More

    ಕ್ಷೇತ್ರದ ಸಮಗ್ರ ಅಭಿವೃದ್ಧಿ ನನ್ನ ಗುರಿ

    ಕಡೂರು: ಕರಾವಳಿ, ಮಲೆನಾಡು ಮತ್ತು ಬಯಲುಸೀಮೆ ಭಾಗದ ಜ್ವಲಂತ ಸಮಸ್ಯೆಗಳ ಅರಿವಿದ್ದು, ಅವುಗಳ ಶಾಶ್ವತ ಪರಿಹಾರ ಮತ್ತು ಕ್ಷೇತ್ರದ ಸವಾರ್ಂಗೀಣ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಹೇಳಿದರು.
    ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡುತ್ತಿರುವ ಜನಪರ ಆಡಳಿತವನ್ನು ರಾಜ್ಯದ ಜನತೆ ಮೆಚ್ಚಿದ್ದಾರೆ. ಗ್ಯಾರಂಟಿ ನೀಡಿ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎನ್ನುವವರಿಗೆ 11 ಲಕ್ಷ ಕೋಟಿ ಹಣ ಮನ್ನಾ ಮಾಡುವಾಗ ದೇಶ ದಿವಾಳಿಯಾಗುತ್ತದೆ ಎನಿಸಲಿಲ್ಲವೇ ಎಂದು ಪ್ರಶ್ನಿಸಿದರು.
    ನಾನು ಈ ಹಿಂದೆ ಸಂಸದನಾದ ಅವಧಿಯಲ್ಲಿ ಕೆ.ಎಂ.ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲಾಯಿತು. ಆದರೆ ಆ ಕಾಮಗಾರಿ ಇನ್ನು ಮುಗಿಯಲಿಲ್ಲ. ಇದು ಬಿಜೆಪಿ ಪಕ್ಷದ ಸಾಧನೆ. ಅಂತಹವರು ನಮಗೆ ಬೇಕೆ ಎಂಬ ಚಿಂತನೆ ಮತದಾರರಲ್ಲಿ ಮೂಡಬೇಕು. ಕ್ಷೇತ್ರದ ಸಮಗ್ರ ಅಭಿವೃದ್ಧಿ ನನ್ನ ಗುರಿ. ಆ ಗುರಿ ತಲುಪಲು ನೀವೆಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
    ಹಾಲಿ ಸಂಸದರು ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಪ್ರಶ್ನಿಸುವ ಕೆಲಸವಾಗಬೇಕಿದೆ. ನಾವುಗಳು ಮಾಡಿದ ಕಾರ್ಯಗಳನ್ನು ಮುಂದುವರಿಸದೇ ದಿನ ಕಳೆದಿದ್ದಾರೆ. ಮುಂದೆ ಆಗಬೇಕಾದ ಕಾರ್ಯಗಳು ಸಾಕಷ್ಟಿವೆ. ಇವುಗಳ ಪರಿಹಾರಕ್ಕೆ ಕಾಂಗ್ರೆಸ್ ಬೆಂಬಲಿಸಬೇಕು ಎಂದರು.
    ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ ಮಾತನಾಡಿ, ಸಂಸದರಾಗಿ ಶೋಭಾ ಕರಂದ್ಲಾಜೆ ಯಾವ ಕಾರ್ಯವನ್ನೂ ಮಾಡಲಿಲ್ಲ. ಏನಾದರೂ ಮಾಡಿದ್ದರೆ ಅವರ ಪಕ್ಷದವರೇ ಗೋಬ್ಯಾಕ್ ಎಂದು ಹೊರದಬ್ಬಿದರು. ಇಲ್ಲಿನ ಸಮಸ್ಯೆಗಳಿಗೆ ಸದಾ ಸ್ಪಂದಿಸಿದ ಜಯಪ್ರಕಾಶ್ ಹೆಗ್ಡೆ ಅವರನ್ನು ಗೆಲ್ಲಿಸಲು ತಾವೆಲ್ಲರೂ ಸಹಕರಿಸಬೇಕು ಎಂದರು.
    ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾ ಹುಲಿಯಪ್ಪ ಗೌಡ, ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್, ಮುಖಂಡರಾದ ಮಹಡಿಮನೆ ಸತೀಶ್, ನಿಡಘಟ್ಟ ಸಂತೋಷ , ಕ್ಯಾತನಬೀಡು ರವೀಶ್ ಬಸಪ್ಪ, ನಟರಾಜ್ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts