾಮನಗರದಲ್ಲಿ 3, ಬಿಡದಿಯಲ್ಲಿ 1, ಚನ್ನಪಟ್ಟಣದಲ್ಲಿ 3, ಕನಕಪುರದಲ್ಲಿ 4, ಮಾಗಡಿಯಲ್ಲಿ 2 ಮತ್ತು ಕುದೂರಿನ 1 ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಗೊಳ್ಳುತ್ತಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಬಂದ್ ಆಗಿದ್ದವು. ಇದೀಗ ಅವಕಾಶ ಇದ್ದರೂ ಚಿತ್ರ ಪ್ರದರ್ಶನ ನಡೆಯುವುದಿಲ್ಲ.

    ಪಿಪಿಇ ಕಿಟ್​ಗೆ ವಿನಾಯಿತಿ ಬೇಕು

    ಸರ್ಕಾರ ಕೋವಿಡ್ ಹಿನ್ನೆಲೆಯಲ್ಲಿ ನೀಡಿರುವ ಮಾರ್ಗಸೂಚಿಯಲ್ಲಿ ಚಿತ್ರಮಂದಿರಗಳ ಸಿಬ್ಬಂದಿ ಪಿಪಿಇ ಕಿಟ್ ಧರಿಸಬೇಕು ಎಂದು ಸೂಚಿಸಿದೆ. ಆದರೆ ಪಿಪಿಇ ಕಿಟ್ ಧರಿಸಿಕೊಂಡು ಕೆಲಸ ಮಾಡá-ವುದು ಸಾಧ್ಯವಾಗದ ಮಾತು, ಈ ಹಿನ್ನೆಲೆಯಲ್ಲಿ ಇದಕ್ಕೆ ವಿನಾಯಿತಿ ಕೊಡá-ವಂತೆ ಪ್ರದರ್ಶಕರು ಆಗ್ರಹಿಸಿದ್ದಾರೆ.

    ನಿರ್ವಪಕರ ಜತೆ ತಿಕ್ಕಾಟ

    ಪ್ರದರ್ಶಕರ ನಿರ್ಧಾರದ ಹಿಂದೆ ನಿರ್ವಪಕರೊಂದಿಗಿನ ತಿಕ್ಕಾಟವೇ ಕಾರಣ ಎಂದು ತಿಳಿದು ಬಂದಿದೆ. ಡಾ.ರಾಜ್ ಕುಮಾರ್ ಅವರ ಕಾಲದಲ್ಲಿ ಚಿತ್ರಮಂದಿರಗಳಲ್ಲಿ ಸಂಗ್ರಹವಾಗá-ತ್ತಿದ್ದ ಒಟ್ಟು ಪ್ರದರ್ಶನ ಶುಲ್ಕದಲ್ಲಿ ಚಿತ್ರ ಮಂದಿರಗಳಿಗೆ ಇಂತಿಷ್ಟು ಹಣ ಎಂದು ಕೊಡá-ತ್ತಿದ್ದರು. ಆದರೆ ಈಗ ಚಿತ್ರ ಮಂದಿರದಿಂದಲೇ ಇಂತಿಷ್ಟು ಹಣ ಪಡೆದು ಚಿತ್ರ ಕೊಡá-ತ್ತಿದ್ದಾರೆ. ಚಿತ್ರಕ್ಕೆ ಕೊಟ್ಟ ಹಣ ಇಲ್ಲಿ ವಾಪಸ್ಸು ಬರá-ತ್ತಿಲ್ಲ. ಹೀಗಾಗಿಯೇ ಚಿತ್ರಮಂದಿರಗಳು ಬಾಗಿಲು ಮುಚ್ಚುತ್ತಿವೆ ಎಂಬುದು ಪ್ರದರ್ಶಕರ ಸಂಘದ ಪ್ರಮುಖ ದೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts