More

    ದಿಂಗಾಲೇಶ್ವರ ಶ್ರೀಗಳಿಗೆ ಭದ್ರತೆ ಒದಗಿಸಲು ಒತ್ತಾಯ

    ನವಲಗುಂದ: ಶಿರಹಟ್ಟಿ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪಟ್ಟಣದ ಲಾಲಗುಡಿ ಮಾರುತಿ ದೇವಸ್ಥಾನ ಜೀಣೋದ್ಧಾರ ಸಮಿತಿ ಹಾಗೂ ಸಮಸ್ತ ಗುರು ಹಿರಿಯರು ತಹಸೀಲ್ದಾರ್ ಕಚೇರಿ ಸಿಬ್ಬಂದಿ ಎಸ್.ಬಿ. ಭಜಂತ್ರಿ ಅವರಿಗೆ ಮನವಿ ಸಲ್ಲಿಸಿದರು.

    ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಸಮಾಜಮುಖಯಾಗಿ ನಾಡಿನಾದ್ಯಂತ ಪ್ರವಚನ ನೀಡುವ ಮೂಲಕ ತಮ್ಮ ಛಾಪು ಮೂಡಿಸಿ ವಿವಿಧ ಮಠಗಳ ಆಸ್ತಿ ರಕ್ಷಣೆಗೆ ಪಣ ತೊಟ್ಟು ನಿಲ್ಲುವ ಮೂಲಕ ಮಠದ ಆಸ್ತಿ ಕಬಳಿಸುವವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೀಗಾಗಿ ಮಠದ ಕಾಂಪೌಂಡ್ ಜಿಗಿದು ಬರುವ ಮೂಲಕ ಸ್ವಾಮೀಜಿಗೆ ಭಯ ಹುಟ್ಟಿಸಿದ್ದಾರೆ. ಅಲ್ಲದೆ, ಸುಮಾರು ದಿನಗಳಿಂದ ಅಪರಿಚಿತ ವ್ಯಕ್ತಿಗಳು ಸುತ್ತ ಮುತ್ತ ತಿರುಗಾಡುತ್ತಿರುವುದು ಸಂಶಯಕ್ಕೆ ಕಾಣವಾಗಿದೆ. ಈ ದಿಸೆಯಲ್ಲಿ ಗೃಹ ಮಂತ್ರಿಗಳೂ ಶಿರಹಟ್ಟಿ ಮಠ ಹಾಗೂ ಸ್ವಾಮೀಜಿಗಳಿಗೆ ಭದ್ರತೆ ನೀಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

    ರಾಯನಗೌಡ ಪಾಟೀಲ, ಶರಣು ಹಿರೇಮಠ, ಜೀವನ ಪವಾರ, ರಿಯಾಜ್ ಅಹ್ಮದ್ ನಾಶಿಪುಡಿ, ಅಬ್ಬಾರ ದೇವರಿಡ್ದು, ಅಪ್ಪಣ್ಣ ಹಿರಗಣ್ಣವರ, ಶಂಕ್ರು ತೋಟದ, ಉಸ್ಮಾನ್ ಬಬರ್ಚಿ, ಬಾಬಾಜಾನ್ ಮುಲ್ಲಾ, ಯಲ್ಲಪ್ಪ ಭೋವಿ, ಪ್ರಕಾಶ ಶಿಗ್ಲಿ, ಮಂಜುನಾಥ ಜಾಧವ, ಹಟೇಲಸಾಬ್ ರಾಮದುರ್ಗ, ಹನುಮಂತಪ್ಪ ಶೆಲೆಣ್ಣವರ, ಆನಂದ ಹೂಗಾರ, ಶಿವಾಜಿ ಕಲಾಲ, ಮಂಜು ಜಾಲಗಾರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts