More

    ಶರ್ಮಾ ಐಪಿಎಸ್ ನಮ್ ಮನೆಗೆ ಕಾಫಿ ಕುಡಿಯೋಕೆ ಬಂದ್ರೆ ಈ ಅವಾಂತರ ನಿರೀಕ್ಷಿಸಿರಲಿಲ್ಲ : ಟಿವಿ ನಿರೂಪಕಿ

    ಭೋಪಾಲ: ಮಧ್ಯಪ್ರದೇಶದ ಹೆಚ್ಚುವರಿ ಪೊಲೀಸ್​ ಮಹಾನಿರ್ದೇಶಕ (ಎಡಿಜಿ) ಪುರುಷೋತ್ತಮ್​ ಶರ್ಮಾ ತಮ್ಮ ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿರುವ ಸಿಸಿಟಿವಿ ವಿಡಿಯೋ ತುಣುಕಿನ ಪ್ರಕರಣಕ್ಕೆ ಟಿವಿ ನಿರೂಪಕಿಯೊಬ್ಬರ ಎಂಟ್ರಿಯಾಗಿದೆ. ಸಿಸಿಟಿವಿ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಈಗ ಅದರ ಹಿನ್ನೆಲೆ ಬಹಿರಂಗವಾಗಿದೆ. ಅಷ್ಟೇ ಅಲ್ಲ, ಪುರುಷೋತ್ತಮ ಶರ್ಮಾರ ಪತ್ನಿ ಮತ್ತು ಪುತ್ರನ ವಿರುದ್ಧ ದೂರು ಕೂಡ ದಾಖಲಾಗಿದೆ!

    ಟಿವಿ ನಿರೂಪಕಿ ದಾಖಿಲಿಸಿದ ದೂರು ಹೀಗಿದೆ- ಅಂದು ಸೆಪ್ಟೆಂಬರ್ 27. ಸಂಜೆ 7 ಗಂಟೆ ಸುಮಾರಿಗೆ ಎಡಿಜಿ ಪುರುಷೋತ್ತಮ್ ಶರ್ಮಾ ಕರೆ ಮಾಡಿದ್ದರು. ನಿಮ್ಮ ಫ್ಲ್ಯಾಟ್ ಸಮೀಪವೇ ಇದ್ದೇನೆ ಎಂದು ಹೇಳಿದ್ದರು. ಅವರು ಪರಿಚಿತರಾದ್ದರಿಂದ ಸಹಜವಾಗಿಯೇ ಅವರನ್ನು ನಾನು ಮನೆಗೆ ಸೌಜನ್ಯದಿಂದಲೇ ಆಹ್ವಾನಿಸಿ, ಕಾಫಿ ಕುಡಿದು ಹೋಗುವಿರಂತೆ ಎಂದು ಹೇಳಿದ್ದೆ. ಅವರು ಅದನ್ನು ಮನ್ನಿಸಿ ಮನೆಗೆ ಬಂದಿದ್ದರು. ಆದರೆ ಅವರು ಆಗಮಿಸಿದ ಕೆಲವು ನಿಮಿಷಗಳ ಬಳಿಕ ಮನೆಯ ಕರೆಗಂಟೆ ಮೊಳಗಿತು. ನಾನು ಹೋಗಿ ಬಾಗಿಲು ತೆರೆಯುತ್ತಲೇ ಮಹಿಳೆಯೊಬ್ಬರು ಬಲವಂತದಿಂದ ಒಳನುಗ್ಗಿದ್ದರು. ಅಲ್ಲದೆ, ಶರ್ಮಾ ಜತೆಗೆ ಜಗಳಕ್ಕೆ ಇಳಿದರು. ಜಗಳ ತಾರಕಕ್ಕೇರುತ್ತಲೇ ಶರ್ಮಾ ಸಿಟ್ಟು ಮಾಡಿಕೊಂಡು ಹೊರಗೆ ಹೋದರು.

    ಇಷ್ಟಾದ ಕೂಡಲೇ ಆ ಮಹಿಳೆ ನನ್ನ ಬಳಿ ಬಂದು ಇಲ್ಲದ ಸಲ್ಲದ ಪ್ರಶ್ನೆಗಳನ್ನೆಲ್ಲ ಕೇಳಿದರು. ಬಳಿಕ ನನ್ನ ಬೆಡ್​ ರೂಮ್​ಗೆ ನುಗ್ಗಿ ಅಲ್ಲಿ ವಿಡಿಯೋ ಚಿತ್ರೀಕರಣ ಮಾಡಿದರು. ಆ ವಿಡಿಯೋ ಕೂಡ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಆ ಮಹಿಳೆ ಶರ್ಮಾ ಅವರ ಪತ್ನಿ ಎಂಬುದು ನನಗೆ ಗೊತ್ತಿರಲಿಲ್ಲ. ಬಳಿಕ ಗೊತ್ತಾಯಿತು. ಅವರು ಮತ್ತು ಅವರ ಪುತ್ರ ಇಬ್ಬರೂ ನನ್ನ ಹೆಸರಿಗೆ ಕಳಂಕ ತರಲು ಪ್ರಯತ್ನಿಸುತ್ತಿದ್ದಾರೆ. ಅವರ ಕೌಟುಂಬಿಕ ಜಗಳಕ್ಕೆ ನನ್ನನ್ನು ಬಲಿಪಶು ಮಾಡುತ್ತಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿ ಶರ್ಮಾ ಅವರು ನನ್ನನ್ನು ಮಗಳೇ ಎಂದು ಕೂಗುತ್ತಿದ್ದರು. ಅವರನ್ನು ಕಾಫಿಗೆ ಕರೆದರೆ ಇಷ್ಟೆಲ್ಲ ಅವಾಂತರಗಳಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನಾನು ಮಾನಸಿಕವಾಗಿ ತುಂಬಾ ನೊಂದುಕೊಂಡಿದ್ದೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಿ.

    ಇದನ್ನೂ ಓದಿ:  ಐಪಿಎಸ್​ ಆಮಿಷ, ಗಂಡ-ಹೆಂಡತಿಯಿಂದಲೇ ಮೋಸ.. ಟಿವಿ ನಿರೂಪಕಿಯಿಂದ 3.5 ಕೋಟಿ ರೂ. ವಂಚನೆ..

    ವಿಡಿಯೋ ಬಹಿರಂಗವಾದ ಬೆನ್ನಿಗೇ ಪುರುಷೋತ್ತಮ್ ಶರ್ಮಾ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಕ್ರಮ ಜರುಗಿಸಿದೆ. ಪೊಲೀಸರು ಈಗ ನಿರೂಪಕಿ ನೀಡಿದ ದೂರಿನ ಮೇಲೆ ಏನು ಕ್ರಮ ತೆಗೆದುಕೊಳ್ಳುವರೆಂಬ ಕುತೂಹಲ ಕೆರಳಿಸಿದೆ. (ಏಜೆನ್ಸೀಸ್)

    VIDEO| ಪತ್ನಿಯನ್ನು ಎಳೆದಾಡಿ ಹಲ್ಲೆ ಮಾಡಿದ ಐಪಿಎಸ್​ ಅಧಿಕಾರಿಗೆ ಶಾಕ್​ ಕೊಟ್ಟ ಸರ್ಕಾರ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts