More

    ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಏರಿಕೆ; ಗ್ರಾಹಕರಿಗೆ ತಟ್ಟಿದ ಹೋಟೆಲ್ ಊಟ ತಿಂಡಿಗಳ ದರ ಹೆಚ್ಚಳ ಬಿಸಿ

    ಬೆಂಗಳೂರು: ವಾಣಿಜ್ಯ ಬಳಕೆಯ ಸಿಲಿಂಡರ್ ದರ ಸೇರಿ ಇತರ ಬೆಲೆಗಳು ನಿರಂತರವಾಗಿ ಹೆಚ್ಚಳದಿಂದಾಗಿ ಹೋಟೆಲ್‌ಗಳ ಊಟ-ತಿಂಡಿಗಳ ಮೇಲೆ 2 ರೂ.ನಿಂದ 5 ರೂ.ವರೆಗೆ ದರ ಹೆಚ್ಚಾಗುವ ಸಾಧ್ಯತೆ ಇದೆ.

    ರಾಜ್ಯದಲ್ಲಿ ಅಂದಾಜು 40 ಸಾವಿರ ಹೋಟೆಲ್‌ಗಳಿವೆ. ಅಡುಗೆ ಎಣ್ಣೆ, ವಾಣಿಜ್ಯ ಬಳಕೆ ಸಿಲಿಂಡರ್ ಹಾಗೂ ಕಾರ್ಮಿಕ ವೇತನ ಸೇರಿ ಇತರೆ ಖರ್ಚು ವೆಚ್ಚಗಳು ದುಬಾರಿ ಕಾರಣದಿಂದ ಹೋಟೆಲ್‌ಗಳ ಮಾಲೀಕರು, ಊಟ ತಿಂಡಿಗಳ ಮೇಲೆ ಈಗಾಗಲೇ 5-6 ರೂ.ಹೆಚ್ಚಿಸಿದ್ದರು. 2022ರ ಮಾರ್ಚ್ ಅಥವಾ ಎಪ್ರಿಲ್‌ನಲ್ಲಿ ಮತ್ತೊಮ್ಮೆ ದರ ಏರಿಕೆ ಅನಿವಾರ್ಯವಾದಲ್ಲಿ ಮಾಲೀಕರು ಸಿಲುಕಿದ್ದರೂ ದರ ಏರಿಸುವ ಬದಲು ಎಣ್ಣೆಯಿಂದ ತಯಾರಿಸುವ ಕರಿದ ಪದಾರ್ಥಗಳನ್ನು ಕಡಿಮೆ ಮಾಡಿದ್ದರು.

    ದರ ಏರಿಸಿದರೆ ಹೋಟೆಲ್‌ಗಳಿಗೆ ಬರುವ ಗ್ರಾಹಕರ ಸಂಖ್ಯೆ ಕಡಿಮೆಯಾಗಿ ವ್ಯಾಪಾರ ಕುಸಿಯುವ ಭೀತಿಯಿಂದ ದರ ಹೆಚ್ಚಳ ಮಾಡದಿರಲು ಕೆಲ ಮಾಲೀಕರು ನಿರ್ಧರಿಸಿದ್ದರು. ಆದರೆ, ಹಾಲು, ಮೊಸರು, ತುಪ್ಪ, ಬೆಣ್ಣೆ, ಕಾಫಿ ಪುಡಿ ಸೇರಿ ಇತ್ಯಾದಿ ವಸ್ತುಗಳ ದರ ಏರಿಕೆ ಕಾರಣವೊಡ್ಡಿ ಕೆಲ ಮಾಲೀಕರು ಕಾಫಿ ಮತ್ತು ದೋಸೆಯಲ್ಲಿ ದರ ಹೆಚ್ಚಿಸಿದ್ದರು. ಇದರಿಂದ ಗ್ರಾಹಕರಿಗೆ ತುಸು ಹೊರೆಯಾಗಿತ್ತು. ಈಗ ವಾಣಿಜ್ಯ ಬಳಕೆಯ ಸಿಲಿಂಡರ್, ಊಟ ತಯಾರಿಸುವ ಪರಿಣಿತ ಸಿಬ್ಬಂದಿ ವೇತನ ಏರಿಕೆ ಸೇರಿ ಇತರ ಕಾರಣಗಳಿಂದ ಹೋಟೆಲ್ ಮಾಲೀಕರು, ಮತ್ತೊಮ್ಮೆ ಊಟ ತಿಂಡಿಗಳ ಬೆಲೆ ಹೆಚ್ಚಿಸಲು ಮುಂದಾಗಿದ್ದು, ಇದರಿಂದ ಗ್ರಾಹಕರಿಗೆ ಇನ್ನಷ್ಟು ಹೊರೆಯಾಗಲಿದೆ.

    ಇಂದು ತೀರ್ಮಾನ

    ನಿರಂತರವಾಗಿ ಸಿಲಿಂಡರ್ ದರ ಹೆಚ್ಚಳದಿಂದ ಹೋಟೆಲ್ ಊಟ-ತಿಂಡಿಗಳ ಮೇಲೆ ದರ ಹೆಚ್ಚಿಸುವ ಬಗ್ಗೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘ, ಸೋಮವಾರ (ಏ.3) ಸಭೆ ಹಮ್ಮಿಕೊಂಡಿದೆ. ಸಭೆಯಲ್ಲಿ ಎಲ್ಲ ಹೋಟೆಲ್‌ಗಳ ಮಾಲೀಕರು ಸೇರಿ ದರ ಏರಿಸಬೇಕೋ ಅಥವಾ ಬೇಡವೋ ಎಂಬುದರ ಬಗ್ಗೆ ನಿರ್ಧಾರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳಿದ್ದಾರೆ.

    ನಿರಂತರವಾಗಿ ಎಲ್ಪಿಜಿ ಸಿಲಿಂಡರ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹೋಟೆಲ್ ಉದ್ದಿಮೆ ಅತಂತ್ರ ಸ್ಥಿತಿಗೆ ತಲುಪಿದೆ. ಕರೊನಾದಿಂದ ಆರ್ಥಿಕ ಸಂಕಷ್ಟ ಅನುಭವಿಸಿದ್ದ ನಾವು ದರ ಹೆಚ್ಚಳ ಮಾಡಿದರೆ ಗ್ರಾಹಕರು ಕಡಿಮೆಯಾಗಿ ವ್ಯಾಪಾರ ಕುಸಿಯುವ ಆತಂಕವೂ ಇದೆ. ಆದರೂ, ವಿಧಿಯಿಲ್ಲದೆ ಊಟ-ತಿಂಡಿಗಳ ಮೇಲೆ ದರ ಹೆಚ್ಚಿಸುವ ಅನಿವಾರ್ಯ ಪರಿಸ್ಥಿತಿಯಲ್ಲಿ ಸಿಲುಕಿದ್ದೇವೆ. ಈಗಾಗಲೇ ಕೆಲ ಮಾಲೀಕರು ದರ ಹೆಚ್ಚಿಸಿದ್ದಾರೆ.
    ಬಿ.ಚಂದ್ರಶೇಖರ್ ಹೆಬ್ಬಾರ್. ಅಧ್ಯಕ್ಷ.ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts