More

    ಸಂಪೂರ್ಣ ಹದಗೆಟ್ಟ ಮುತವಾಡ ರಸ್ತೆ

    ನೇಸರಗಿ: ಸಮೀಪದ ಮುತವಾಡ ಗ್ರಾಮದಿಂದ ಇಂಚಲವರೆಗಿನ ರಸ್ತೆ ಸಂಪೂರ್ಣ ಹಾಳಾಗಿದೆ. ಇದರಿಂದ ಜನಸಾಮಾನ್ಯರು, ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕೋಳಿ ಮನೆಯ ನಿಲ್ದಾಣ ಬಳಿ ಇರುವ ಕುಡಿಯುವ ನೀರಿನ ಟ್ಯಾಂಕ್ ನೀರು ಇಂಚಲ ರಸ್ತೆ ಎಡಕ್ಕೆ ಹರಿಯುತ್ತದೆ. ಚರಂಡಿ ನೀರು ಹರಿದು ಹೋಗಲು ದಾರಿ ಇಲ್ಲದೆ ರಸ್ತೆ ಮೇಲೆಯೇ ಹರಿಯುತ್ತಿದೆ. ಇದರಿಂದ ಜನರು ಕೆಸರಿನಲ್ಲೇ ಸಂಚರಿಸುವಂತಾಗಿದೆ. ಬೈಕ್ ಸವಾರರಿಗೆ ಸಂಚರಿಸಲು ಸಮಸ್ಯೆಯಾಗಿದೆ. ರಸ್ತೆಯಲ್ಲಿ ತಗ್ಗುಗಳು ಸೃಷ್ಟಿಯಾಗಿದ್ದು, ನೀರು ನಿಂತು ಕೆಸರುಮಯವಾಗಿದೆ. ಹಾಗಾಗಿ ಟ್ಯಾಂಕ್‌ನಿಂದ ಹೊರಬರುವ ಉಳಿಕೆ ನೀರು ಬಲಕ್ಕೆ ಹರಿಯುವಂತೆ ಮಾಡಬೇಕು. ರಸ್ತೆ ಹಾಳಾಗಿರುವುದರಿಂದ ಗ್ರಾಮಕ್ಕೆ ಬಸ್ ಬರುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರು ವಿನಾಕಾರಣ ಸಮಸ್ಯೆ ಎದುರಿಸುವಂತಾಗಿದೆ. ರಸ್ತೆ ರಿಪೇರಿ ಮಾಡದಿದ್ದರೆ ಹೋರಾಟ ಮಾಡುವುದಾಗಿ ಇಸ್ಮಾಯಿಲ್ ನದಾಫ್, ದೊಡ್ಡಪ್ಪ ದಿನ್ನಿಮನಿ, ಬಿಜೆಪಿ ಮುಖಂಡ ಈರಣ್ಣ ಜಿರಳಿ, ಶಿವಲಿಂಗಪ್ಪ ಸಂಕಪ್ಪನವರ, ಸಿದ್ರಾಯಿ ಸಿದ್ದಣ್ಣವರ, ಶಿವಾನಂದ ಸಂಗನೈಕರ ಎಚ್ಚರಿಸಿದ್ದಾರೆ.

    ರಸ್ತೆ ಮೇಲೆ ಚರಂಡಿ ನೀರು ಹರಿಯದಂತೆ ಸೂಕ್ತ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು.
    | ಶಿಲ್ಪಾ ಟಿ., ಪಿಡಿಒ

    ರಸ್ತೆ ನಿರ್ಮಾಣಕ್ಕಾಗಿ ಈಗಾಗಲೇ ಟೆಂಡರ್ ಕರೆಯಲಾಗಿದೆ. ಟೆಂಡರ್ ಕಾರ್ಯ ಕೊನೆಯ ಹಂತಕ್ಕೆ ಬಂದಿವೆ. ಶೀಘ್ರ ಪ್ಯಾಚ್ ವರ್ಕ್ ಕೆಲಸ ಪ್ರಾರಂಭಿಸಲಾಗುವುದು.
    | ಆರ್.ಬಿ.ಹೆಗಡೆ, ಬೈಲಹೊಂಗಲ, ಸೆಕ್ಷನ್ ಆಫೀಸರ್, ಪಿಡಬ್ಲುೃಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts