More

    ಬಿಜೆಪಿ ಶಾಸಕ ಸಿದ್ದು ಸವದಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಕೊಟ್ಟ ಕಾಂಗ್ರೆಸ್​ ಮಹಿಳಾ ಘಟಕ

    ಬೆಂಗಳೂರು: ಬಿಜೆಪಿ ಶಾಸಕ ಸಿದ್ದು ಸವದಿ ಅವರ ವಿರುದ್ಧ ಕಾಂಗ್ರೆಸ್​ ಮಹಿಳಾ ಘಟಕವು ಮಹಿಳಾ ಆಯೋಗಕ್ಕೆ ದೂರು ನೀಡಿದೆ. ಬಾಗಲಕೋಟೆಯ ಮಹಾಲಿಂಗಪುರ ಪುರಸಭೆ ಚುನಾವಣೆ ದಿನದಂದು ಪುರಸಭೆ ಸದಸ್ಯೆ ಚಾಂದಿನಿ ನಾಯಕ್​ ಅವರನ್ನು ತಳ್ಳಿ ಗರ್ಭಪಾತವಾಗುವಂತೆ ಮಾಡಲಾಗಿದೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.

    ಇದನ್ನೂ ಓದಿ: ಗೋಹತ್ಯೆ ನಿಷೇಧದ ಬಗ್ಗೆ ಇದೇ ನಮ್ಮ ನಿಲುವು; ಬದಲಾಗೋ ಮಾತೇ ಇಲ್ಲ ಅಂದ ಸಿದ್ದರಾಮಯ್ಯ

    ದಿನಾಂಕ 9/11/2020ರಂದು ಪುರಸಭೆ ಚುನಾವಣೆ ನಡೆಯುವ ವೇಳೆ ಸದಸ್ಯೆ ಚಾಂದಿನಿ ನಾಯಕ್​ ಅವರು ಪುರಸಭೆಗೆ ಹೋಗುತ್ತಿದ್ದಂತೆ ಶಾಸಕ ಸಿದ್ದು ಸವದಿ ಅವರು ಬಾಗಿಲಲ್ಲಿ ಸಾರ್ವಜನಿಕವಾಗಿ ತಡೆದಿದ್ದಾರೆ. ಸದಸ್ಯೆ ಮತದಾನ ಮಾಡಲು ಮುಂದಾಗಿದ್ದಾಗ ಶಾಸಕರು ಮತ್ತು ಅವರ ಬೆಂಬಲಿಗರು ಆಕೆಯನ್ನು ತಳ್ಳಿ, ಮೆಟ್ಟಿಲಿನಿಂದ ಕೆಳಗೆ ಬೀಳುವಂತೆ ಮಾಡಿದ್ದಾರೆ. ಇದರ ಪರಿಣಾಮವಾಗಿ ಮೂರು ತಿಂಗಳ ಗರ್ಭವತಿ ಚಾಂದಿನಿ ಅವರಿಗೆ ಗರ್ಭಪಾತವಾಗಿದೆ ಎಂದು ಕಾಂಗ್ರೆಸ್​ ನಾಯಕಿಯರು ದೂರಿದ್ದಾರೆ.

    ಇದನ್ನೂ ಓದಿ: ಕಾಂಗ್ರೆಸ್‌ಮುಕ್ತ ಗ್ರಾಮ ಪಂಚಾಯಿತಿ ಸವಾಲು ಸ್ವೀಕರಿಸಿ, ಕಾರ‌್ಯಕರ್ತರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕರೆ

    ಶಾಸಕರು ಮತ್ತು ಅವರ ಬೆಂಬಲಿಗರ ವಿರುದ್ಧ ಕ್ರಮ ಜರುಗಿಸಬೇಕು ಹಾಗೂ ಭ್ರೂಣ ಹತ್ಯೆ ನಷ್ಟ ಪರಿಹಾರವಾಗಿ 5 ಕೋಟಿ ರೂಪಾಯಿ ಧನ ಸಹಾಯ ಮಾಡಲು ಆದೇಶಿಸಬೇಕು ಎಂದು ದೂರಿನಲ್ಲಿ ಕೋರಲಾಗಿದೆ. ಮಹಿಳಾ ಸದಸ್ಯರ ಗತಿಯೇ ಹೀಗಾದರೆ ಇನ್ನು ಸಾಮಾನ್ಯ ಮಹಿಳೆಯರ ಗತಿಯೇನು ಎಂದು ಪ್ರಶ್ನಿಸಲಾಗಿದೆ.

    ಮಗನಿಗೆ ನೋವಾಗಬಾರದೆಂದು ಕೊಂದೇ ಬಿಟ್ಟ! ಮಗನ ಶವದ ಜತೆಯೇ ರಾತ್ರಿ ಮಲಗಿದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts