More

    ಮೆಟ್ರಿಯಲ್ಲಿ ಹೆಚ್ಚುವರಿ ಪರಿವರ್ತಕ ಅಳವಡಿಸಲು ರೈತರ ಆಗ್ರಹ

    ಕಂಪ್ಲಿ: ತಾಲೂಕಿನ ಮೆಟ್ರಿ-ದೇವಲಾಪುರ ಬಳಿಯ 110/11ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಹೆಚ್ಚುವರಿ ಪರಿವರ್ತಕವನ್ನು ಅಳವಡಿಸುವಂತೆ ರೈತರು ಆಗ್ರಹಿಸಿದ್ದಾರೆ.

    ಮೆಟ್ರಿ 110/11ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸಮರ್ಪಕ ವಿದ್ಯುತ್ ಪೂರೈಸಲು ಮೆಟ್ರಿ, ದೇವಲಾಪುರ, ಶ್ರೀರಂಗಾಪುರಗಳಿಗೆ ತಲಾ ಎರಡು ಫೀಡರ್‌ಗಳಂತೆ ಆರು ಫೀಡರ್‌ಗಳಲ್ಲಿ ವಿದ್ಯುತ್ ಪೂರೈಸಲು ಅವಕಾಶವಿತ್ತು. ಆದರೆ, ಎಫ್‌ಒನ್, ಎಫ್‌ತ್ರೀ ಎರಡು ಫೀಡರ್‌ಗಳ ಮೂಲಕ ಬೇರೆ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ಒದಗಿಸುತ್ತಿರುವುದರಿಂದ ಮೆಟ್ರಿ, ಚಿನ್ನಾಪುರ, ಉಪ್ಪಾರಹಳ್ಳಿ ಗ್ರಾಮಗಳಿಗೆ ಸಮರ್ಪಕ ಗುಣಮಟ್ಟ ಮತ್ತು ಅಧಿಕ ಸಾಮರ್ಥ್ಯದ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಒವರ್‌ಲೋಡ್ ಆಗುವುದು, ಪದೇಪದೆ ಟ್ರಿಪ್ ಆಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವುಂಟಾಗುತ್ತಿದೆ. ಸಮರ್ಪಕ, ಗುಣಮಟ್ಟದ ವಿದ್ಯುತ್ ಪೂರೈಕೆಗೆ ಮೆಟ್ರಿ-ದೇವಲಾಪುರದ 110/11ಕೆವಿ ವಿತರಣಾ ಕೇಂದ್ರದಲ್ಲಿ ಇನ್ನೊಂದು 10ಎಂವಿಎ ಸಾಮರ್ಥ್ಯದ ಪರಿವರ್ತಕ ಅಳವಡಿಸಬೇಕಿದೆ. ಇದರಿಂದ ಇನ್ನೂ ಆರು ಫೀಡರ್ ದೊರೆಯಲಿದ್ದು ಉತ್ತಮ ಗುಣಮಟ್ಟದ ವಿದ್ಯುತ್ ಒದಗಲು ಸಾಧ್ಯವಿದೆ ಎಂದು ಕೃಷಿಕರು ವಿವರಿಸಿದ್ದಾರೆ.

    ಇತ್ತೀಚೆಗೆ ಕೆಪಿಟಿಸಿಎಲ್ ಅಧಿಕಾರಿಗಳು ಹೆಚ್ಚುವರಿ ಪರಿವರ್ತಕ ಅಳವಡಿಕೆಗೆ ಸಮೀಕ್ಷೆ ಮಾಡಿದ್ದು, ತುರ್ತಾಗಿ 10ಎಂವಿಎ ಪರಿವರ್ತಕ ಅಳವಡಿಸಬೇಕು ಎಂದು ರೈತರಾದ ಎಚ್.ಶಿವಪುತ್ರಪ್ಪ, ಹರಿಜನ ಜಗದೀಶ್, ಜಿನ್ನದ ಬಸವರಾಜ್, ಎಚ್.ಶಂಕ್ರಪ್ಪ, ಅಂಗಡಿ ನಾಗರಾಜ್, ಮಾಯಪ್ಪ, ಜಡೆಪ್ಪ, ಶಿವರಾಮ್, ಕೆಂಚಪ್ಪ ಇತರರು ಒತ್ತಾಯಿಸಿದ್ದಾರೆ.
    ಈ ಕುರಿತು ಪ್ರತಿಕ್ರಿಯಿಸಿದ ಜೆಸ್ಕಾಂ ಜೆಇ ಸಮೀವುಲ್ಲಾ, 10ಎಂವಿಎ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಮಂಜೂರಾಗಿದೆ. ಎಸ್ಟಿಮೇಟ್ ಮಾಡಿದ್ದು ಟೆಂಡರ್ ಹಂತದಲ್ಲಿದೆ. 10ಎಂವಿಎ ಸಾಮರ್ಥ್ಯದ ಪರಿವರ್ತಕ ಅಳವಡಿಕೆಯಿಂದ ಹೆಚ್ಚುವರಿಯಾಗಿ ಆರು ಫೀಡರ್‌ಗಳು ದೊರಕಲಿವೆ. ಇದರಿಂದ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts