More

    ದೇವಸ್ಥಾನ ಜೀರ್ಣೋದ್ಧಾರಕ್ಕೆ ಮಂಜೂರಾದ ಅನುದಾನ ಬಿಡುಗಡೆಗೆ ಮನವಿ

    ಕಾರವಾರ: ದೇವಸ್ಥಾನದ ಜೀರ್ಣೋದ್ಧಾರದ ಅನುದಾನ ಬಿಡುಗಡೆ ಮಾಡುವಂತೆ ಕಡವಾಡ ದೇವತಿ ದೇವಿ ದೇವಸ್ಥಾನ ಸಮಿತಿ ಸದಸ್ಯರು ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
    ಕಡವಾಡ ಗ್ರಾಮದ ದೇವತಿ ದೇವಿ (ಗ್ರಾಮದೇವಿ) ದೇವಸ್ಥಾನವು ತನ್ನದೆ ಪುರಾಣ, ಚರಿತ್ರೆಗಳಿಂದ ಪ್ರಸಿದ್ಧಿ ಮತ್ತು ಪ್ರಾಮುಖ್ಯತೆಯನ್ನು ಹೊಂದಿದೆ. ದೇವಸ್ಥಾನವು ನೂರು ವರ್ಷಕ್ಕೂ ಮೆಲ್ಪಟ್ಟು ಇತಿಹಾಸವನ್ನು ಹೊಂದಿರುತ್ತದೆ. ಜನರ ಸಕಲ ಇಷ್ಟಾರ್ಥಗಳನ್ನು ಈಡೇರಿಸುವ ದೇವಿಯಂಬ ನಂಬಿಕೆ ಜನರ ಮನದಲ್ಲಿದೆ. ದೇವಿಯ ಸನ್ನಿಧಿಯಲ್ಲಿ ವರ್ಷವಿಡಿ ಹತ್ತಾರು ಧಾರ್ಮಿಕ ಕಾರ್ಯಗಳು ದೇವಸ್ಥಾನದ ಭಕ್ತರ ಸಂಯೋಗದಲ್ಲಿ ನಡೆಯುತ್ತಲೆ ಬಂದಿವೆ. ನವರಾತ್ರಿ ಉತ್ಸವ, ಹೊಸ್ತಿಲ ಹಬ್ಬ, ಉತ್ತರ ಕನ್ನಡ ಜಿಲ್ಲೆಯ ಪ್ರಮುಖವಾದ ಬಂಡಿ ಹಬ್ಬಗಳು, ಜರಗುತ್ತವೆ. ಕಳೆದ ವರ್ಷ ದೇವಸ್ಥಾನದ ಜಿರ್ಣೋದ್ದಾರಕ್ಕಾಗಿ ಶಾಸಕರ ಪ್ರಯತ್ನದಿಂದ ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯಿಂದ 25 ಲಕ್ಷ ಮಂಜೂರಾಗಿತ್ತು.

    ಇದನ್ನೂ ಓದಿ: ಜ್ಯೂಸ್, ಟೈರ್ ಅಂಗಡಿ ಮಾಲೀಕರು ನಿತ್ಯ 200 ಕೋಟಿ ಗಳಿಸುವ ಬೆಟ್ಟಿಂಗ್ ದಂಧೆಯ ರೂವಾರಿಗಳಾಗಿದ್ದು ಹೇಗೆ?

    ಮೊದಲ ಹಂತದಲ್ಲಿ 12.50 ಲಕ್ಷ ರೂ. ಅನುದಾನ ಬಿಡುಗಡೆ ಆಗಿದ್ದರಿಂದ ದೇವಸ್ಥಾನದ ಜಿರ್ಣೋದ್ಧಾರ ಕಾಮಗಾರಿ ಆರಂಭಿಸಲಾಗಿತ್ತು ಕಾಮಗಾರಿಯ ಮೊದಲ ಭಾಗವು ಮೊದಲ ಹಂತದ ಅನುದಾನದಿಂದ ಪೂರ್ಣಗೊಂಡಿದ್ದು ದಾಖಲೆ ಪತ್ರ ಹಾಗೂ ಭಾವ ಚಿತ್ರ ಸಹ ಇಲಾಖೆಗೆ ಒಪ್ಪಿಸಲಾಗಿದೆ. ಆದರೆ, ಬಾಕಿ 12.50 ಲಕ್ಷ ಅನುದಾನ ಇದುವರೆಗೂ ಬಿಡುಗಡೆಯಾಗಿಲ್ಲ. ಇನ್ನುಳಿದ ಅರ್ಧ ಭಾಗದಷ್ಟು ಕಾಮಗಾರಿಗಳು ನಿಂತಿವೆ. ಜೊರ್ಣೋದ್ಧಾರ ಕಾಮಗಾರಿ ಮುಗಿದ ನಂತರವೆ ಪ್ರತಿ ವರ್ಷದ ಧಾರ್ಮಿಕ ಆಚರಣೆಗಳು ಜರುಗಲಿವೆ. ಅನುದಾನ ಬಿಡುಗಡೆ ಆಗದ ಪರಿಣಾಮ ಧಾರ್ಮಿಕ ಆಚರಣೆಗಳಿಗೆ ಅಡಚಣೆ ಆಗಿದ್ದು, ಶ್ರೀ ದೇವತಿ ದೇವಿ ಭಕ್ತಾದಿಗಳ ಆತಂಕಕ್ಕೆ ಕಾರಣವಾಗಿದೆ. ಹಾಗಾಗಿ ಇದರಿಂದ ಶೀಘ್ರ ಅನುದಾನ ಬಿಡುಗಡೆ ಮಾಡುವಂತೆ ದೇವಸ್ಥಾನ ಸಮಿತಿ ಸದಸ್ಯರು ಮನವಿ ಮಾಡಿದರು.
    ದೇವಸ್ಥಾನ ಸಮಿತಿ ಅಧ್ಯಕ್ಷ ಸುಭಾಷ ಗುನಗಿ, ಕಾರ್ಯದರ್ಶಿ ಚಂದ್ರಕಾಂತ ಗುನಗಿ, ಪೂಜಾರಿ ಕೃಷ್ಣಾ ಎಸ್.ಗುನಗಿ, ಸಮಾಜದ ಬುಧವಂತರು, ದಿಂಗಾ ಗುನಗಿ, ಸಮಾಜದ ಹಿರಿಯರು ದಾಮೋದರ ಗುನಗಿ ಮನವಿ ಸಲ್ಲಿಕೆಯ ಸಂದರ್ಭದಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts