More

    ಮಾನವಾ.. ನಿನ್ನ ಮುಕ್ತಿಯ ಮಾರ್ಗ ನಿನ್ನಲ್ಲೇ ಇದೆ!

    ಮಾನವಾ.. ನಿನ್ನ ಮುಕ್ತಿಯ ಮಾರ್ಗ ನಿನ್ನಲ್ಲೇ ಇದೆ!ಕಳೆದವಾರದ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿದ್ದ ಕೆಲವು ಅರ್ಥಪೂರ್ಣ ಹಾಗೂ ಉತ್ತರಯೋಗ್ಯ ಪ್ರಶ್ನೆಗಳಿಗೆ ಸಮಾಧಾನ ನೀಡುವ ಪ್ರಯತ್ನವಾಗಿ ಈ ಮಾತುಗಳನ್ನು ಹೇಳುತ್ತಿದ್ದೇನೆ.

     

    ಲೈಂಗಿಕ ಸಂಪರ್ಕದಿಂದಾಗಿ ದೇಹಗಳ ನಡುವೆ ನೆನಪುಗಳು ಅಧಿಕ ಪ್ರಮಾಣದಲ್ಲಿ ವರ್ಗಾವಣೆಯಾಗುತ್ತವೆ ಎಂದು ಪೌರ್ವಾತ್ಯ ಸಮಾಜಗಳು ನಂಬಿದ್ದು, ಅದರ ಋಣಾತ್ಮಕತೆಯನ್ನು ಸೀಮಿತಗೊಳಿಸಲು ತಾವು ತಿಳಿದಂತಹ ಪರಿಹಾರಾತ್ಮಕ ಕ್ರಮಗಳನ್ನು ರೂಢಿಗೆ ತಂದದ್ದು ಸರಿಯಷ್ಟೇ. ಆದಾಗ್ಯೂ, ಕಾಲಕ್ರಮೇಣ ಈ ವಿಷಯ ಬಹುಪಾಲು ಜನರಿಂದ ಮರೆಯಾಗಿ, ಲೈಂಗಿಕ ಸ್ವೇಚ್ಛಾಚಾರ ಸಮಾಜದಲ್ಲಿ ದಿನದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹರಡಲೂತೊಡಗಿತು. ಅದರಲ್ಲೂ ಅದು ಪಾಶ್ಚಾತ್ಯ ಸಮಾಜದಲ್ಲಿ ನಿರ್ಬಂಧವೇ ಇಲ್ಲದೇ ನಡೆಯುವಂತಾಗಿದೆ. ಇದರಿಂದಾಗಿಯೇ ಜೋನ್ ಥೆರೆಸಾ ಗ್ಯಾರಿಟಿ ಅರ್ಧ ಶತಮಾನದ ಹಿಂದೆಯೇ (1969) ತನ್ನ ‘The Sensuous Woman‘ ಕೃತಿಯಲ್ಲಿ ‘…ಅತ್ಯಂತ ಜನಪ್ರಿಯ ಕ್ರೀಡೆಯೆಂದರೆ ರತಿಕ್ರೀಡೆ’ ಎಂದು ಗಟ್ಟಿಗಂಟಲಿನಲ್ಲಿ ಜಗದಗಲಕ್ಕೆ ಸಾರಿದ್ದು.

    ಸಂತಾನೋತ್ಪತ್ತಿಯನ್ನು ಸಾಧ್ಯವಾಗಿಸಲು ಜೀವಿಗಳಲ್ಲಿ ಲೈಂಗಿಕತೆಯನ್ನು ಪ್ರಕೃತಿ ಸೃಷ್ಟಿಸಿದೆ ಎನ್ನಲಾಗುತ್ತದೆ. ಸಂತಾನೋತ್ಪತ್ತಿಯೇ ಏಕೈಕ ಗುರಿಯಾಗಿದ್ದರೆ ಪ್ರಕೃತಿ ಗಂಡು-ಹೆಣ್ಣುಗಳನ್ನು ಪ್ರತ್ಯೇಕವಾಗಿ ಸೃಷ್ಟಿಸುವ ಬದಲು ದ್ವಿಲಿಂಗಿಗಳನ್ನೇಕೆ ಸೃಷ್ಟಿಸಲಿಲ್ಲ ಅಥವಾ ಎರೆಹುಳುಗಳಂತೆ ಗಂಡೇ ಸನ್ನಿವೇಶಕ್ಕನುಗುಣವಾಗಿ ಹೆಣ್ಣಿನ ಪಾತ್ರವನ್ನು ನಿರ್ವಹಿಸುವ ವ್ಯವಸ್ಥೆಯನ್ನೇಕೆ ನಿರ್ವಿುಸಲಿಲ್ಲ ಎನ್ನುವ ಪ್ರಶ್ನೆ ಎದುರಾಗುತ್ತದೆ. ಇಂತಹ ಸುಲಭ ಮಾರ್ಗಗಳನ್ನು ತೊರೆದು ಸಂತಾನೋತ್ಪತ್ತಿಗೆ ಅಗತ್ಯವಾದ ಅಂಶಗಳನ್ನು ವಿಭಾಗಿಸಿ, ಗಂಡು ಹೆಣ್ಣುಗಳಲ್ಲಿ ಹಂಚುವ, ಆ ಅಂಶಗಳು ಸಮ್ಮಿಲನಗೊಳ್ಳಲು ಅಗತ್ಯವಿರುವ ದೇಹರಚನೆಗಳನ್ನು ವಿನ್ಯಾಸಗೊಳಿಸುವ, ಸಮ್ಮಿಲನಕ್ಕೆ ಅಗತ್ಯವಾದ ಲೈಂಗಿಕಾಕರ್ಷಣೆಯನ್ನು ಮೂಡಿಸುವ ಕೊಂಕಣ ಸುತ್ತಿ ಮೈಲಾರಕ್ಕೆ ಹೋಗುವ ಸಂಕೀರ್ಣ ಹಾಗೂ ದೀರ್ಘ ಮಾರ್ಗವನ್ನೇಕೆ ಪ್ರಕೃತಿ ಆಯ್ಕೆ ಮಾಡಿಕೊಂಡಿತು ಎಂಬ ಪ್ರಶ್ನೆಗೆ ಸಮರ್ಪಕ ಉತ್ತರವಿನ್ನೂ ಸಿಕ್ಕಿಲ್ಲ. ಆದರೂ ಅದರ ಪರಿಣಾಮವನ್ನಂತೂ ಜಗತ್ತು ನೋಡುತ್ತಲೇ ಇದೆ, ಅನುಭವಿಸುತ್ತಲೂ ಇದೆ.

    ಲೈಂಗಿಕ ಕ್ರಿಯೆಯ ಮೂಲಕ ತಾನು ತಾಯಿಯಾಗಬಹುದೆಂಬ ನಿರೀಕ್ಷೆ ಅದರ ಬಗ್ಗೆ ಹೆಣ್ಣಿನಲ್ಲಿ ಆಪ್ಯಾಯತೆಯನ್ನುಂಟುಮಾಡುವುದು ಸಹಜವೇ. ಹೀಗಾಗಿಯೇ, ಪ್ರಖ್ಯಾತ ಸ್ತ್ರೀವಾದಿ ಚಿಂತಕಿ, 20ನೆಯ ಶತಮಾನದ 20 ಮಹತ್ವದ ಕೃತಿಗಳಲ್ಲೊಂದಾದ ‘The Female Eunuch‘ ಕೃತಿಯ ಲೇಖಕಿ ಜಮೈನ್ ಗ್ರೀರ್ ಲೈಂಗಿಕ ಕ್ರಿಯೆಯನ್ನು ‘ಡೋನಟ್​ನೊಳಕ್ಕೆ ಜಾಮ್ ಬಳಿಯುವುದು’ ಎಂದು ಕರೆದು, ಹೆಂಗಸರು ಡೋನಟ್​ನ ಪಾತ್ರ ವಹಿಸುವುದರ ಬಗ್ಗೆ ತಿರಸ್ಕಾರ ತೋರಿದರೂ ಜಗತ್ತಿನ ಸ್ತ್ರೀಸಂಕುಲ ಅದನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಅಲ್ಲದೇ ಲೈಂಗಿಕ ಕ್ರಿಯೆಯಲ್ಲಿ ಉತ್ಕರ್ಷಕ್ಕೆ ತಲುಪುವುದು (orgasm) ಗಂಡಿಗಿಂತಲೂ ಹೆಣ್ಣಿಗೆ ದೈಹಿಕವಾಗಿ ಹೆಚ್ಚು ಅಗತ್ಯವಾಗಿರುತ್ತದೆ. ಉತ್ಕರ್ಷಕ್ಕೇರದೇಹೋದಾಗ ಪೆಲ್ವಿಕ್ ಪ್ರದೇಶದಲ್ಲಿ ತುಂಬಿಕೊಂಡ ರಕ್ತ ಸೂಕ್ತ ಕಾಲಮಿತಿಯಲ್ಲಿ ಹಿಮ್ಮುಖವಾಗಿ ಹರಿದುಹೋಗುವುದಿಲ್ಲ. ಸ್ತ್ರೀಯರಲ್ಲಿ ಇದು ಬೆನ್ನುನೋವಿಗೆ ಕಾರಣವಾಗಬಹುದು ಎಂದು ವೈದ್ಯವಿಜ್ಞಾನ ಹೇಳುತ್ತದೆ.

    ಈ ಪ್ರಾಕೃತಿಕ ವಾಸ್ತವಗಳನ್ನು ಅರಿತುಕೊಂಡು, ಸಾಮಾಜಿಕ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸಮಾಜಗಳು ವಿವಾಹ ವ್ಯವಸ್ಥೆಯನ್ನು ರೂಢಿಸಿಕೊಂಡವು ಮತ್ತು ಮುಖ್ಯವಾಗಿ ಪೌರ್ವಾತ್ಯ ಸಮಾಜಗಳು ದೇಹಗಳ ನಡುವೆ ಋಣಾತ್ಮಕ ನೆನಪುಗಳ ವರ್ಗಾವಣೆಯನ್ನು ಸೀಮಿತಗೊಳಿಸಲು ವಿವಿಧ ವಿಧಿಗಳನ್ನೂ ಆಚರಣೆಗೆ ತಂದವು.

    ಆದಾಗ್ಯೂ, ಅರ್ಥಶಾಸ್ತ್ರದಲ್ಲಿ ಬಳಕೆಯಾಗುವ ‘‘Law of diminishing marginal utility’’ ಮತ್ತೊಂದು ದೇಹದ ಸ್ಪರ್ಶದಿಂದ ದೊರೆಯುವ ಸಂತೋಷಕ್ಕೂ ಅನ್ವಯವಾಗುತ್ತದೆ. ಪರಿಚಿತ ದೇಹದ ಸ್ಪರ್ಶದಿಂದ ಮಿದುಳಿನಲ್ಲಿ ಡೋಪಮೀನ್ ಉತ್ಪಾದನೆಯಾಗುವುದು,

    ಅ ಮೂಲಕ ಮನುಷ್ಯನಿಗೆ ಸಂತೋಷದ ಅನುಭವವಾಗುವುದು ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. ಸಂಗಾತಿಗಳು ಪರಸ್ಪರರ ದೈಹಿಕ ಸಾಂಗತ್ಯದಲ್ಲಿ ಆಸಕ್ತಿ ಕಳೆದುಕೊಳ್ಳುವುದು, ಅದೊಂದು ಯಾಂತ್ರಿಕ ಕ್ರಿಯೆಯಂತಾಗಿಬಿಡುವುದು ಈ ಕಾರಣದಿಂದ. ಅದೇ ಸಮಯದಲ್ಲಿ ಬೇರೊಂದು ದೇಹದ ಸಾಂಗತ್ಯ ಹೆಚ್ಚು ಆಕರ್ಷಕವಾಗಿ ಕಾಣತೊಡಗಿ ಮನಸ್ಸು ಅತ್ತ ಸೆಳೆಯಲ್ಪಡತೊಡಗುತ್ತದೆ. ಆದರೆ ಬೇರೆಬೇರೆ ದೇಹಗಳ ಸ್ಪರ್ಶದಿಂದ ನೆನಪುಗಳ ವರ್ಗಾವಣೆಯಾಗುವುದರಿಂದ, ಅದು ಹಾನಿಕಾರಕವಾಗುವ ಸಾಧ್ಯತೆ ಇರುವುದರಿಂದ ಅಂತಹ ಸಂಬಂಧಗಳನ್ನು ಇಲ್ಲವಾಗಿಸುವ ಮಾರ್ಗಗಳಿವೆಯೇ? ನಮ್ಮದೇ ದೇಹದ ಸ್ಪರ್ಶ ನಮಗೊಂದು ಹಾನಿಕಾರಕವಲ್ಲದ ಪರ್ಯಾಯ ಮಾರ್ಗವಾಗಬಲ್ಲದೇ? ಈ ಬಗ್ಗೆ ಆಲೋಚಿಸಿದಾಗ, ಯೋಗ ಮತ್ತು ಪ್ರಾಣಾಯಾಮ ಮಾನವಜನಾಂಗ ಕಂಡುಕೊಂಡ ಒಂದು ಅರ್ಥಪೂರ್ಣ ಬದಲಿ ವಿಧಾನಗಳಿರಬಹುದೆನಿಸುತ್ತದೆ. ಈ ಬಗ್ಗೆ ನಿಮಗೊಂದು ಎಚ್ಚರಿಕೆಯ ಮಾತನ್ನು ಹೇಳಿಯೇ ಮುಂದುವರಿಯಬೇಕು. ಮುಂದೆ ನಾನು ಉಲ್ಲೇಖಿಸಿರುವ ವಿಧಾನಗಳನ್ನು ಪಾಲಿಸಬೇಕೆಂದು ನಿಮಗನಿಸಿದರೆ ಅದಕ್ಕೆ ಮೊದಲು ಸೂಕ್ತ ಗುರುಗಳ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಪ್ರಾರಂಭಿಸುವುದು ಒಳಿತು. ಶಸ್ತ್ರಚಿಕಿತ್ಸೆಗೊಳಗಾದ ದೇಹದ ಅಂಗಗಳ ಮೇಲೆ ಕೆಲ ಯೋಗಾಸನಗಳ ಹಾಗೂ ರಕ್ತದೊತ್ತಡದಂತಹ ಕೆಲವು ಮನೋದೈಹಿಕ ಸಮಸ್ಯೆಗಳ ಮೇಲೆ ಕೆಲ ಪ್ರಾಣಾಯಾಮಗಳ ಪರಿಣಾಮಗಳು ಮತ್ತು ಅನುಸರಿಸಬೇಕಾದ ಎಚ್ಚರಿಕೆಗಳ ಸೂಕ್ತ ಅರಿವಿರುವುದು ಅತ್ಯಂತ ಅಗತ್ಯ.

    ದೇಹದ ಹೊರಭಾಗದ ಚರ್ಮದ ಸ್ಪರ್ಶ ಮತ್ತು ಮಾಂಸಖಂಡಗಳ ಮೇಲಿನ ಒತ್ತಡವನ್ನೊಳಗೊಂಡ ಯೋಗಾಸನಗಳಲ್ಲಿ ನಮ್ಮದೇ ದೇಹದ ಭಾಗಗಳು ನಿರ್ದಿಷ್ಟ ವಿಧಾನದಲ್ಲಿ, ನಿರ್ದಿಷ್ಟ ಅವಧಿಯಲ್ಲಿ ಒಂದನ್ನೊಂದು ರ್ಸ³ಸುತ್ತವೆ ಹಾಗೂ ಆ ಕಾರಣದಿಂದಲೇ ಮಿದುಳನ್ನು ನಿರ್ದಿಷ್ಟ ಬಗೆಯಲ್ಲಿ ಪ್ರಚೋದಿಸುತ್ತವೆ ಮತ್ತು ಮನಸ್ಸಿಗೆ ಸಂತೋಷವನ್ನಷ್ಟೇ ಅಲ್ಲ, ಪ್ರಸನ್ನತೆ ಹಾಗೂ ಶಾಂತಿಯನ್ನೂ ನೀಡುತ್ತವೆ ಮತ್ತು ಅವು ದೀರ್ಘಕಾಲಿಕವೂ ಆಗಿರುತ್ತವೆ. ಈ ಅರ್ಥದಲ್ಲಿ ಮನುಷ್ಯನ ದೇಹ ಮತ್ತು ಮನಸ್ಸುಗಳಿಗೆ ಲೈಂಗಿಕ ಕ್ರಿಯೆಗಿಂತಲೂ ಯೋಗಾಸನ ಹೆಚ್ಚು ಪ್ರಯೋಜನಕಾರಿಯಾಗುತ್ತದೆ. ಅಡ್ಡಪರಿಣಾಮಗಳಂತೂ ಇಲ್ಲವೇ ಇಲ್ಲ!

    ಪ್ರಾಣಾಯಾಮಗಳಿಂದ ಮಿದುಳಿಗೆ ಆಮ್ಲಜನಕದ ಪೂರೈಕೆ ಸಮರ್ಪಕವಾಗುತ್ತದೆ ಎಂಬ ಮಾತು ಪೂರ್ಣ ಸರಿಯಲ್ಲ. ಯಾವುದೇ ಪ್ರಾಣಾಯಾಮದಿಂದ ಮಿದುಳಿಗೆ ತಕ್ಷಣ ಆಮ್ಲಜನಕದ ಪೂರೈಕೆಯಾಗುವುದಿಲ್ಲ. ಅದು ಮೂಗಿನ ಹೊಳ್ಳೆಗಳ ಮೂಲದ ದೇಹವನ್ನು ಪ್ರವೇಶಿಸಿ, ಶ್ವಾಸನಾಳಗಳ ಮೂಲಕ ಶ್ವಾಸಕೋಶಗಳನ್ನು ಪ್ರವೇಶಿಸಿ…, ರಕ್ತದಲ್ಲಿ ಸೇರಿ ಮಿದುಳನ್ನು ಪ್ರವೇಶಿಸಲು ಸಮಯ ಹಿಡಿಯುತ್ತದೆ. ಈ ಕ್ರಿಯೆ ಸಾಮಾನ್ಯ ಉಸಿರಾಟದಿಂದಲೂ ನಡೆಯುತ್ತಲೇ ಇರುತ್ತದೆ. ಪ್ರಾಣಾಯಾಮಗಳ ಮಹತ್ವವಿರುವುದು ದೇಹದ ಒಳಭಾಗಗಳನ್ನು ರ್ಸ³ಸಲು ಗಾಳಿಯನ್ನು ಬಳಸಿಕೊಳ್ಳುವುದರಲ್ಲಿ.

    ಪ್ರಾಣಾಯಾಮ ಮಾಡುವಾಗ ಉಸಿರಾಟದ ಮೇಲೆ ಪೂರ್ಣ ಗಮನ ಮುಖ್ಯ. ಮೂಗಿನ ಹೊಳ್ಳೆಗಳ ಒಳಗೋಡೆಗಳ ಮೇಲೆ ಉಸಿರಾಟದ ಗಾಳಿಯ ಸ್ಪರ್ಶವನ್ನು ಗಮನಕ್ಕೆ ತಂದುಕೊಳ್ಳುವುದು ಮತ್ತು ಅದನ್ನು ಅನುಭವಿಸುವುದು ಬಹಳ ಮುಖ್ಯವಾಗುತ್ತದೆ. ಗಾಳಿಯ ಜತೆ ದೇಹದ ನಡುವಿನ ಅಂಗವಾದ ನಾಲಿಗೆಯ ಸೂಕ್ತ ಬಳಕೆ ಸಹ ಮಿದುಳಿನ ಎರಡೂ ಗೋಲಾರ್ಧಗಳ ಮೇಲೆ ಪ್ರಚೋದನೆ/ಪ್ರಭಾವವನ್ನುಂಟುಮಾಡುತ್ತದೆ. ಸಾಮಾನ್ಯ/ಉದ್ಯೋಗಸ್ಥ ಜನರನ್ನಷ್ಟೇ ಗಮನದಲ್ಲಿಟ್ಟುಕೊಂಡು ಸಾಮಾನ್ಯ ಆರೋಗ್ಯಕ್ಕೆ ಅಗತ್ಯವಾದ ಪ್ರಾಣಾಯಾಮ ಕ್ರಮವನ್ನಷ್ಟೇ ಇಲ್ಲಿ ಉದಾಹರಣೆಯಾಗಿ ತೆಗೆದುಕೊಳ್ಳುತ್ತಿದ್ದೇನೆ.

    ಈ ಕ್ರಮದಲ್ಲಿರುವುದು ಕೇವಲ ಆರು ಪ್ರಾಣಾಯಾಮಗಳು- ಮೊದಲಿಗೆ ನಿಶ್ವಾಸಕ್ಕೆ ಆದ್ಯತೆ ನೀಡುವ ಕಪಾಲಭಾತಿ, ಅಗ್ನಿಸಾರ ಮತ್ತು ಉಡ್ಯಾನ ಬಂಧ; ಮಧ್ಯದಲ್ಲಿ ಉಚ್ವಾಸ ಮತ್ತು ನಿಶ್ವಾಸಗಳೆರಡಕ್ಕೂ ಸಮಾನ ಆದ್ಯತೆ ನೀಡುವ ಅನುಲೋಮ-ವಿಲೋಮ ಮತ್ತು ಉರ್ಜಯೀ; ಹಾಗೂ ಕೊನೆಯಲ್ಲಿ ನಿಶ್ವಾಸಕ್ಕೆ ಆದ್ಯತೆ ನೀಡುವ ಭ್ರಾಮರಿ ಪ್ರಾಣಾಯಾಮಗಳು. ಇವುಗಳಲ್ಲೂ ದೇಹದ ಒಳಭಾಗಗಳನ್ನು ಗಾಳಿಯ ಮೂಲಕ ರ್ಸ³ಸುವುದರ ಬಗೆಗಿನ ನಮ್ಮೀ ಅವಲೋಕನಕ್ಕೆ ನಾನು ಮುಖ್ಯವಾಗಿ ತೆಗೆದುಕೊಳ್ಳುವ ಉದಾಹರಣೆಗಳು ಕೊನೆಯ ಮೂರು ಪ್ರಾಣಾಯಾಮಗಳು.

    ಅನುಲೋಮ-ವಿಲೋಮ/ನಾಡಿಶುದ್ಧಿ ಪ್ರಾಣಾಯಾಮಗಳಲ್ಲಿ ಮೂಗಿನ ಹೊಳ್ಳೆಗಳ ಮೂಲಕ ಗಾಳಿಯ ಪ್ರವೇಶವಾಗುವಾಗ ಅದರ ಮೇಲೆ ಗಮನವಿಟ್ಟು, ಹೊಳ್ಳೆಗಳ ಗೋಡೆಗಳ ಮೇಲಿನ ಗಾಳಿಯ ಸ್ಪರ್ಶವನ್ನು ಅನುಭವಿಸುವುದು ಬಹಳ ಮುಖ್ಯವಾಗುತ್ತದೆ. ಮೂಗಿನ ಎಡ ಹೊಳ್ಳೆಯ ಒಳಗೋಡೆಯ ಮೇಲೆ ಗಾಳಿಯ ಸ್ಪರ್ಶಾನುಭವ ಮಿದುಳಿನ ಬಲ ಗೋಲಾರ್ಧವನ್ನೂ, ಬಲ ಹೊಳ್ಳೆಯ ಒಳಗೋಡೆಯ ಮೇಲಿನ ಗಾಳಿಯ ಸ್ಪರ್ಶಾನುಭವ ಎಡ ಗೋಲಾರ್ಧವನ್ನೂ ಪ್ರಚೋದಿಸುತ್ತವೆ. ಇದು ಈ ಪ್ರಾಣಾಯಾಮದ ತತ್​ಕ್ಷಣದ ಉಪಯೋಗ. ಆಮ್ಲಜನಕ ಮಿದುಳಿಗೆ ತಲುಪುವುದು ನಂತರದ್ದು. ಅದಕ್ಕೆ ಸಮಯ ಹಿಡಿಯುತ್ತದೆ. ಈ ಪ್ರಾಣಾಯಾಮದಿಂದ ಉಪಯೋಗವಾಗಬೇಕಾದರೆ ಹನ್ನೊಂದು ನಿಮಿಷಗಳ ಒಂದು ಚಕ್ರ ಪೂರ್ಣವಾಗುವುದು ಅಗತ್ಯವೆಂದು ಸಾಧಕರ ಅಭಿಮತ. ಒಂದು ಚಕ್ರದಲ್ಲಿ ಮೂಗಿನ ಎರಡೂ ಹೊಳ್ಳೆಗಳ ಒಳ ಗೋಡೆಗಳ ಮೇಲೆ ಗಾಳಿಯ ಸ್ಪರ್ಶಾನುಭವ ಮಿದುಳಿನ ಎರಡೂ ಗೋಲಾರ್ಧಗಳನ್ನು ಪ್ರಚೋದಿಸುವುದು ಸಾಮಾನ್ಯವಾಗಿ ಇಪ್ಪತ್ತೊಂದು ಬಾರಿ ಜರುಗುತ್ತದೆ. ಹೀಗೆ ಆ ದಿನಕ್ಕೆ ಮಿದುಳನ್ನು ಸಿದ್ಧಗೊಳಿಸುವ ಕೆಲಸವನ್ನು ಅನುಲೋಮ-ವಿಲೋಮ ಪ್ರಾಣಾಯಾಮದಿಂದ ಆರಂಭಿಸಿ ಉರ್ಜಯೀ ಪ್ರಾಣಾಯಾಮದಲ್ಲಿ ಮುಂದುವರಿಸಬೇಕು.

    ಉರ್ಜಯೀ ಪ್ರಾಣಾಯಾಮದಲ್ಲಿ ಗಾಳಿ ಮೂಗಿನ ಹೊಳ್ಳೆಗಳ ಜತೆ ಶ್ವಾಸನಾಳದಲ್ಲೂ ಸಾಗುವ ಮತ್ತು ಹೊರಬರುವ ಸ್ಪರ್ಶದ ಅನುಭವವಾಗುತ್ತದೆ, ಆಗಲೇಬೇಕು. ಈ ಅನುಭವ ಸ್ಪಷ್ಟವಾಗಲೆಂದೇ ಉಚ್ವಾಸ-ನಿಶ್ವಾಸದ ಸಮಯದಲ್ಲಿ ಗಂಟಲಿನಲ್ಲಿ ಕಂಪನವಾಗುವಂತೆ ಅಂದರೆ ಸಣ್ಣನೆಯ ಗೊರಗೊರ ಶಬ್ದವಾಗುವಂತೆ ನೋಡಿಕೊಳ್ಳಬೇಕು. ಜತೆಗೆ ನಾಲಿಗೆಯನ್ನು ಮೇಲೆತ್ತಿ ಬಾಯಿಯ ಮೇಲ್ಭಾಗಕ್ಕೆ ಒತ್ತಿಹಿಡಿಯಬೇಕು. ಇದನ್ನು ನಾವು ಎಳೆಯ ಮಕ್ಕಳಿಂದ ಕಲಿಯಬಹುದು. ಹಸುಗೂಸುಗಳಾಗಿದ್ದಾಗ ನಾವೆಲ್ಲರೂ ಈ ಬಗೆಯ ಉಸಿರಾಟದೊಂದಿಗೇ ನಿದ್ರಿಸಿದ್ದೇವೆ ಮತ್ತು ಅದು ಅತ್ಯಂತ ಸುಖದಾಯಕ, ಆರಾಮದಾಯಕ ಹಾಗೂ ಚೈತನ್ಯದಾಯಕ ನಿದ್ದೆ ಎಂದು ಸಾಬೀತಾಗಿದೆ. ಬೆಳೆದ ಮೇಲೆ ಆ ಬಗೆಯ ಉಸಿರಾಟವನ್ನು ಉರ್ಜಯೀ ಪ್ರಾಣಾಯಾಮದ ಮೂಲಕ ಮಾಡುವುದರಿಂದ ಮಿದುಳಿನ ಎರಡೂ ಭಾಗಗಳನ್ನು ಸಶಕ್ತಗೊಳಿಸಬಹುದು. ದೇಹದ ನಡುವೆ ಇರುವ ಶ್ವಾಸನಾಳ ಮತ್ತು ನಾಲಿಗೆ ಏಕಕಾಲದಲ್ಲಿ ಬಳಕೆಯಾಗುವ ಈ ಪ್ರಾಣಾಯಾಮದಲ್ಲಿ ಬಾಯಿಯ ಮೇಲ್ಭಾಗದ ನಟ್ಟನಡುವಿನ ಸ್ಥಳ ಅಂದರೆ ತಾಲೂವನ್ನು ರ್ಸ³ಸುವುದರಿಂದ ಮಿದುಳಿನ ನಡುವೆ ಸ್ಥಿತಗೊಂಡಿರುವ, ಮೂರನೆಯ ಕಣ್ಣು ಅಥವಾ ಜ್ಞಾನನೇತ್ರ ಎಂದು ವರ್ಣಿತಗೊಳ್ಳುವ ಪೀನಿಯಲ್ ಗ್ಲಾಂಡ್ ಸಹ ಪ್ರಚೋದನೆಗೊಳ್ಳುತ್ತದೆ. ಇದರಿಂದಾಗಿಯೇ ಉರ್ಜಯೀ ಪ್ರಾಣಾಯಾಮ ಮಿದುಳನ್ನು ಧನಾತ್ಮಕವಾಗಿ ಪ್ರಚೋದಿಸುವುದರಲ್ಲಿ ಸರ್ವಶ್ರೇಷ್ಠ ಪ್ರಾಣಾಯಾಮವೆಂದು ಬಣ್ಣಿತಗೊಂಡಿರುವುದು.

    ಕೊನೆಯ ಭ್ರಾಮರಿ ಪ್ರಾಣಾಯಾಮದಲ್ಲೂ ನಾಲಿಗೆಯ ಬಳಕೆಯಾಗುತ್ತದೆ. ಅದು ಹಿಮ್ಮುಖವಾಗಿ ಮಡಿಚಿಕೊಂಡು ತಾಲೂವನ್ನು ರ್ಸ³ಸುತ್ತದೆ. ನಾಲಿಗೆ ಇಂತಹ ಸ್ಥಿತಿಯಲ್ಲಿರುವಾಗ, ಭ್ರಮರದ ಶಬ್ದವನ್ನು ಅನುಕರಿಸಿ ಗಾಳಿಯನ್ನು ಹೊರಹಾಕಿದರೆ ನಾಲಿಗೆಯ ಮುಂಭಾಗ ಕಂಪನಗೊಂಡು ಅಲ್ಲಿ ವಿಶಿಷ್ಟ ಸಂವೇದನೆ ಉತ್ಪತ್ತಿಯಾಗುತ್ತದೆ. ಆ ಕಂಪನ ಪೀನಿಯಲ್ ಗ್ರಂಥಿಯನ್ನು ಪ್ರಚೋದಿಸುವುದರಲ್ಲಿ ಮತ್ತಷ್ಟು ಪರಿಣಾಮಕಾರಿ ಪಾತ್ರ ನಿರ್ವಹಿಸುತ್ತದೆ.

    ಹೀಗೆ ಈ ಆರು ಪ್ರಾಣಾಯಾಮಗಳನ್ನು ಸರಿಯಾಗಿ ಮಾಡಿ, ಗಾಳಿಯ ಮೂಲಕ ಆಂತರಿಕ ಸ್ಪರ್ಶವನ್ನು ಅನುಭವಕ್ಕೆ ತಂದುಕೊಂಡು ಮಿದುಳನ್ನು ಇಡಿಯಾಗಿ ಪ್ರಚೋದಿಸಿ ದಿನವನ್ನು ಆರಂಭಿಸುವುದು ಅಂದಿನ ಕೆಲಸಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸಲು ಮನಸ್ಸನ್ನು ಸಿದ್ಧಗೊಳಿಸುವ ಸೂಕ್ತ ಮಾರ್ಗ. ಇದರ ಜತೆಗೆ ನಮ್ಮದೇ ಸ್ಪರ್ಶವನ್ನು ಅನುಭವಿಸುವ, ಆ ಮೂಲಕ ಮತ್ತೊಂದು ದೇಹದ ಸ್ಪರ್ಶದ ಅಗತ್ಯ ನಮಗಾಗದಂತೆ ಮಾಡುವ ಇನ್ನೂ ಕೆಲವು ವಿಧಾನಗಳಿವೆ. ಗಾಯತ್ರಿ ಮಂತ್ರ ಜಪಿಸುವಾಗ ಎಣಿಕೆಗಾಗಿ ಜಪಮಣಿಯನ್ನು ಬಳಸದೇ, ಆ ಎಣಿಕೆಗೇ ಸೂಚಿಸಲಾಗಿರುವ ಬೆರಳುಗಳ ಭಾಗಗಳನ್ನು ಕ್ರಮವಾಗಿ ರ್ಸ³ಸುತ್ತಾ ಹೋಗುವುದು ಒಳ್ಳೆಯ ಮಾರ್ಗ. ಲೇಖನದ ಮಿತಿ ಗಮನದಲ್ಲಿಟ್ಟುಕೊಂಡು ‘ಸದ್ಯಕ್ಕೆ’ ಕೊನೆಯ ಮಾತು ಹೇಳುವುದಾದರೆ, ವಿರುದ್ಧ ಲಿಂಗಿಯ ದೇಹಸ್ಪರ್ಶದ ಅಗತ್ಯವನ್ನು ಇಲ್ಲವಾಗಿಸುವ ಅಥವಾ ಕಡಿಮೆಗೊಳಿಸುವ, ಸೂಕ್ತ ಸಮಯದಲ್ಲಷ್ಟೇ ಅದನ್ನು ಜಾಗೃತಗೊಳಿಸುವ ಮೂಲಬಂಧವನ್ನು ಮನುಷ್ಯ ತನ್ನ ದಿನಚರಿಯ ಭಾಗವನ್ನಾಗಿಸಿಕೊಳ್ಳಬಹುದು. ಮೇಲೆ ಉಲ್ಲೇಖಿಸಿರುವ ಪ್ರಾಣಾಯಾಮ ಕ್ರಮದಲ್ಲಿ ಉಡ್ಯಾನ ಬಂಧ ಮತ್ತು ಅನುಲೋಮ-ವಿಲೋಮದ ನಡುವೆ ‘ಮೂಲಬಂಧ’ವನ್ನು ಸೇರಿಸಿಕೊಳ್ಳಬಹುದು. ಮೂಲಬಂಧ ಮನುಷ್ಯದೇಹದ ವಿಸರ್ಜನಾಂಗಗಳು ಮತ್ತು ಲೈಂಗಿಕಾಂಗಗಳಲ್ಲಿ ತಲೆದೋರಿರುವ ಸಮಸ್ಯೆಗಳನ್ನು ದೂರ ಮಾಡುವುದಲ್ಲದೇ ಲೈಂಗಿಕಾಸಕ್ತಿಯ ಅತಿರೇಕಗಳು ಮನಸ್ಸಿನಲ್ಲಿ ಮೂಡದಂತೆಯೂ, ಮೂಡಿದರೂ ಅವು ಮನಸ್ಸನ್ನು (ಅಂದರೆ ಮನುಷ್ಯನನ್ನು) ತಮ್ಮ ಹತೋಟಿಗೆ ತೆಗೆದುಕೊಳ್ಳದಂತೆ, ಆ ಮೂಲಕ ಅನ್ಯದೇಹದಿಂದ ಋಣಾತ್ಮಕ ನೆನಪುಗಳು ವರ್ಗಾವಣೆಗೊಳ್ಳದಂತೆ ಮಾಡುತ್ತದೆ.

    ಪ್ರಾಚೀನ ಋಷಿಮುನಿಗಳಂತೆ ಇಂದೂ ಸಾಧುಸಂತರು, ಸಾಧಕರು ಈ ವಿಧಾನಗಳ ಸೂಕ್ತ ಆಚರಣೆಗಳಿಂದಲೇ ಏಕಾಂಗಿಯಾಗಿ ಬದುಕು ಕಳೆಯುತ್ತಾರೆ, ಅವರ ದೇಹಗಳಿಗೆ ಅನ್ಯ ದೇಹಗಳಿಂದ ಋಣಾತ್ಮಕ ನೆನಪುಗಳು ವರ್ಗಾವಣೆಯಾಗುವುದಿಲ್ಲ, ಪರಿಣಾಮವಾಗಿ ಅವರೆಂದೂ ಸಂತೋಷ, ನೆಮ್ಮದಿ ಕಳೆದುಕೊಳ್ಳುವುದಿಲ್ಲ, ಅನಗತ್ಯವಾದ ಹೊಸ ಹೊಸ ಋಣಾನುಬಂಧಗಳನ್ನು ಸೃಷ್ಟಿಸಿಕೊಳ್ಳುವುದೂ ಇಲ್ಲ. ಈ ಯೋಗಿಕ ಕ್ರಿಯೆಗಳಿಂದ ಅವರಿಗೆ ದೀರ್ಘಕಾಲಿಕ ಸಂತೋಷ ಮತ್ತು ಶಾಂತಿ ದೊರೆಯುತ್ತಲೇ ಇರುತ್ತವೆ ಮತ್ತು ಋಣಾನುಬಂಧಗಳು ಏರ್ಪಡದ ಕಾರಣ ಜನ್ಮಜನ್ಮಗಳ ಬಂಧನದಿಂದ ಅವರು ಶೀಘ್ರವಾಗಿ ಹೊರಬಂದು ಮುಕ್ತಿಮಾರ್ಗದತ್ತ ಸಾಗುತ್ತಾರೆ, ಮಾನವಜನ್ಮದ ಉದ್ದೇಶ ಹೀಗೆ ಸಾರ್ಥಕವಾಗುತ್ತದೆ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts