More

    ಹಾಸ್ಯನಟಿಗೆ ರೇಪ್​ ಬೆದರಿಕೆ ಹಾಕಿದ ಯುವಕ: ಆಕೆಯ ವಿರುದ್ಧ ಕಾನೂನು ಕ್ರಮಕ್ಕೆ ಸೂಚಿಸಿದ ಮಹಾ ಗೃಹ ಸಚಿವ

    ಮುಂಬೈ: ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಜೋಕ್​ ಮಾಡಿದ ಹಾಸ್ಯ ನಟಿ ಅಗ್ರಿಮಾ ಜೋಶುವಾ ಅವರಿಗೆ ಯುವಕನೋರ್ವ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

    ಕಾಮಿಡಿಯನ್​ ಅಗ್ರಿಮಾ ಅವರ 2019ರ ವಿಡಿಯೋವೊಂದು ಇದೀಗ ವೈರಲ್​ ಆಗಿದೆ. ಅದರಲ್ಲಿ ಆಕೆ ಶಿವಾಜಿ ಮಹಾರಾಜರ ಬಗ್ಗೆ ಹಾಸ್ಯ ಮಾಡಿದ್ದಾರೆ. ಆದರೆ ಅದು ವೈರಲ್​ ಆಗುತ್ತಿದ್ದಂತೆ ವಿವಾದ ಸೃಷ್ಟಿಸಿದೆ. ಕೆಲವು ರಾಜಕೀಯ ಮುಖಂಡರೂ ಅಗ್ರಿಮಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ತನ್ನ ಹಾಸ್ಯ ವಿವಾದ ಸೃಷ್ಟಿಸುತ್ತಿದ್ದಂತೆ ಅಗ್ರಿಮಾ ಕೂಡ ಮತ್ತೊಂದು ವಿಡಿಯೋ ಮಾಡಿ ಎಲ್ಲರ ಕ್ಷಮೆ ಕೇಳಿದ್ದಾರೆ. ಕೆಲವು ರಾಜಕಾರಣಿಗಳನ್ನು ಟ್ಯಾಗ್​ ಮಾಡಿರುವ ಅವರು, ಯಾರ ಭಾವನೆಗಳಿಗೂ ನೋವು ಮಾಡುವ ಉದ್ದೇಶ ಇರಲಿಲ್ಲ ಎಂದು ಹೇಳಿದ್ದಾರೆ.
    ಯುವಕನೋರ್ವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಮಾಡಿದ್ದಾನೆ. ಶಿವಾಜಿ ಪ್ರತಿಮೆ ವಿಚಾರದ ಬಗ್ಗೆ ಜೋಕ್​ ಮಾಡಿದ್ದರಿಂದ ನಮ್ಮೆಲ್ಲರ ಭಾವನೆಗಳಿಗೆ ನೋವಾಗಿದೆ. ನಿನ್ನನ್ನು ಅತ್ಯಾಚಾರ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ.
    ಆ ವಿಡಿಯೋ ವೈರಲ್​ ಆಗುತ್ತಿದ್ದಂತೆ ರಾಷ್ಟ್ರೀಯ ಮಹಿಳಾ ಆಯೋಗ ಕೂಡಲೇ ಆತನನ್ನು ಅರೆಸ್ಟ್​ ಮಾಡುವಂತೆ ಪೊಲೀಸರಿಗೆ ತಿಳಿಸಿದೆ.

    ಮಹಿಳೆಯರಿಗೆ ಸೈಬರ್​ ಸೆಕ್ಯೂರಿಟಿ ಇರಬೇಕು ಎಂಬುದು ಮಹಿಳಾ ಆಯೋಗದ ಆಶಯ ಎಂದಿರುವ ಅಧ್ಯಕ್ಷೆ ರೇಖಾ ಶರ್ಮಾ ಗುಜರಾತ್​ ಡಿಜಿಪಿ ಶಿವಾನಂದ್​ ಜಾ ಅವರಿಗೆ ಪತ್ರವನ್ನೂ ಬರೆದಿದ್ದಾರೆ. ಅಲ್ಲದೆ, ಕಾಮಿಡಿಯನ್​ಗೆ ರೇಪ್​ ಬೆದರಿಕೆ ಹಾಕಿದವನ ವಿಡಿಯೋವನ್ನೂ ಡಿಜಿಪಿ ಅವರಿಗೆ ಕಳಿಸಿಕೊಟ್ಟಿದ್ದಾರೆ. ಡಿಜಿಪಿ ಕೂಡ ಸ್ಪಂದಿಸಿದ್ದು, ಪ್ರಕರಣದ ಸೂಕ್ಷ್ಮತೆಯನ್ನಾಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

    ಈ ಮಧ್ಯೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್​ ದೇಶ್​ಮುಖ್​ ಅವರು ಕಾಮಿಡಿಯನ್​ ಅಗ್ರಿಮಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.

    ಶಿವಾಜಿ ಮಹಾರಾಜರಿಗೆ ಅವಮಾನ ಮಾಡಿದ ಅಗ್ರಿಮಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್​ ಕಮಿಷನರ್​ಗೆ ಸೂಚಿಸಿದ್ದೇನೆ. ಈ ವಿಚಾರದ ಬಗ್ಗೆ ಅನಗತ್ಯ ಚರ್ಚೆ ಬೇಡ ಎಂದಿದ್ದಾರೆ. ಇನ್ನು ಶಾಸಕರೋರ್ವರು ಕೂಡ ಅಗ್ರಿಮಾ ವಿರುದ್ಧ ದೂರು ನೀಡಿದ್ದಾರೆ.(ಏಜೆನ್ಸೀಸ್​)

    ಗೋಗ್ರಾದಿಂದ ಚೀನಾ ಸೈನಿಕರು ಹಿಂದೆ ಸರಿದಿದ್ದೇ ಸುಳ್ಳು ಎಂದ ನಿವೃತ್ತ ಕರ್ನಲ್​: ರಾಹುಲ್​ ಗಾಂಧಿ ಕೆಂಡಾಮಂಡಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts