More

    ಏಕರೂಪ ನಾಗರಿಕ ಕಾನೂನು ಜಾರಿಗೆ ಸಹಿ ಸಂಗ್ರಹ

    ಚಿಕ್ಕಮಗಳೂರು: ಏಕರೂಪ ನಾಗರಿಕ ಕಾನೂನು ಜಾರಿಗೆ ಒತ್ತಾಯಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಆಜಾದ್‌ಪಾರ್ಕ್‌ನಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಿದರು.

    ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚನೆ ಮಾಡಿ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಸಿಗಬೇಕು ಎಂದು ಉದ್ದೇಶಿಸಿದ್ದಾರೆ. ದೆೇಶದಲ್ಲಿ ಪ್ರತ್ಯೇಕ ಕಾನೂನು ಹೊಂದಿದರೆ ಏಕತೆ ಮತ್ತು ಭದ್ರತೆಗೆ ಧಕ್ಕೆಯಾಗುವುದರಿಂದ ಏಕರೂಪ ನಾಗರಿಕ ಕಾನೂನು ದೇಶದಲ್ಲಿ ಜಾರಿಗೊಳಿಸಬೇಕು ಎಂದರು.
    ಸ್ವಾತಂತ್ರ್ಯವಿಲ್ಲದ ಮಹಿಳೆಯರು ಶೋಷಣೆ ಅನುಭವಿಸುತ್ತಿದ್ದಾರೆ. ಮುಸ್ಲಿಂ ಧರ್ಮ ಲಾ ಬೋರ್ಡ್ ಕ್ರಿಮಿನಲ್ ಕಾನೂನುಗಳನ್ನು ಒಪ್ಪುವುದಿಲ್ಲ. ಅವುಗಳ ಪಾಲನೆ ಯಾಕೆ ಮಾಡುತ್ತಿಲ್ಲ. ಏಕರೂಪ ನಾಗರಿಕ ಕಾನೂನು ಜಾರಿಗೆ ತಂದರೆ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಬಹುದು ಎಂದು ತಿಳಿಸಿದರು.
    ಭಾರತದಲ್ಲಿ ಅಂಬೇಡ್ಕರ್ ರಚಿಸಿದ ಸಂವಿಧಾನದ ಕಾನೂನು ಜಾರಿಯಲ್ಲಿರಬೇಕು. ಆ ನಿಟ್ಟಿನಲ್ಲಿ ಏಕರೂಪ ನಾಗರಿಕ ಕಾನೂನು ಜಾರಿಗೆ ಒತ್ತಾಯಿಸಿ ರಾಜ್ಯಾದ್ಯಂತ ಸಹಿ ಸಂಗ್ರಹ ಅಭಿಯಾನ ಕೈಗೊಳ್ಳಲಾಗಿದೆ. ಈ ಸಂಬಂಧ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಯನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.
    ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ದಶಕದ ಸಮೀಪವಿದೆ. ಪ್ರಣಾಳಿಕೆಯಲ್ಲಿ ಏಕರೂಪ ನಾಗರಿಕ ಕಾನೂನು ಭರವಸೆ ನೀಡಿತ್ತು. ಅದರಂತೆ ಅಧಿವೇಶನದೊಳಗೆ ಮಸೂದೆ ಅನುಮೋದನೆ ಪಡೆದು ಕಾನೂನು ಜಾರಿಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
    ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ, ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಸಮಸ್ತ ವಿಶ್ವಧರ್ಮ ಸಂಸ್ಥಾನ ಸಂಸ್ಥಾಪಕ ಸಂಜಿತ್ ಸುವರ್ಣ, ಅರ್ಚಕ ರಾಜೇಂದ್ರಗುರು, ವಂದೇ ಮಾತರಂ ಟ್ರಸ್ಟ್ ಅಧ್ಯಕ್ಷ ಪ್ರೀತೇಶ್, ಮುಖಂಡರಾದ ಜ್ಞಾನೇಂದ್ರ, ನವೀನ್, ತೇಜಸ್, ಶರತ್, ನವೀನಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts