More

    ಬಿಜೆಪಿ ಮಂಡಲ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ

    ಕೊಪ್ಪ: ಮಂಡಲ ಬಿಜೆಪಿ ಅಧ್ಯಕ್ಷರಾಗಿ ಬಿ.ಎಸ್.ಸತೀಶ್ ಮುಂದುವರಿಯಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಪಕ್ಷದ ಜಿಲ್ಲಾ ಸಮಿತಿ ವೀಕ್ಷಕರು ಮುಂದಿನ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿ ಮಾಹಿತಿ ಪಡೆದಿದ್ದಾರೆ. ಅಧ್ಯಕ್ಷರಾಗಲು ಈಗಾಗಲೆ ತಾಲೂಕಿನಲ್ಲಿ ಒಂಬತ್ತು ಜನರು ಪೈಪೋಟಿಯಲ್ಲಿದ್ದಾರೆ.

    ಹಾಲಿ ಮಂಡಲ ಅಧ್ಯಕ್ಷ ಬಿ.ಎಸ್ ಸತೀಶ್ ಅದ್ದಡ ಪಕ್ಷವನ್ನು ಮುನ್ನೆಡೆಸಿದ್ದರು. ಪಕ್ಷಕ್ಕೆ ಮತ್ತಷ್ಟು ಬಲ ತುಂಬಲು ಯತ್ನಿಸಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತಾಲೂಕಿನಲ್ಲಿ ಕಾಂಗ್ರೆಸ್‌ಗಿಂತ ನಾಲ್ಕು ಸಾವಿರ ಮತಗಳನ್ನು ಮುನ್ನಡೆ ಪಡೆದುಕೊಂಡಿತ್ತು. ಸತೀಶ್ ಅಧ್ಯಕ್ಷರಾಗಿ ಮುಂದುವರಿಯಲು ಹಿಂದೇಟು ಹಾಕಿದ ಕಾರಣ ಜಿಲ್ಲಾ ಘಟಕವು ಹೊಸ ಅಧ್ಯಕ್ಷರ ಆಯ್ಕೆ ಕಸರತ್ತು ನಡೆಸಿದೆ.
    ಇತ್ತೀಚೆಗೆ ತಾಲೂಕು ಬಿಜೆಪಿಯಲ್ಲಿ ಒಳಬೇಗುದಿ ಹೆಚ್ಚಾಗಿ ಕಾಣುತ್ತಿದೆ. ಗುಂಪುಗಾರಿಕೆ, ನಾಯಕರಲ್ಲಿ ಸಮನ್ವಯ ಕೊರತೆ ಕೂಡ ಪಕ್ಷಕ್ಕೆ ತಲೆನೋವಾಗಿದೆ. ಪಕ್ಷದೊಳಗಿನ ಸಮಸ್ಯೆ ಸರಿಪಡಿಕೊಂಡು ಹೋಗುವ ಜತೆಗೆ ಮುಂದಿರುವ ಲೋಕಸಭೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಪಕ್ಷವನ್ನು ಇನ್ನಷ್ಟು ಸಂಘಟಿಸುವ ಸವಾಲು ನೂತನ ಅಧ್ಯಕ್ಷರ ಎದುರಾಗಲಿದೆ.
    ಮೂರು ತಾಲೂಕುಗಳನ್ನು ಒಳಗೊಂಡ ಶೃಂಗೇರಿ ಕ್ಷೇತ್ರದಲ್ಲಿ ಬಿಜೆಪಿ ಒಕ್ಕಲಿಗ, ಬ್ರಾಹ್ಮಣ ಹಾಗೂ ಹಿಂದುಳಿದ ವರ್ಗದವರಿಗೆ ಪ್ರಾತಿನಿಧ್ಯ ನೀಡುತ್ತ ಬರುತ್ತಿತ್ತು. ಈ ಹಿಂದೆ ಕೊಪ್ಪ ಮಂಡಲ ಅಧ್ಯಕ್ಷ ಪಟ್ಟವನ್ನು ಬ್ರಾಹ್ಮಣ ಹಾಗೂ ಒಕ್ಕಲಿಗ ಸಮುದಾಯಕ್ಕೆ ಪಕ್ಷ ನೀಡಿತ್ತು. ಈ ಬಾರಿ ಒಕ್ಕಲಿಗ ಸಮುದಾಯದವರು ಹೆಚ್ಚಿನ ಆಕಾಂಕ್ಷಿಗಳಿದ್ದಾರೆ.
    ಮುಂಡರಾದ ದಿನೇಶ್ ಹೊಸೂರು, ಅಜಿತ್ ಬಿಕ್ಳಿ, ಅನೂಪ್ ನಾರ್ವೆ, ರಾಘವೇಂದ್ರ ಕೆಸವೆ, ಎಚ್.ಆರ್ ಜಗದೀಶ್, ಕಿರಣ್ ಮಡಬಳ್ಳಿ, ಈಶ್ವರ್ ಮಾತ್ವನೆ, ಪೂರ್ಣಚಂದ್ರ, ಜಯಂತ್ ನಿಲುವಾಗಿಲು ಇವರ ಹೆಸರುಗಳು ಮಂಡಲ ಅಧ್ಯಕ್ಷ ರೇಸ್‌ನಲ್ಲಿ ಇವೆ. ಅಂತಿಮವಾಗಿ ಜಿಲ್ಲಾ ಸಮಿತಿ ಯಾರಿಗೆ ಮಣೆ ಹಾಕುತ್ತದೆ ಎಂದು ಕಾದು ನೋಡಬೇಕಿದೆ.
    ಈ ಬಾರಿ ಬಿಜೆಪಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ವರ್ಷದ ಮನದಂಡದ ಜತೆಗೆ ಪಕ್ಷ ನಿಷ್ಠೆ, ಕಾರ್ಯಕರ್ತರ ಅಭಿಪ್ರಾಯ, ಮೂಲ ಬಿಜೆಪಿ, ಸಂಘಟಿಸುವ ಸಾರ್ಮರ್ಥ್ಯ ಇರುವವರನ್ನೇ ಆಯ್ಕೆ ಮಾಡಲಾಗುತ್ತದೆ.
    ಸವಾಲು ಹೆಚ್ಚು: ನೂತನ ಅಧ್ಯಕ್ಷರಾಗಿ ಆಯ್ಕೆ ಆಗುವವರು ಪಕ್ಷ ಸಂಘಟನೆಯ ದೊಡ್ಡ ಸವಾಲು ಎದುರಿಸಬೇಕಾಗುತ್ತದೆ. ಮುಖ್ಯವಾಗಿ ಆಂತರಿಕ ಸಮಸ್ಯೆ ಸರಿಪಡಿಸಬೇಕಿದೆ. ಜತೆಗೆ ರಾಜ್ಯದಲ್ಲಿ ಹಾಗೂ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದರಿಂದ ಕಾರ್ಯಕರ್ತರ ಜತೆ ನಿಲ್ಲುವುದರ ಜತೆಗೆ ಹೋರಾಟಗಳ ಮುಲಕ ಸಂಘಟಿಸಬೇಕಿದೆ. ಬಿಜೆಪಿಯ ಸಾಂಪ್ರದಾಯಕ ಮತಗಳು ಕಾಂಗ್ರೆಸ್, ಜೆಡಿಎಸ್‌ನತ್ತ ವಾಲದಂತೆ ನೋಡಿಕೊಳ್ಳಬೇಕಿದೆ.
    ಮುಂದುವರಿಸುವ ಸಾಧ್ಯತೆ: ಲೋಕಸಭಾ ಚುನಾವಣೆಗೆ ಇನ್ನೆರಡು ತಿಂಗಳು ಇದ್ದು, ಅಲ್ಲಿಯವರೆಗೆ ಹಾಲಿ ಅಧ್ಯಕ್ಷರಾಗಿರುವ ಬಿ.ಎಸ್.ಸತೀಶ್ ಅದ್ದಡ ಅವರನ್ನೆ ಮುಂದುವರಿಸುವ ಸಾಧ್ಯತೆಯಿದೆ. ಪಕ್ಷದ ಸಭೆಯಲ್ಲಿ ಹಲವು ಮುಖಂಡರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
    ಬಿಜೆಪಿ ಮಂಡಲ ನೂತನ ಅಧ್ಯಕ್ಷರು ಯಾರೆಂಬುದನ್ನು ೆ.3ಕ್ಕೆ ಅಂತಿಮ ಮಾಡಲಾಗುತ್ತದೆ. ಕೆಲವು ಮಂಡಲಗಳ ಅಧ್ಯಕ್ಷರನ್ನು ಮುಂದುವರಿಸುವ ಚಿಂತನೆಯಿದೆ ಎಂದು ಬಿಜೆಪಿ ನಿಯೋಜಿತ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ವಿಜಯವಾಣಿಗೆ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts