More

    ಸೌಕರ್ಯ ಒದಗಿಸಲು ಪ್ರಯತ್ನ

    ನೇಸರಗಿ: ಕಿತ್ತೂರು ಕ್ಷೇತ್ರದ ಜನರ ಪ್ರೀತಿಗೆ ಆಭಾರಿಯಾಗಿದ್ದು, ಅವರ ಋಣ ತೀರಿಸುತ್ತೇನೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು. ಸ್ಥಳೀಯ ದೇವರಕೊಂಡ ಅಜ್ಜನ ಲೀಲಾಮಠದ ಸಬಾಭವನದಲ್ಲಿ ಅಭಿಮಾನಿಗಳಿಂದ ಶನಿವಾರ ಹಮ್ಮಿಕೊಂಡಿದ್ದ 51ನೇ ಜನ್ಮದಿನ ಆಚರಣೆ ಸಮಾರಂಭದಲ್ಲಿ ಮಾತನಾಡಿ, ಸರ್ಕಾರ ಜನರಿಗೆ ನೀಡಿದಂತಹ ಗ್ಯಾರಂಟಿ ಯೋಜನೆ ಹಂತ ಹಂತವಾಗಿ ಜಾರಿಗೆ ತರುತ್ತಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದರು.

    ಶಾಲಾ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ, ಯುವಕರಿಗೆ ಉದ್ಯೋಗ ಒದಗಿಸಲು ಪ್ರಯತ್ನ ಮಾಡಲಾಗುವುದು. ಕಿತ್ತೂರು ಕೋಟೆ ನಿರ್ಮಾಣ, ಕೆರೆಗೆ ನೀರು ತುಂಬುವ ಯೋಜನೆ ಹಾಗೂ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು. ನೇಸರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಪ್ಪ ಅರಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಶಾಸಕರ ಅಭಿಮಾನಿಗಳು ಶಾಲೆ ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಪೆನ್, ಛತ್ರಿ ವಿತರಿಸಿದರು. ಸ್ಥಳೀಯ ಸರ್ಕಾರಿ ಪ್ರಸೂತಿ ಗಹ ಹಾಗೂ ದೇಶನೂರ ಪ್ರಾಥಮಿಕ ಆರೋಗ್ಯ ಕೇಂದ್ರದ ರೋಗಿಗಳಿಗೆ ಹಣ್ಣು ವಿತರಿಸಲಾಯಿತು. ಬಾಬಾಸಾಹೇಬ ಅಭಿಮಾನಿ ಬಳಗದಿಂದ ಅಣ್ಣಾ ಬ್ರಿಗೇಡ್ ಲಾಂಛನ ಬಿಡುಗಡೆ ಮಾಡಲಾಯಿತು. ಕಾಂಗ್ರೆಸ್ ಮುಖಂಡರಾದ ಉಮೇಶ ಬಾಳಿ, ಡಾ.ಮಹಾಂತೇಶ ಕಡಾಡಿ, ರಮೇಶ ರಾಯಪ್ಪಗೋಳ, ರವಿ ಸಿದ್ದಮ್ಮನವರ, ಭರಮಣ್ಣ ಸತ್ಯಣ್ಣವರ, ಉಮೇಶ ಪಾಟೀಲ, ಜಗದೀಶ ಪಾಟೀಲ ಮಾತನಾಡಿದರು. ನೇಗಿನಹಾಳ ಪಿಕೆಪಿಎಸ್ ಅಧ್ಯಕ್ಷ ನಾನಾಸಾಹೇಬ ಪಾಟೀಲ, ಯುವ ಮುಖಂಡ ಸಚಿನ ಪಾಟೀಲ, ಎ.ಆರ್.ಮಾಳಣ್ಣವರ, ಶಿವನಗೌಡ ಪಾಟೀಲ, ಬಾಳಪ್ಪ ಮಾಳಗಿ, ದೀಪಕಗೌಡ ಪಾಟೀಲ, ಗ್ರಾಪಂ ಸದಸ್ಯ ನಿಂಗಪ್ಪ ತಳವಾರ, ಬಸವರಾಜ ಚಿಕ್ಕನಗೌಡ್ರ, ರವಿ ಸಿದ್ದಮ್ಮನವರ, ಉಮೇಶ ಪಾಟೀಲ, ನಿತ್ಯಾನಂದ ಹಿರೇಮಠ ಮಂಜುನಾಥ ಹುಲಮನಿ, ಮಹಾಂತೇಶ ಸತ್ತಿಗೇರಿ, ಸುರೇಶ ಅಗಸಿಮನಿ, ಭರಮಣ್ಣ ಸತ್ಯಣ್ಣವರ, ಪ್ರಕಾಶ ತೋಟಗಿ, ಅಣ್ಣಪ್ಪ ಕಡಕೋಳ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts